“ಪುಸ್ತಕದ ಕಾವ್ಯಕ್ಕೆ ಸ್ಫೂರ್ತಿ ಕಪಾಟಿಂದ ಬರಲ್ಲ’


Team Udayavani, Nov 27, 2017, 5:34 PM IST

mys.jpg

ರಾಷ್ಟ್ರಕವಿ ಕುವೆಂಪು ಪ್ರಧಾನವೇದಿಕೆ
ಮೈಸೂರು:
ಅದು ಕವಿಗೋಷ್ಠಿಯೇ. ಆದರೆ, ಅಲ್ಲಿ ಕೇಳಿಬಂದಿದ್ದು ಕಾವ್ಯದ ಪಾಠ. ಬದುಕಿನ ರಸಗುಟ್ಟುಗಳ ಕಮ್ಮಟ. ಕಾವ್ಯದ ಮೇಷ್ಟ್ರಾಗಿ ಮಾತು ಪೋಣಿಸುತ್ತಿದ್ದರು ಕತೆಗಾರ ಜಯಂತ್‌ ಕಾಯ್ಕಿಣಿ. ಅಲ್ಲಿ ಕೇಳಿ ಬಂದ ಕತೆಗಳ ಮಿಡಿತ, ಕೇಳುಗನ ಮನವನ್ನು ತಂಪಾಗಿಸಿದವು.

ಬದುಕಿನ ಜೀವಂತಿಕೆಯನ್ನು ಗ್ರಹಿಸುವುದು ಹೇಗೆಂದು ಹೇಳುತ್ತಲೇ, ಕಾವ್ಯವನ್ನು ಅರಳಿ ಸುವ ಜಾಣಕಲೆಯನ್ನು ಕಾಯ್ಕಿಣಿ ತೋರಿಸಿ ಕೊಟ್ಟರು. ನಾಡನ್ನು ಅಗಲಿದ ಕವಿ ಎಸ್‌. ಮಂಜುನಾಥ್‌ ಅವರ ಭಾವ ಜಗತ್ತನ್ನು ಸ್ಪರ್ಶಿಸುತ್ತಾ ಗೋಷ್ಠಿಗೆ ಚಾಲನೆ ಕೊಟ್ಟರು ಕಾಯ್ಕಿಣಿ.

ಅಲೊಂದು ದಂಪತಿ. ಬಾಡಿಗೆ ಮನೆಯಿಂದ ಬೇರೆ ಮನೆಗೆ ಹೋಗುತ್ತಾರೆ. ಗೃಹಿಣಿ ಹೇಳ್ತಾಳೆ, ಪಾತ್ರೆ ತಂದ್ವಿ, ಈ ಪಾತ್ರೆ ತಂದ್ವಿ, ಹ್ಯಾಂಗರ್‌ ತಂದ್ವಿ, ಎಲ್ಲಾ ವಸ್ತುಗಳನ್ನೂ ತಂದ್ವಿ. ಆದರೆ, ನಮ್ಮ ಹಳೇ ಮನೇಲಿ ಗೋಡೆ ಮೇಲೆ ಗೀಚಿದ ಚಿತ್ರಗಳು ಅಲ್ಲಿಯೇ ಉಳಿದು ಹೋಯ್ತಲ್ಲ. ಕಾವ್ಯ ಸೃಷ್ಟಿಯ ಈ ಬಗೆಯನ್ನು ಹೇಳುತ್ತಾ, ಯುವ ಕವಿಗಳಿಗೆ ಎಸ್‌.ಮಂಜುನಾಥರ ವಿನಮ್ರ ನೆನಪು ಮಾಡಿಕೊಟ್ಟರು. ಶುರುವಾಗುವುದು ದೋಣಿ ಮೂತಿ ಯಿಂದ-ಎಂಬ ಮಂಜುನಾಥರ ಇನ್ನೊಂದು ಕವಿತೆಯನ್ನೂ ವಾಚಿಸಿದರು. ಕಾವ್ಯ ಎನ್ನುವು ದಕ್ಕೆ ಹಲವು ಜಿಜ್ಞಾಸೆಗಳಿವೆ. ಬನ್ನಂಜೆ
ಗೋವಿಂದಾ ಚಾರ್ಯರು ಹೇಳಿದಂತೆ, ನಾವು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಹೇಳುವುದಕ್ಕೆ ಕೆಲವು ಸಂಗತಿಗಳು ಇರುತ್ತವೆ. 

