ಕಿಟ್ಟಾಳುಗಳ ವಂಚನೆ, ಕಟ್ಟಾಳುಗಳ ಪರದಾಟ
Team Udayavani, Nov 25, 2017, 8:48 AM IST
ಮೈಸೂರು: ಕನ್ನಡದ ಸೇವೆ ಮಾಡುತ್ತೇವೆಂದು ಹೇಳಿಕೊಂಡ ಕೆಲವು “ಕಿಟ್ಟಾಳು’ಗಳು (ಕಿಟ್ ಮತ್ತು ಒಒಡಿ ಫಾರಂ ಪಡೆದು ಊರು ಸುತ್ತೋರು) ಸೇವೆ ಮರೆತು ವಂಚನೆ ಮಾಡುತ್ತಿರುವುದು ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾತರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಮುಂದುವರಿದಿದೆ.
ಇದಕ್ಕೆ ಈ ಬಾರಿಯ ಸಮ್ಮೇಳನದ ಮೊದಲ ದಿನದ ಆರಂಭದ ಘಳಿಗೆಯೇ ಸಾಕ್ಷಿಯಾಯಿತು. ಸಮ್ಮೇಳನಕ್ಕೆ ಆಗಮಿಸಿದ್ದ ಕೆಲವು ನೋಂದಾಯಿತ ಪ್ರತಿನಿಧಿಗಳು ತಮಗೆ ಸಮ್ಮೇಳನದ ಕಿಟ್ ಸಿಗಲಿಲ್ಲವೆಂದು ಒಂದು ಕಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೂಂದೆಡೆ ಕಿಟ್‌ಗಳೇ ಖಾಲಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗಾದರೆ, ಮೊದಲೇ ತಂದಿರಿಸಿದ್ದ ಈ ಕಿಟ್‌ಗಳು ಹೋಗಿದ್ದಾದರೂ ಎಲ್ಲಿಗೆ ಎಂದು ಹುಡುಕಹೊರಟರೆ ಕಿಟ್ಟಾಳುಗಳ ವಂಚನೆಯ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ.
ಆಗಿದ್ದೇನು?: ಸಮ್ಮೇಳನದ ಸ್ವಾಗತ ಸಮಿತಿ ಗುರುವಾರವೇ ಸುಮಾರು 15 ಸಾವಿರ ಸಮ್ಮೇಳನದ ಕಿಟ್‌ಗಳನ್ನು ಸಿದ್ಧಪಡಿಸಿತ್ತು. ಈ ಎಲ್ಲಾ ಕಿಟ್‌ಗಳಲ್ಲೂ ಒಒಡಿ ಫಾರಂ ಮತ್ತಿತರ ವಸ್ತುಗಳನ್ನು ಇರಿಸಲಾಗಿತ್ತು. ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ, ಗಡಿನಾಡು ಮತ್ತು ಹೊರರಾಜ್ಯದ ಪ್ರತಿನಿಧಿಗಳು ಬಂದಿದ್ದಾರೆ. ಕಸಾಪ ಪ್ರಕಾರ, ಸುಮಾರು 12,500 ಪ್ರತಿನಿಧಿಗಳು ತಮ್ಮ ಹೆಸರು ನೋಂದಾಯಿಸಿದ್ದು, ಅವರಿಗೆ ಕಿಟ್‌ಗಳನ್ನು ಕೊಡಬೇಕಿತ್ತು. ಆದರೂ, ಹೊಸದಾಗಿ ನೋಂದಣಿಯಾದವರಿಗೂ ಕಿಟ್‌ಗಳನ್ನು ಕೊಡುವ ಉದ್ದೇಶದಿಂದ 2,500ಕ್ಕೂ ಅಧಿಕ ಕಿಟ್‌ಗಳನ್ನು ಸಿದ್ಧಪಡಿಸಲಾಗಿತ್ತು.
ಗುರುವಾರ ಸಂಜೆಯೇ ಬಂದ ಪ್ರತಿನಿಧಿಗಳಿಗೆ ಕಿಟ್‌ಗಳನ್ನು ವಿತರಿಸಲು ಸಮ್ಮೇಳನದ ಆಯೋಜಕರು ವ್ಯವಸ್ಥೆ ಮಾಡಿದ್ದರು. ಈ ವೇಳೆ ಹಲವರು ಐದಾರು ನೋಂದಣಿ ರಶೀದಿಗಳನ್ನು ತಂದು ಐದಾರು ಕಿಟ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವರು ಮೂರ್‍ನಾಲ್ಕು ಕಿಟ್‌ಗಳನ್ನು ತೆಗೆದು ಕೊಂಡು ಹೋಗಿದ್ದಾರೆ. ಅಂದರೆ ಕಿಟ್ ಪಡೆದವರು ಕೆಲವರಾದರೆ, ಸಮ್ಮೇಳನಕ್ಕೆ ಬರದೇ ಮನೆಗಳಲ್ಲಿ ಕುಳಿತುಕೊಂಡವರೂ ಕಿಟ್‌ಗಳನ್ನು ಪಡೆದಿದ್ದಾರೆ. ನಿಜವಾಗಿಯೂ ಕನ್ನಡ ಸೇವೆಗೆಂದು ಬಂದವರಿಗೆ ಕಿಟ್ಟೂ ಸಿಕ್ಕಿಲ್ಲ, ಒಒಡಿ ಫಾರಮ್ಮೂ ಕೈಸೇರಿಲ್ಲ.
