ಜೆಡಿಎಸ್‌ ಅಧಿಕಾರಕ್ಕೆ ತರುವುದೇ ಕೊನೆಯಾಸೆ


Team Udayavani, Jul 1, 2017, 11:47 AM IST

mys3.jpg

ಹುಣಸೂರು: ರಾಜ್ಯದಲ್ಲಿ ಮತ್ತೂಮ್ಮೆ ಜೆಡಿಎಸ್‌ ಅಧಿಕಾರಕ್ಕೆ ತರುವುದೇ ತಮ್ಮ ಕೊನೆಯಾಸೆ, ಇದಕ್ಕಾಗಿ ಪಕ್ಷದ  ಮುಖಂಡರು ಹಾಗೂ ಕಾರ್ಯಕರ್ತರು  ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ  ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಹುಣಸೂರು ಕ್ಷೇತ್ರದ ಪಕ್ಷದ ಅಭ್ಯರ್ಥಿಯ ಘೋಷಣೆಗೆ ನಾನೇನು ಬಂದಿಲ್ಲವೆಂದು ಆರಂಭದಲ್ಲೇ ಪೀಠಿಕೆ ಹಾಕಿದ ದೇವೇಗೌಡರು ಎಲ್ಲರ ಅಭಿಪ್ರಾಯ ಪಡೆಯಲು ಬಂದಿದ್ದೇನೆ, ನನ್ನ ಮಾತನ್ನು ನಡೆಸಿಕೊಡಿ, ಕಳೆದ ರಾಜಕೀಯ ಜೀವನದಲ್ಲಿ ನಡೆದ ಘಟನೆಗಳೆಲ್ಲವೂ ನನ್ನ ತಲೆಯಲ್ಲಿ ತುಂಬಿಕೊಂಡಿದ್ದೇನೆ, ನಾನೆಂದೂ ಮರೆಯು ವವನಲ್ಲ ನನ್ನ ಮಾತಿನಲ್ಲಿ ನಂಬಿಕೆ ಇಡಿ, ನನ್ನ ಆಸೆ ಈಡೇರಿಸಲು ಪಣತೊಡಿರೆಂದು ಕರೆ ನೀಡಿದರು.

ಈ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡ, ಚಿಕ್ಕಮಾದು ಸಾಕಷ್ಟು ಕೆಲಸ ಮಾಡಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಜಿ.ಟಿ.ದೇವೇಗೌಡರೊಬ್ಬರೇ ಗೆದ್ದರೆ ಮಂತ್ರಿಯಾಗ್ತಾರಾ ಎಂದು ಪ್ರಶ್ನಿಸಿದ ಅವರು, ಕೇವಲ ಶಾಸಕರಾದರೆ ಏನೂ ಪ್ರಯೋಜನವಿಲ್ಲ, ಸರಕಾರ ರಚಿಸಲೇ ಬೇಕಿದ್ದು, ನಾವು 120 ಕ್ಷೇತ್ರವನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ರಾಜ್ಯದಲ್ಲಿ ಎಲ್ಲ ಜಾತಿ ಜನಾಂಗಗಳಿಗೂ ಅವಕಾಶಕೊಡಬೇಕಿದೆ.

ಎಲ್ಲರ ವಿಶ್ವಾಸ ಗಳಿಸಿ: ನೀವು ಹರೀಶ್‌ಗೌಡನಿಗೆ ಟಿಕೇಟ್‌ ನೀಡಬೇಕೆಂಬ ವಿಚಾರದಲ್ಲಿ ಉದ್ರೇಕ, ಆವೇಶದಿಂದ ಮಾತನಾಡಿರುವುದು ಸರಿಯಲ್ಲ.  ಪಕ್ಷದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಎಲ್ಲ ಜಾತಿ-ಜನಾಂಗದವರನ್ನು ಪಕ್ಷಕ್ಕೆ ಕರೆತರಬೇಕಿದೆ, ನಾನು ಸಾಯುವ ಮುನ್ನ ಪಕ್ಷವನ್ನು ಅಧಿಕಾರಕ್ಕೆ ತಂದು ರೈತರ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಿದೆ.

ಈ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಇದಕ್ಕಾಗಿ ಎಲ್ಲ ಜನಾಂಗಗಳ ವಿಶ್ವಾಸಪಡೆದು ಕೆಲಸ ಮಾಡಬೇಕಿದೆ, ಇದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ವ್ಯಾಮೋಹದಲ್ಲಿ ಏನೇನೋ ಮಾತನಾಡಬಾರದೆಂದು ಕಾರ್ಯಕರ್ತರಿಗೆ ಎಚ್ಚರಿಸಿದರು. 