ಅವುಗಳ ಮೂಲಕ ಧ್ವನಿಸುವುದೇ ಕಾವ್ಯ- ಆ ಕಾವ್ಯ ನಮ್ಮೆಲ್ಲರನ್ನೂ ಜೀವಂತವಾಗಿಡುವ ಮಾನವೀಯ ಸೆಲೆ. ಕಾವ್ಯಗಳಿಗೆ ಸ್ಫೂರ್ತಿ ಬರುವುದು ಪುಸ್ತಕ ಕಪಾಟುಗಳಿಂದಲ್ಲ. ಆ ಸ್ಫೂರ್ತಿ ಬದುಕಿನಿಂದ ಬರಬೇಕು ಎಂದರು
ಕಾಯ್ಕಿಣಿ.  ಶಿರಸಿಯ ಪ್ರಸೂತಿ ಗೃಹದ ಕತೆಯೊಂದನ್ನು ಎಲ್ಲರ ಮುಂದಿಟ್ಟರು. ಅಲೊಬ್ಬಳು ಬಡತಾಯಿ ಹೆಣ್ಮಕ್ಕಳಿಗೆ ಜನ್ಮ ಕೊಡುವಳು. ಸಾಕುವ ಧೈರ್ಯವಿಲ್ಲವೆಂದು ಒಂದು ಮಗು ಮಾರಲು ಮುಂದಾಗುತ್ತಾಳೆ. ಆಗ ಡಾಕ್ಟರ್‌ ಹೆಂಡತಿ,
ಒಂದು ಮಗುವನ್ನು ನಾವು ತಗೊಳ್ತೀವಿ ಎನ್ನುತ್ತಾರೆ.

ಯಾವ ಮಗು ಚೆಂದವಿದೆ ಎಂಬುದನ್ನು ನೋಡಿ ಅದರ ಕೈಗೊಂದು ದಾರ ಕಟ್ಟುತ್ತಾಳೆ ತಾಯಿ. ಚೆಂದವಿಲ್ಲದ್ದು ಅವರಿಗೆ ಕೊಡೋಣ ಎನ್ನುವ ಯೋಚನೆ. ಮರುದಿನ ಆ ತಾಯಿಗೆ ಇನ್ನೊಂದು ಮಗು ಚೆಂದ ಕಾಣುತ್ತೆ. 5 ದಿವಸ ಆ ದಾರ ಈ ಕೈಯಿಂದ ಆ ಕೈಗೆ, ಆ ಕೈನಿಂದ ಈ ಕೈಗೆ ಬದಲಾಗುತ್ತಾ ಕೊನೆಗೆ ಎರಡೂ ಮಗು ಆಕೆಗೆ ಚೆಂದವಾಗಿ ಕಾಣುತ್ತವೆ. ಆಗ ಎರಡೂ ಮಕ್ಕಳನ್ನೂ ತಮ್ಮ ಬಳಿಯೇ ಇಟ್ಕೊಳ್ತಾಳೆ. ಇದೇ ಬದುಕಿನ ನೆರಳು ಬೆಳಕಿನಾಟ. ಆ ಕೈಯಿಂದ ಈ ಕೈಗೆ, ಈ ಕೈಯಿಂದ ಆ ಕೈಗೆ ಹೋದ ಬ್ಯಾಂಡ್‌ ಇದೆಯಲ್ಲ, ಅದೇ ನಮ್ಮ ಸಾಹಿತ್ಯದ ಚಲನಶೀಲತೆ. ಅದೇ ಕಾವ್ಯ ಎಂದರು ಕಾಯ್ಕಿಣಿ. ಇನ್ನು ಸಾಹಿತ್ಯ,ಕಲೆ, ಇವೇ ಈ ದಿನಗಳ ಅಧ್ಯಾತ್ಮ ಎನ್ನುತ್ತಾ ಕಾವ್ಯವನ್ನು ವೈದ್ಯಕೀಯಕ್ಕೆ ಹೋಲಿಸಿದರು. 