ಚಂಪಾ ಸರ್ವಾಧ್ಯಕ್ಷರ ಭಾಷಣ ಮಾಡುತ್ತಿದ್ದಾಗಒಒಡಿ ಸಿಗದ ನೌಕರರು ಪ್ರತಿಭಟನೆ ಮಾಡತೊಡಗಿದರು. ಮೂರು ನಿಮಿಷ ಭಾಷಣ ನಿಂತಿತ್ತು. ನಂತರ ಕಸಾಪದಿಂದಲೇ ಶನಿವಾರ ಈ ಸಮಸ್ಯೆ ಸಂಪೂರ್ಣ ವಾಗಿ ಬಗೆಹರಿಸುವುದಾಗಿ ಭರವಸೆ ಸಿಕ್ಕಿತು.
ಆಗುತ್ತಿರುವುದೇನು?: ಸಮ್ಮೇಳನದ ಆರಂಭದಲ್ಲೇ ಕಿಟ್ ಪಡೆದ ಕೆಲವರು ಸಮ್ಮೇಳನದಲ್ಲಿ ಒಂದೆರಡು ಗಂಟೆ ಕಾಣಿಸಿಕೊಂಡು ಮೈಸೂರು ಸುತ್ತಲು ಹೋಗಿದ್ದಾರೆ. ಇನ್ನೂ ಕೆಲವರು ಸಮ್ಮೇಳನಕ್ಕೆ ಹೋದ ತಮ್ಮ ಸ್ನೇಹಿತರ ಕೈನಲ್ಲಿ ನೋಂದಣಿ ರಶೀದಿಕೊಟ್ಟು
ಒಒಡಿ ಫಾರಂ ಇರುವ ಕಿಟ್ ತರಿಸಿಕೊಂಡು ಪುಕ್ಕಟೆಯಾಗಿ ಎರಡು ದಿನ ರಜೆ ಗಳಿಸುತ್ತಿದ್ದಾರೆ. ಮೈಸೂರಿನಲ್ಲಿ ಎರಡು ದಿನ ಸ್ಥಳೀಯ ರಜೆ ಘೋಷಣೆ ಮಾಡಿದ್ದು ಇದು ಅಲ್ಲಿನ ನೌಕರರಿಗೆ ಅನ್ವಯವಾಗುವುದಿಲ್ಲ.
ಕಸಾಪದಿಂದ 15 ಸಾವಿರ
ಸಮ್ಮೇಳನದ ಕಿಟ್ ಸಿದ್ಧಪಡಿಸಿ ದ್ದೇವೆ. ನೋಂದಣಿಯಾದವರು 12,500 ಮಂದಿ ಮಾತ್ರ. ಆದರೂ ನೋಂದಾಯಿತ ಪ್ರತಿನಿಧಿಗಳಿಗೆ ಕಿಟ್ ಸಿಗಲಿಲ್ಲವೆಂದರೆ ಅದು ವ್ಯವಸ್ಥೆಯ ಲೋಪವೇ.
● ಜಯಪ್ಪ ಹೊನ್ನಾಳಿ, ಪ್ರಧಾನ ಕಾರ್ಯದರ್ಶಿ, ಕಸಾಪ, ಮೈಸೂರು.
ಸಂಪತ್ ತರೀಕೆರೆ’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಡುಬಿದ್ರಿ,ಮಲ್ಪೆ,ಕುಂದಾಪುರ,ಹಂಗಾರಕಟ್ಟೆ ಸಹಿತ ರಾಜ್ಯದ 12 ಬಂದರುಗಳಿಗೆ ಹೈಟೆಕ್ ಸ್ಪರ್ಶ?
“ಕರಾಳ’ ಎಂಇಎಸ್‌ಗೆ ಹೈಕೋರ್ಟ್ ನೋಟಿಸ್; ನಿಲುವು ಸ್ಪಷ್ಟಪಡಿಸಲು ಎಂಇಎಸ್‌ಗೆ ಸೂಚನೆ
BJP: ವಿಜಯೇಂದ್ರ ವಿರುದ್ಧ ಈಗ ತಟಸ್ಥ ಬಣವೂ ಬಂಡಾಯ
ಸಿದ್ದು ಮುಂದೆ ಯಾರನ್ನೋ “ಸಿಎಂ’ ಅನ್ನೋದು ಅಪಮಾನ: ಸಿ.ಟಿ. ರವಿ
ವಿಟಿಯುನಲ್ಲಿ ಇಂಟರ್ನ್ ಶಿಪ್ ಬದಲು ಕೌಶಲಾಭಿವೃದ್ಧಿ ಕೋರ್ಸ್!
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್