ಮತದಾರರ ರೂಪದಲ್ಲಿ ಭಗವಂತನ ಕೃಪೆ
Team Udayavani, Dec 19, 2019, 3:00 AM IST
ಕೆ.ಆರ್.ಪೇಟೆ: ವಿರೋಧಿಗಳ ಟೀಕೆ ಮತ್ತು ಕಿರುಕುಳದಿಂದ ನನ್ನನ್ನು ರಕ್ಷಿಸಲು ಭಗವಂತನೇ ಜನರ ರೂಪದಲ್ಲಿ ಬಂದು ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಕೊಟ್ಟಿದ್ದಾರೆಂದು ಶಾಸಕ ನಾರಾಯಣಗೌಡ ಹೇಳಿದರು.
ತಾಲೂಕಿನ ಶೀಳನೆರೆ ಹೋಬಳಿಯ ಕಾಗೇಪುರ ಗ್ರಾಮದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಉಪ ಸಮರದಲ್ಲಿ ಅಭಿವೃದ್ಧಿ ಪರವಾಗಿ ಮತನೀಡಿ ತಾಲೂಕಿನ ಸುಪುತ್ರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರಗೊಳಿಸಲು ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿ ಬಿಜೆಪಿ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಆಶೀರ್ವಾದ ಪಡೆಯಲು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿರೋಧಿಗಳು ನನ್ನ ವಿರುದ್ಧ ನಿರಂತರ ಅಪಪ್ರಚಾರ ನಡೆಸಿ ನನ್ನ ವಿರುದ್ಧ ಜನಸಾಮಾನ್ಯರನ್ನು ಎತ್ತಿಕಟ್ಟಿದ್ದರೂ ಜನತೆ ಅಪಪ್ರಚಾರಗಳಿಗೆ ಕಿವಿಗೊಡದೆ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಪರವಾಗಿ ಮತ ಚಲಾಯಿಸಿದ್ದಾರೆ. ನನ್ನ ಜೀವನದ ಕೊನೆ ಉಸಿರಿರುವವರೆಗೂ ಜನತೆಯ ನಮ್ರ ಸೇವಕನಂತೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಅಭಿವೃದ್ಧಿಗೆ ಮಾತ್ರ ಆದ್ಯತೆ: ನಾನು ಅಭಿವೃದ್ಧಿ ಬಗ್ಗೆ ಮಾತ್ರ ಯೋಚನೆ ಮಾಡುತ್ತೇನೆ. ಮನೆಯಲ್ಲಿರುವವರ ಬಗ್ಗೆ ಮಾತನಾಡಲು ಮತ್ತು ಯೋಚಿಸಲು ನನಗೀಗ ಸಮಯವಿಲ್ಲ. ನನ್ನನ್ನು ಆಶೀರ್ವದಿಸಿರುವ ಜನರ ಸೇವೆ ಮಾಡಲು ಹೆಚ್ಚು ಸಮಯ ಮೀಸಲಿಡುತ್ತೇನೆ. ಮಾಡಲು ಕೆಲಸ ಇಲ್ಲದವರು ಟೀಕೆ ಮಾಡುತ್ತಾರೆ. ಅವರ ಬಗ್ಗೆ ಮತ್ತೂಮ್ಮೆ ಪ್ರಶ್ನೆ ಕೇಳಿ ಸಮಯ ವ್ಯರ್ಥ ಮಾಡಬೇಡಿ ಎಂದು ಪುಟ್ಟರಾಜು ಬಗ್ಗೆ ಪ್ರತಿಕ್ರಿಯಿಸಲು ನಾರಾಯಣಗೌಡ ನಿರಾಕರಿಸಿದರು.
ಶೀಳನೆರೆ ಹೋಬಳಿಯ ಹರಳಹಳ್ಳಿ, ಸಿಂದಘಟ್ಟ, ರಾಯಸಮುದ್ರ, ಕೊಡಹಳ್ಳಿ, ಹರಳಹಳ್ಳಿ, ನೀತಿಮಂಗಲ, ವಸಂತಪುರ, ಮೈಲನಹಳ್ಳಿ, ಸಿಂಗಾಪುರ, ಕತೇìನಹಳ್ಳಿ, ಹೆಮ್ಮಡಹಳ್ಳಿ, ಚಾವಡಘಟ್ಟ, ಕಾಗೆಪುರ ಗ್ರಾಮಗಳಿಗೆ ಭೇಟಿನೀಡಿ ಜನರಿಗೆ ಕೃತಜ್ಞತೆ ಸಮರ್ಪಿಸಿದರು.
ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಅಂಬರೀಶ್, ಮಾಜಿ ಸದಸ್ಯ ಅಘಲಯ ಮಂಜುನಾಥ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಹರಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕತೇನಹಳ್ಳಿ ಸುರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಉಪಾಧ್ಯಕ್ಷ ಶೀಳನೆರೆ ಭರತ್, ಸತ್ಯಾನಂದ, ಚಂದ್ರಮೋಹನ್, ಮಂಜುನಾಥಗೌಡ, ಶಿವಪ್ರಸಾದ್, ಡಾ.ವೆಂಟಕೇಶ್, ರಾಜೇಗೌಡ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.