ಹಾಗೆಯೇ ಕಾವ್ಯ ಅನ್ನುವುದು ಪ್ರಶಸ್ತಿಗೆ ಸಂಬಂಧಿಸಿದ್ದಲ್ಲ, ಪೇಪರಿನಲ್ಲಿ ಬರುವ ಫೋಟೋಗೆ ಸಂಬಂಧಿಸಿದ್ದಲ್ಲ, ಇವೆಲ್ಲವನ್ನೂ ಮೀರುತ್ತಾ ಸಂಯುಕ್ತವಾದ ಮಾನವೀಯ ಪ್ರೀತಿಯಲ್ಲಿ ಒಂದಾಗುವಂಥದ್ದು ಕಾವ್ಯ ಎಂದು ವಿವರಿಸಿದರು.

ಚಿತ್ತಾಲರಿಗೆ ಕಾಡುವ ದಾದರ್‌ ಸ್ಟೇಷನ್‌: ಪ್ರತಿ ಬರಹನಿಗೂ ತನ್ನ ಬರಹವೇ ಅತ್ಯಂತ ಸತ್ಯ ಎನ್ನುವಾಗ ಕಾಯ್ಕಿಣಿ ಚಿತ್ತಾಲರನ್ನು ನೆನೆದರು. “ದಾದರ್‌ ಸ್ಟೇಷನ್‌ ಅಂದಾಗ ನನಗೆ ಬೇಜಾರಾಗುತ್ತದೆ, ಮನಸ್ಸು ತುಂಬಾ ಒಂದು ವಿಷಾದ ಉಕ್ಕುತ್ತದೆ’ ಅಂತ ಹೇಳಿದರು. ನಾನು ಬಹುಶಃ ಅವರ ಪರ್ಸ ಅಲ್ಲೆಲ್ಲೋ ಕಳೆದು ಹೋಗಿತ್ತೇನೋ, ಯಾವುದೋ ವಸ್ತುವೊಂದನ್ನು ಅವರು ಅಲ್ಲಿ ಕಳಕೊಂಡಿದ್ದರೇನೋ ಅಂತ ಅಂದುಕೊಂಡೆ. 

ಅವರು ನಿಧಾನಕ್ಕೆ ಹೇಳಿದರು. ಸ್ಟೇಷನ್ನಿನಲ್ಲಿಯೇ ನನ್ನ ನಿರ್ಮಲಾ ಆತ್ಮಹತ್ಯೆ ಮಾಡಿಕೊಂಡಿದ್ದು. ನನ್ನ ಮೂರು ದಾರಿಗಳು ಕಾದಂಬರಿ ನಿರ್ಮಲಾ ಅಲ್ಲಿಯೇ ಪ್ರಾಣಬಿಟ್ಟಿದ್ದು-ಅಂದರು ಭಾವುಕರಾಗಿ.

ಕಲ್ಪಿತ ಕತೆಗೆ ಮಿಡಿದಿದ್ದ ರಾಜ… ಕುಮಾರ್‌: ಶಿವರಾಜ… ಕುಮಾರ್‌ ನಟನೆಯ- ಕನಸು-ಸಿನಿಮಾಕ್ಕೆ ಚಿತ್ರಕತೆ-ಸಂಭಾಷಣೆ ಬರೆದಿದ್ದಾರೆ. ಅದರ ರೂಪುರೇಷೆ ಸಿದ್ಧಪಡಿಸುವಾಗ ಆ ಕತೆಯಲ್ಲಿ ಒಬ್ಬಳು ಕುರುಡಿ. ಆಕೆಯನ್ನು
ಮದುವೆ ಆಗುವಂತೆ ನಾಯಕನನ್ನು ಒತ್ತಾಯಿಸಲಾಗುತ್ತೆ. ಅದಕ್ಕೆ ಆತ,- ನಾನು ಕುರುಡಿಯನ್ನು ಮದ್ವೆ ಆಗೋಲ್ಲ-ಎಂದು ದೆಹಲಿಗೆ ಓಡಿ ಹೋಗುತ್ತಾನೆ. ಈ ದೃಶ್ಯ ಕಲ್ಪಿಸಿಕೊಂಡು ನನಗೆ ಸ್ವಲ್ಪಕಸಿವಿಸಿ ಆಯಿತು. ಆಗ ರಾಜ… ಕುಮಾರ್‌, ಕೆಲಸ ಮಾಡಿ, ನಿಧಾನಕ್ಕೆ ಯೋಚಿಸಿ, ಆ ಮೇಲೆ ಕತೆ ಬದಲಾವಣೆ ಹೇಳಿ-ಎಂದರು. ಮರುದಿನ ಕುರುಡಿ ಮಾಡೋದು ಬೇಡ, ಅವಳನ್ನು ಸಣ್ಣ ಹುಡುಗಿ ಮಾಡೋಣ ಎಂದು ಬಿಡಿಸಿ ಹೇಳಿದೆ. ಆಗ, ರಾಜ…, ನನ್ನ ಕೈ ಹಿಡಿದು,-
ಒಳ್ಳೇ ಕೆಲಸ ಮಾಡಿದ್ರಿ, ತುಂಬಾ ಒಳ್ಳೇ ಕೆಲಸ ಮಾಡಿದ್ರಿ. ಕುರುಡಿ ಆಗಿದ್ದಿದ್ದರೆ, ಅವಳ ಜೀವನ ಬಹಳ ಕಷ್ಟ ಆಗುತ್ತಿತ್ತು-ಎಂದರು.  ಅಂದರೆ, ಒಂದು ಕಲ್ಪಿತ ಕತೆಗೆ, ಕಲ್ಪಿತ ಪಾತ್ರಕ್ಕೆ ನಾವು ಮಿಡಿಯುವ ರೀತಿ ಇದೆಯಲ್ಲಾ ಅದೇ ಕಾವ್ಯ ಎಂದು ಹೇಳಿದರು. 

