ಸಭಿಕರ ಒತ್ತಾಯಕ್ಕೆ ಕುಣಿದು ಕುಪ್ಪಳಿಸಿದ ಹ್ಯಾಟ್ರಿಕ್ ಹೀರೊ ಶಿವಣ್ಣ
Team Udayavani, Jan 14, 2018, 12:15 PM IST
ಮೈಸೂರಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಆರು ದಿನಗಳ ಕಾಲ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ತಾರಾ ಮೆರಗಿನೊಂದಿಗೆ ಶನಿವಾರ ವರ್ಣರಂಜಿತ ಚಾಲನೆ ನೀಡಿ ಸಾಂಸ್ಕೃತಿಕ ಮೇಳ ನಟ ಡಾ.ಶಿವರಾಜ್ ಕುಮಾರ್ ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಮಫ್ತಿ ಚಲನಚಿತ್ರದ ಡೈಲಾಗ್ ಹೊಡೆದದ್ದರಿಂದ ಸಭಿಕರು ಹಾಡು ಹೇಳುವಂತೆ ಒತ್ತಾಯಿಸಿದರು. ಸಭಿಕರ ಒತ್ತಾಯಕ್ಕೆ ಮಣಿದ ಶಿವರಾಜ್ ಕುಮಾರ್ ಅವರು, ತಮ್ಮ ಟಗರು ಚಿತ್ರದ ವಾರೆ ನೋಟ ನೋಡಿಲ್ಲಿ… ಹಾಡನ್ನು ಹೇಳಲು ಪ್ರಯತ್ನಿಸಿದರಾದರು ಸರಿಬರದಿದ್ದಾಗ ಮೈಕ್‌ಸೆಟ್‌ನಲ್ಲಿ ಅದೇ ಹಾಡನ್ನು ಪ್ಲೇ ಮಾಡಲಾಯಿತು.
ಹಾಡನ್ನು ಪ್ಲೇ ಮಾಡಿದಾಗ ಪೋಡಿಯಂ ಬಳಿಯೇ ನಿಂತು ಜನರತ್ತ ಕೈ ಎತ್ತಿ ಆಕ್ಷನ್ ಮಾಡಿದ ಶಿವರಾಜ್ ಕುಮಾರ್ ಅವರು, ಜನರ ಒತ್ತಾಯಕ್ಕೆ ಕಟ್ಟುಬಿದ್ದು ವೇದಿಕೆಯ ಮಧ್ಯೆ ಬಂದು ಸುಮಾರು ನಾಲ್ಕು ನಿಮಿಷಗಳ ಕಾಲ ನೃತ್ಯ ಮಾಡಿದರು. ನೃತ್ಯ ಮಾಡಿದ ನಂತರ ತಮ್ಮ ಆಸನದತ್ತ ತೆರಳಿದ ಶಿವರಾಜ್ ಕುಮಾರ್ ಅವರನ್ನು ಎಸ್.ಎ.ಚಿನ್ನೇಗೌಡರು ಅಪ್ಪಿಕೊಂಡರು.
ಹೊರನಡೆದ ಸಭಿಕರು: ಉದ್ಘಾಟನಾ ಸಮಾರಂಭದ ವೇದಿಕೆಗೆ ಶಿವರಾಜ್ ಕುಮಾರ್ ಅವರು ಬಂದಾಗಿನಿಂದ ಸ್ವಾಗತಕಾರರು, ನಿರೂಪಕರು ಅವರ ಹೆಸರು ಹೇಳಿದಾಗಲೆಲ್ಲ ಶಿಳ್ಳೆ, ಚಪ್ಪಾಳೆ ಜೋರಾಗಿ ಕೇಳಿ ಬರುತ್ತಿತ್ತು. ಶಿವರಾಜ್ ಕುಮಾರ್ ಅವರು ವೇದಿಕೆಯಲ್ಲಿದ್ದಷ್ಟು ಸಮಯವು ಮೊಬೈಲ್‌ನಲ್ಲಿ ಅವರ ಚಿತ್ರ ಸೆರೆ ಹಿಡಿದ ಸಭಿಕರು, ಅವರು ಹೊರಟು ನಿಂತಾಗ ಅವರನ್ನು ಹತ್ತಿರದಿಂದ ಕಾಣಲು ಮುಗಿಬಿದ್ದರಲ್ಲದೆ, ಅವರ ಕಾರನ್ನು ಹಿಂಬಾಲಿಸುತ್ತಾ ಸಭಾಂಗಣದಿಂದ ಎದ್ದು ಹೊರ ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ
Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.