![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-415x272.jpg)
ತಂಬಾಕು ಬೆಳೆ ನಿಷೇಧಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ : ಡಾ.ಡಿ.ದಾಮೋದರ ರೆಡ್ಡಿ
Team Udayavani, Sep 2, 2021, 10:53 AM IST
![2-2](https://www.udayavani.com/wp-content/uploads/2021/09/2-2-620x372.jpg)
ಹುಣಸೂರು : ತಂಬಾಕು ಬೆಳೆ ನಿಷೇಧಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲವೆಂದು ರಾಜಮಂಡ್ರಿಯ ಐಸಿಎಆರ್‌ನ ಸೆಂಟ್ರಲ್ ಟೊಬ್ಯಾಕೋ ರೀಸರ್ಚ್ ಇನ್ಸ್ ಟಿಟ್ಯೂಟ್ ನ ನಿರ್ದೇಶಕ ಡಾ.ಡಿ.ದಾಮೋದರ ರೆಡ್ಡಿ ತಿಳಿಸಿದರು.
ಹುಣಸೂರು ತಾಲೂಕಿನಲ್ಲಿ ತಂಬಾಕು ಬೆಳೆವ ವಿವಿಧ ಪ್ರದೇಶಗಳಲ್ಲಿ ರೈತರ ಜಮೀನಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ರೈತರಲ್ಲಿ ತಂಬಾಕು ನಿಷೇಧದ ಕುರಿತು ಹಲವು ಅನುಮಾನಗಳಿವೆ. ಆದರೆ ಅಂತಹ ಯಾವುದೇ ಆಲೋಚನೆ ಸರ್ಕಾರದ ಮಟ್ಟದಲ್ಲಿಲ್ಲ. ರೈತರು ಆತಂಕಪಡಬೇಕಿಲ್ಲ. ಆದರೆ ಕೇಂದ್ರ ಸರ್ಕಾರ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಇನ್ನಿತರ ಬೇಡಿಕೆಯುಳ್ಳ ಮತ್ತು ವಾಣಿಜ್ಯ ಬೆಳೆಗಳಾದ ಅಡುಗೆ ಎಣ್ಣೆ, ಮೆಣಸು, ಕ್ಯಾಸ್ಟರ್ ಆಯಿಲ್, ಶುಂಠಿ, ಅರಿಶಿನ ಮುಂತಾದ ಬೆಳೆಗಳ ರಫ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೈತರು ಇಂತಹ ಬೆಳೆಗಳನ್ನು ಬೆಳೆಯಲು ವಿವಿಧ ಯೋಜನೆಗಳ ಮೂಲಕ ಉತ್ತೇಜಿಸುತ್ತಿದೆ ಎಂದರು.
ಇದನ್ನೂ ಓದಿ : ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ : ಉಗ್ರ ಪಡೆಗೆ ಮುಲ್ಲಾ ಹಿಬತುಲ್ಲಾ ಅಖುಂಡಜಾದ ನಾಯಕ.!
ಗುಣಮಟ್ಟದ ಬೆಳೆ ಬಂದಿದೆ :
ಈ ಬಾರಿ ಕರ್ನಾಟಕದಲ್ಲಿ ರೈತರು ಉತ್ತಮ ಗುಣಮಟ್ಟದ ತಂಬಾಕು ಬೆಳೆಯನ್ನು ಬೆಳೆದಿದ್ದಾರೆ. ಹುಣಸೂರು ಉಪವಿಬಾಗ ವ್ಯಾಪ್ತಿಯಲ್ಲಿ ಸಿಟಿಆರ್ ಐ ಸಂಶೋಧನೆ ನಡೆಸಿರುವ ಎಫ್ ಸಿಎಚ್ 222 ತಂಬಾಕು ತಳಿಯ ಕುರಿತು ಈ ಭಾಗದ ರೈತರು ಉತ್ತಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದು, ಯಾವುದೇ ರೋಗ ಬಾಧೆಯಿಲ್ಲದ ತಳಿ ಇದಾಗಿದೆ ಎಂದು ತಾವು ಜಮೀನಿಗೆ ಭೇಟಿ ನೀಡಿದ ವೇಳೆ ತಿಳಿಸಿದ್ದಾರೆ.