ಗೋಹತ್ಯೆ, ಕಪ್ಪು ಹಣ, ಜಿಎಸ್‌ಟಿ ಮೇಲೂ ಕವಿತೆ ಕಾಯ್ಕಿಣಿ ಕವಿತೆ ಗುಟ್ಟನ್ನು ಹೇಳಿದ್ದೇನೋ ಸರಿ, ಆದರೆ ಅವರ ಆಶಯಕ್ಕೆ ವಿರುದ್ಧವಾಗಿ ಗೋಷ್ಠಿಗಳಲ್ಲಿ ಕವಿತೆಗಳು ವಾಚನಗೊಂಡವು. ಮಾಂಸ ತಿಂದು ಮಂಜುನಾಥನ ಗುಡಿಗೆ ಹೋದ ಭಕ್ತನ ಎಳೆ ಇಟ್ಟುಕೊಂಡು ಪ್ರತಿಭಾ ನಂದಕುಮಾರ್‌ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕವನ ವಾಚಿಸಿದರೆ, ಮಿಕ್ಕ ಬಹುತೇಕರ ಕವಿತೆಗಳಲ್ಲಿ ಜಿಎಸ್‌ಟಿ, ಹಳೇ ನೋಟು ನಿಷೇಧ, ಕಪ್ಪು ಹಣ-ಇವೇ ತುಂಬಿಕೊಂಡಿದ್ದವು. ಇದನ್ನು ಕೇಳಿ ಅಧ್ಯಕ್ಷತೆ ವಹಿಸಿದ್ದ ಕಾಯ್ಕಿಣಿ ಕೊಂಚ ಬೆವರಿದರೋ ಏನೋ,1 ನಿಮಿಷ ವೇದಿಕೆಯಲ್ಲಿಯೇ ಇರಲಿಲ್ಲ!’

ಕನ್ನಡ ಹೃದಯಕ್ಕೆ ಹತ್ತಿರವಾದ ಭಾಷೆ: ಚಂದ್ರಶೇಖರ್‌„ ಸಿ.ದಿನೇಶ್‌ 
ಮೈಸೂರು:
ವಿಜ್ಞಾನ ಮತ್ತು ತಂತ್ರ ಜ್ಞಾನದ ಹೊಸ ಸಾಧ್ಯತೆಗಳಿಗೆ ಕನ್ನಡವನ್ನೂ ತೆರೆದುಕೊಳ್ಳುವುದರಿಂದ ಭಾಷಾಭಿವೃದ್ಧಿ ಜತೆಗೆ ವಿಜಾnನ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಸಹಕಾರಿ ಆಗಲಿದೆ. ಇಂತಹ ಚರ್ಚೆಗೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ನಾಡೋಜ ಡಾ. ದೇ. ಜವರೇಗೌಡ ವೇದಿಕೆ ಕಾರಣವಾಯಿತು.

ನಗರದಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆ ದಿನವಾದ ಭಾನುವಾರ ನಡೆದ ವಿಜ್ಞಾನ ತಂತ್ರಜಾnನ: ಕನ್ನಡದ ಬಳಕೆ ವಿಷಯದ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತವಾಯಿತು.

