“ಇತಿಹಾಸ ಬೌದ್ಧಿಕ ಮಾರ್ಗದರ್ಶಿ’
Team Udayavani, Jan 7, 2017, 11:53 AM IST
ಮೈಸೂರು: ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದ ಜತೆಗೆ ಬೌದ್ಧಿಕ ಇತಿಹಾಸ ಅಧ್ಯಯನ ಇಂದಿನ ಅಗತ್ಯ ಎಂದು ಕರ್ನಾಟಕ ಇತಿಹಾಸ ಕಾಂಗ್ರೆಸ್ ಸಂಸ್ಥಾಪಕ, ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್‌ಅಲಿ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗ ಆಯೋಜಿಸಿರುವ ಕರ್ನಾಟಕ ಇತಿಹಾಸ ಕಾಂಗ್ರೆಸ್‌ನ 26ನೇ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇತಿಹಾಸ ಎಂದರೆ ಕೇವಲ ಯುದ್ಧಗಳ ಮಾಹಿತಿ ಎಂಬ ಅಭಿಪ್ರಾಯ ಸರಿಯಲ್ಲ. ಇತಿಹಾಸ ನಡೆದು ಹೋದ ಯುದ್ಧಗಳನ್ನಷ್ಟೇ ಅಲ್ಲ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗಳ ಜತೆಗೆ ಮಾನವನ ಬೌದ್ಧಿಕ ಬೆಳವಣಿಗೆಯನ್ನೂ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಭಾರತದ ಇತಿಹಾಸದಲ್ಲಿ ಕರ್ನಾಟಕದ ಪಾಲು ಬಹಳ ಮಹತ್ವದ್ದು, 40 ವರ್ಷಗಳ ಹಿಂದೆ ಬ್ರಿಟಿಷ್, ರೋಮನ್ ಹಾಗೂ ಭಾರತೀಯ ಇತಿಹಾಸವನ್ನಷ್ಟೇ ಕಲಿಸಲಾಗುತ್ತಿತ್ತು. ಅದನ್ನು ಮನಗಂಡು ಮೊಟ್ಟಮೊದಲ ಬಾರಿಗೆ ವಿವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಕರ್ನಾಟಕ ಇತಿಹಾಸವನ್ನು ಪರಿಚಯಿಸಿ, ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿದ್ದು, ಕರ್ನಾಟಕದ ಇತಿಹಾಸ ಅಧ್ಯಯನಕ್ಕೆ ಸಂಶೋಧನಾ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಕರ್ನಾಟಕದ ಇತಿಹಾಸವೆಂದರೆ ಅಲ್ಲಿ ಬೇಲೂರು, ಹಳೇಬೀಡು, ಸೋಮನಾಥಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮೊದಲಾದ ಐತಿಹಾಸಿಕ ದೇಗುಲಗಳು, ಶ್ರವಣಬೆಳಗೊಳದಲ್ಲಿ ಅತೀ ಎತ್ತರದ ಗೋಮಟೇಶ್ವರ ಮೂರ್ತಿ, ವಿಜಯಪುರದಲ್ಲಿ ಬೃಹದಾಕಾರದ ಗುಂಬಜ್, ಅತಿ ಆಳವಾದ ಜೋಗ ಜಲಪಾತ, ವನ್ಯಪ್ರಾಣಿಗಳು ಮತ್ತು ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ಅರಣ್ಯಪ್ರದೇಶಗಳನ್ನು ಹೊಂದಿರುವ ಕರ್ನಾಟಕ ನೈಸರ್ಗಿಕವಾಗಿ ಸಂಪದ್ಬರಿತವಾಗಿದೆ.
ಐದು ಸಾವಿರ ವರ್ಷಗಳ ಇತಿಹಾಸವುಳ್ಳ ಭಾರತದಲ್ಲಿ ಬಸವೇಶ್ವರ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರಿಂದ ಭಕ್ತಿ ಚಳವಳಿ ಆರಂಭವಾಗಿದೆ ಎಂದು ಅವರು ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನ ರಾಮರಾಜ್ಯವಾಗಿತ್ತು. ಸ್ವತಃ ಮಹಾತ್ಮ ಗಾಂಧೀ ಜಿಯವರೇ ಮೈಸೂರನ್ನು ರಾಮರಾಜ್ಯ ಎಂದು ಕರೆದಿದ್ದಾರೆ. ಪ್ರಜೆಗಳನ್ನು ಹಸಿವು ಮುಕ್ತಗೊಳಿಸುವುದೇ ರಾಮರಾಜ್ಯ.
ಇದಕ್ಕಾಗಿ ಅಂದು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮಿಜಾì ಇಸ್ಮಾಯಿಲ್ ಸಹಕಾರ ನೀಡಿದ್ದರು ಎಂದು ನೆನೆದರು. ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಇತಿಹಾಸ ಅಧ್ಯಯನ ಮತ್ತು ಅರಿವು ಮುಖ್ಯ. ಈ ಸಮ್ಮೇಳನದಲ್ಲಿ ಇತಿಹಾಸದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸಿ ನಿರ್ಣಯ ಕೈಗೊಂಡಲ್ಲಿ ಸರ್ಕಾರಕ್ಕೆ ಸಲ್ಲಿಸಿ ಜಾರಿಗೊಳಿಸಲು ಒತ್ತಾಯಿಸಲಾಗುವುದು ಎಂದರು.
ಇತಿಹಾಸ ಕಾಂಗ್ರೆಸ್ ಸಮ್ಮೇಳನದ ಅಂಗವಾಗಿ ಹೊರತರಲಾಗಿರುವ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಪ್ರೊ.ಬಿ. ಷೇಕ್‌ಅಲಿ ಬಿಡುಗಡೆ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಗುಲ್ಬರ್ಗಾ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮಹಾಬಲೇಶ್ವರಪ್ಪ, ಕರ್ನಾಟಕ ಇತಿಹಾಸ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಮುನಿರಾಜಪ್ಪ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೆ.ಸದಾಶಿವ, ಆರ್.ಎಂ.ಷಡಾಕ್ಷರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.