ಸೋಲಿನ ಭೀತಿಯಿಂದ ಕಾಂಗ್ರೆಸ್‌ ಗೂಂಡಾಗಿರಿ


Team Udayavani, Mar 22, 2017, 1:12 PM IST

mys2.jpg

ಮೈಸೂರು: ಸೋಲಿನ ಭೀತಿಯಿಂದ ಕಾಂಗ್ರೆಸ್‌ ಆಡಳಿತ ದುರುಪಯೋಗ ಪಡಿಸಿ ಕೊಳ್ಳುತ್ತಿರು ವುದಲ್ಲದೆ, ಗೂಂಡಾಗಿರಿ ಮಾಡುತ್ತಿರುವುದರಿಂದ ನಿಷ್ಪ$ಕ್ಷಪಾತ ಚುನಾವಣೆ ನಡೆಸಲು ಎರಡೂ ಕ್ಷೇತ್ರಗಳಿಗೆ ಅರೆ ಸೇನಾಪಡೆ ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರು ವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲಿನ ಭೀತಿ ಶುರು ವಾಗಿರು ವುದರಿಂದ ಹತಾಶರಾಗಿ ಕಾರ್ಯಕರ್ತರ ಮೂಲಕ ಬಿಜೆಪಿ ಬೆಂಬಲಿಗರನ್ನು ಗುರಿ ಯಾಗಿಸಿ ಕೊಂಡು ಗೂಂಡಾಗಿರಿ ಮಾಡಿಸುತ್ತಾ, ಬಿಜೆಪಿ ಕಾರ್ಯ ಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಎರಡೂ ಕ್ಷೇತ್ರಗಳಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತಂದಿ ದ್ದೇವೆ. ಎರಡೂ ಕ್ಷೇತ್ರಗಳಿಗೆ ಅರೆ ಸೇನಾಪಡೆ ನಿಯೋ ಜನೆ ಮಾಡುವಂತೆ ಕೋರಿದ್ದೇವೆ ಎಂದರು. 

ಕ್ಷಮೆಯಾಚಿಸಲಿ: ಎಂ. ಮಹದೇವು ಬದುಕಿದ್ದಾಗ ಅವರ ಕುತ್ತಿಗೆಪಟ್ಟಿ ಹಿಡಿದು ಎಳೆ ದಾಡಿ ಅವಮಾನ ಮಾಡಿದ್ದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ಮಹದೇವು ಕುಟುಂಬದ ಬೆಂಬಲಪಡೆಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. 

ಮೂರ್ಖತನ: ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯದ ಸಚಿವರು ನೂರಾರು ಕೋಟಿ ರೂ, ಕಪ್ಪ ಕಾಣಿಕೆ ನೀಡಿರುವುದಾಗಿ ತಾವು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಗೋವಿಂದರಾಜು ಮನೆಯಲ್ಲಿ ಸಿಕ್ಕಿರುವ ಡೈರಿ  ನಕಲಿ ಎಂದು ವಿಧಿವಿಜಾnನ ಪ್ರಯೋಗಾಲಯ ವರದಿ ನೀಡಿದೆ ಎನ್ನುವುದು ಮೂರ್ಖತನದ ಪರಮಾವಧಿ. 

ಈ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ತಲೆ ಬುಡವಿಲ್ಲದ ರೀತಿ ಮಾತನಾಡು ತ್ತಿದ್ದಾರೆ. ಸ್ಟೀಲ್‌ಬಿಡ್ಜ್ ಕಾಮಗಾರಿ ಗುತ್ತಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರ ಕುಟುಂಬ ಸದಸ್ಯರಿಗೆ 65 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿರುವುದು ಗೋವಿಂದರಾಜು ಡೈರಿಯಲ್ಲಿ ಉಲ್ಲೇಖವಾಗಿದೆ. ಇದರಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಅವರಿಗೆ ತಾಕತ್ತಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.

ಟಾಪ್ ನ್ಯೂಸ್

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

10-2

Kannada literature: ಕನ್ನಡ ಸಾಹಿತ್ಯಕ್ಕೆ ಆಗಬೇಕಾದದ್ದು ಬಹಳ: ಭವಿಷ್ಯ ಉಜ್ವಲ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

Hubli: ಕಾಂಗ್ರೆಸ್‌ನವರಿಂದ ಹಾವು ತೋರಿಸಿ ಹೆದರಿಸುವ ಕೆಲಸ: ಶಾಸಕ ರಾಜುಗೌಡ

Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್‌ ಬ್ಯೂಟಿ ಆಲಿಯಾ?

Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್‌ ಬ್ಯೂಟಿ ಆಲಿಯಾ?

Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ

Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-hunsur

Hunsur: ಕಾರು, ಬೈಕ್, ಸೈಕಲ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರ ಬಂಧನ

9-hunsur

Hunsur: ಕಾರುಗಳ ಮುಖಾಮುಖಿ ಡಿಕ್ಕಿ; ಒರ್ವ ಸಾವು, ಐವರಿಗೆ ಗಾಯ

Mysuru-Nirmala

Mysuru:’ಕರ್ನಾಟಕದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

13

Kala Sampada: ಹಿಂದೂಸ್ತಾನಿ ಕಛೇರಿಗಳ ಸಂಗೀತ ಹಬ್ಬ ಸ್ವರಸ್ವಾದ್‌

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

BBK11: ಎಲಿಮಿನೇಷನ್‌ ವಿಚಾರದಲ್ಲಿ ಬಿಗ್‌ ಟ್ವಿಸ್ಟ್..‌ ಈ ವಾರ ಆಚೆ ಬರುವುದು ಯಾರು?

12-

Yakshotsava: ವಿಟ್ಲ ಯಕ್ಷೋತ್ಸವದಲ್ಲಿ ಮಿಂಚಿದ ಬಾಲ ಪ್ರತಿಭೆಗಳು

11-

Kala Sampada: ಅತ್ಯಪೂರ್ವವಾಗಿ ಮೂಡಿಬಂದ “ತ್ರಿ-ಸಂಗಮ’ ನೃತ್ಯ ಪ್ರದರ್ಶನ

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Team India; ಗಂಭೀರ್ ಕೋಚ್‌ ಹುದ್ದೆಯ ಮೇಲೆ ತೂಗುಗತ್ತಿ:‌ ವಿವಿಎಸ್‌ ಗೆ ಪಟ್ಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.