ಕನ್ನಡದಿಂದ ವೈದ್ಯರ ಉಳಿವು: ವೈದ್ಯ ವಿಜ್ಞಾನದ ಕುರಿತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ವೈದ್ಯರು ರೋಗಿಗಳೊಂ ದಿಗೆ ಕನ್ನಡದಲ್ಲಿ ಮಾತನಾಡಿದ್ದೇ ಆದಲ್ಲಿ ಆತನಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಅಲ್ಲದೆ ರೋಗಿಯೂ ಕನ್ನಡದಲ್ಲಿ ಮಾತನಾಡಿದರೆ ತನ್ನ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿದರೆ ಶೇ.80 ರೋಗಪತ್ತೆ
ಹಚ್ಚಲು ಸಾಧ್ಯವಾಗಲಿದೆ ಎಂದರು.

ಕನ್ನಡ ಬಳಕೆ ಸಾಧ್ಯ: ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ವಿಜ್ಞಾನಿ ಡಾ. ಪಿ.ಎಸ್‌.ಶಂಕರ್‌, ಸಂಶೋಧನೆಗಳೂ ಸ್ಥಳೀಯ ಭಾಷೆಯಲ್ಲಿ ನಡೆದರೆ, ಹೆಚ್ಚಿನ ಅನುಕೂಲವಾಗಲಿದೆ. ಪರಿಸರ ವಿಜ್ಞಾನಿ ಅ.ನ.ಯಲ್ಲಪ್ಪರೆಡ್ಡಿ, ರಾಸಾಯನಿಕ ಬಳಕೆಯಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಾಂತ್ರಿಕತೆಯಲ್ಲಿ ಅಭಿವೃದ್ಧಿ ಹೊಂದಿದ್ದರೂ, ಅನೇಕ ರೋಗಗಳು ನಮ್ಮನ್ನು ಆವರಿಸುತ್ತಿದೆ ಎಂದು ನುಡಿದರು. ಉಳಿದಂತೆ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ತಂತ್ರಜಾnನ ಪರಿಣಿತ ಉದಯಶಂಕರ್‌ ಪುರಾಣಿಕ್‌ ಪ್ರಸ್ತಾಪಿಸಿದರು. ಪ್ರಾಧ್ಯಾಪಕ ಡಾ.ಹೊಂಬಯ್ಯ ಹೊನ್ನಲಗೆರೆ ಪ್ರತಿಕ್ರಿಯೆ ನೀಡಿದರು.

ಆರೋಗ್ಯ ಭಾಗ್ಯ ನಮ್ಮ ಕೈಯಲ್ಲಿದೆ ಬಡವರ ಪರ ಎಂದು ಹೇಳುವ ಸರ್ಕಾರಗಳು ಉಳ್ಳವರ ಕೈಗೊಂಬೆಯಾಗಿ, ದುಡ್ಡು ಮಾಡುವವರ ಪರ ನಿಂತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಎಂಬುದು ಭಿಕ್ಷೆಯಾಗಿದ್ದು, ಭಿಕ್ಷೆ ನೀಡಲು ಅವರಿಗೆ ಸಂತೋಷವಾದರೆ, ಭಿಕ್ಷೆ ಪಡೆಯಲು ನಮಗೆ ಸಂತೋಷ ವಾಗಲಿದೆ. ಆದರೆ ಇದನ್ನು ಪಡೆಯಲೂ ಲಂಚ ನೀಡ ಬೇಕಾದ ಸ್ಥಿತಿ ಇದ್ದು, ಆರೋಗ್ಯ ಭಾಗ್ಯ ಎಂಬುದು ನಮ್ಮ ಕೈಯಲ್ಲಿದ್ದು, ಇದನ್ನು ಯಾವ ಸರ್ಕಾರವೂ ನೀಡಲು ಸಾಧ್ಯವಿಲ್ಲ ಎಂದು ಮನೋವಿಜ್ಞಾನಿ ಡಾ.ಸಿ.ಆರ್‌. ಚಂದ್ರಶೇಖರ್‌ ಹೇಳಿದರು.

ಟಾಪ್ ನ್ಯೂಸ್

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

Congress-Symbol

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

Congress-Symbol

Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.