ಮುಂದಿನ ಸಾಲಿಗಾಗಿ ಸಿಟಿಆರ್‌ಐ ಕೇಂದ್ರದಿಂದ ಈ ತಳಿಯ ಬೀಜೋತ್ಪಾದನೆ ಕೊರತೆಯಾಗದಂತೆ ದಾಸ್ತಾನು ಮಾಡಲು ಸೂಚಿಸಲಾಗಿದೆ. ಅಲ್ಲದೇ ರೈತರಿಗೆ ಉತ್ತಮ ಗುಣಮಟ್ಟದ ಹೊಗೆಸೊಪ್ಪು ಮತ್ತು ಹದಗೊಳಿಸುವ (ಕ್ಯೂರಿಂಗ್) ಕುರಿತು ಸತತ ಮಾಹಿತಿ ಒದಗಿಸಲು ಸೂಚಿಸಲಾಗಿದೆ. ಅಲ್ಲದೇ ಸಮಗ್ರ ಬೆಳೆ ಪದ್ಧತಿ ಕುರಿತು ಮಾಹಿತಿ ನೀಡಲಿದ್ದೇವೆ. ಈಗಾಗಲೇ ರೈತರು ತಂಬಾಕಿನ ನಂತರ ಅವರೆ, ತೊಗರಿ ಬೆಳೆಯುತ್ತಿದ್ದಾರೆ. ತಂಬಾಕಿನ ನಡುವೆ ಇತರ ಬೆಳೆ ಬೆಳೆಯುವ ಕುರಿತು ಮಾಹಿತಿ ಒದಗಿಸಲಾಗುವುದು ಎಂದರು.
ಲೂಸ್ ಲೀಫ್ ಬ್ಯಾರನ್ ಸಮಾಧಾನ ತಂದಿಲ್ಲ :
ಹುಣಸೂರಿನಲ್ಲಿ ಐಟಿಸಿ ಕಂಪನಿ ವತಿಯಿಂದ ಇತ್ತೀಚೆಗೆ ಸ್ಥಾಪನೆಯಾಗಿರುವ ನೂತನ ತಂತ್ರಜ್ಞಾನ ಹೊಂದಿರುವ ಬಿಡಿ ಎಲೆ ಬಾರನ್(ಲೂಸ್ ಲೀಫ್ ಬಾರನ್) ಪದ್ಧತಿ ಬಗ್ಗೆ ರೈತರಲ್ಲಿ ಅಂತಹ ಸಮಾಧಾನವೇನು ಇಲ್ಲ. ಕಾರಣ ಬಾರನ್ ನಿರ್ಮಾಣಕ್ಕೆ ಅಗತ್ಯ ಅತಿಯಾದ ಬಂಡವಾಳ. ಈ ಕುರಿತು ಇನ್ನಷ್ಟು ಸಂಶೋಧನೆಗಳಾದಲ್ಲಿ ಕಡಿಮೆ ಖರ್ಚಿನಲ್ಲಿ ಬಾರನ್ ಸ್ಥಾಪಿಸುವಂತಾಗಬೇಕೆಂದು ಅಬಿಪ್ರಾಯಪಟ್ಟರು.
ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ :
ಹುಣಸೂರು ಸಿಟಿಆರ್‌ಐನ ವಿಜ್ಞಾನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸಂಶೋಧಿಸಿರುವ ಎಫ್‌ಸಿಎಚ್ 222 ತಳಿ ಕುರಿತು ರೈತರು ಸಂತಸ ವ್ಯಕ್ತಪಡಿಸಿದ್ದು, ವಿಜ್ಞಾನಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಬದಲಾವಣೆಯ ಕಾಲಘಟ್ಟ ಇದಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ರೀತಿನೀತಿಗಳ ಆದಾರದಡಿಯಲ್ಲಿ ಸಿಟಿಆರ್‌ಐ ಕರ್ತವ್ಯ ನಿರ್ವಹಿಸಲಿದೆ ಎಂದರು.
ಭೇಟಿ ವೇಳೆ ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್, ವಿಜ್ಞಾನಿಗಳಾದ ಡಾ.ರಾಜಪ್ಪ, ಡಾ.ಮಹದೇವಸ್ವಾಮಿ, ಡಾ.ನಂದಾ ಇನ್ನಿತರ ವಿಜ್ಞಾನಿಗಳು ಮತ್ತು ಸಿಬ್ಬಂದಿ ಇದ್ದರು.
ಇದನ್ನೂ ಓದಿ : ಅಂತಾರಾಷ್ಟ್ರೀಯ ಫುಟ್ ಬಾಲ್ ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದ ರೊನಾಲ್ಡೊ
ಟಾಪ್ ನ್ಯೂಸ್
![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-415x272.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-150x98.jpg)
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್](https://www.udayavani.com/wp-content/uploads/2024/12/gpar-150x93.jpg)
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
![Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ](https://www.udayavani.com/wp-content/uploads/2024/12/pet-dog-150x84.jpg)
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
![Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ](https://www.udayavani.com/wp-content/uploads/2024/12/renukaswamy-150x103.jpg)
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.