ಮೈಸೂರು 9 ಕ್ಷೇತ್ರ ಗೆಲ್ಲಿಸಿ: ಮೆಸೂರು ಜಿಲ್ಲೆಯಲ್ಲಿ ಪಕ್ಷ ಕನಿಷ್ಠ 9 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಗುರಿ ಇಟ್ಟು ಕೊಂಡಿದ್ದು, ಹುಣಸೂರು ಕ್ಷೇತ್ರದಿಂದಲೇ ಗೆಲುವಿನ ಓಟ ಆರಂಭಿಸಬೇಕಿದೆ ಎಂದು ಹೇಳಿ ಇದಕ್ಕಾಗಿ ಹೈಕಮಾಂಡ್‌ ಮೇಲೆ ವಿಶ್ವಾಸ ಇಡಿ, ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದರು.

ಯಾರಾದ್ರೂ ಮುಖ್ಯಮಂತ್ರಿಯಾಗ್ಲಿ, ಆದ್ರೆ ಪಕ್ಷ ಅಧಿಕಾರಕ್ಕೆ ತನ್ನಿ: ಯಾರನ್ನೂ ನಾನು ದೂಷಿಸಲ್ಲ, ಸಿದ್ದರಾಮಯ್ಯ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲ್ಲ, ಯಾವ ಸಾಲ ಮನ್ನಾ ಮಾಡ್ತಾರೆಂದು ಅಣಕು ಮಾಡ್ತಾರೆಂದು ಹೇಳಿ, ತಾವು ಸವಾಲಾಗಿ ಸ್ವೀಕರಿಸಿದ್ದು ಒಂದು ಜಾತಿಯಿಂದ ಗೆಲುವು ಅಸಾಧ್ಯದ ಮಾತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ನನ್ನ ಆಸೆ ಈಡೇರಿಸಿರಿ, ಮತ್ತೂಮ್ಮೆ ಯಾರಾದರೂ ಮುಖ್ಯಮಂತ್ರಿಯಾಗಲಿ ಆದರೆ ಪಕ್ಷವನ್ನು ಅಧಿಕಾರಕ್ಕೆ ತನ್ನಿ ರೈತ ಪರ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

ಹರೀಶ್‌ಗೌಡ ನೇತೃತ್ವ: ಹರೀಶನಿಗೆ ರಾಜಕೀಯದಲ್ಲಿ ಇನ್ನೂ ಅವಕಾಶವಿದೆ ಎಂಬುದು ಗಮನಿಸಿದ್ದೇನೆ, ಇನ್ನೂ ಚಿಕ್ಕ ವಯಸ್ಸು, ಸಂಘಟಿಸುವ ಶಕ್ತಿ ಇದೆ. ಆತನನ್ನು ಕೈ ಬಿಡಲ್ಲ ಹೇಗೆ ಬೆಳೆಸಬೇಕೆಂಬುದು ಗೊತ್ತಿದೆ. ಮುಂದೆ ಆತನ ನೇತತ್ವದಲ್ಲೇ ಚುನಾವಣೆ ನಡೆಯುತ್ತೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರೆ ಹರೀಶ್‌ಗೌಡ ಪಕ್ಕದಲ್ಲಿರ್ತಾನೆ ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ತಾನು ಸೇರಿದಂತೆ ಜಿಲ್ಲೆಯ ಶಾಸಕರಾದ ಸಾ.ರಾ.ಮಹೇಶ್‌, ಚಿಕ್ಕಮಾದು ಕಚ್ಚಾಟದಿಂದಾಗಿ ಪಕ್ಷದ ಸಂಘಟನೆಗೆ ತೊಡಕಾಗುವುದು ಬೇಡವೆಂಬ ತೀರ್ಮಾನ ಕೈಗೊಂಡಿದ್ದೇವೆ, ಕಾರ್ಯಕರ್ತರ ನೋವು-ನಲಿವುಗಳಿಗೆ ಸ್ಪಂದಿಸಿದ್ದೇನೆ, ತಮ್ಮ ಕುಟುಂಬ ಸಹ ಮುಂದೆಯೂ ಕ್ಷೇತ್ರದ ಜನತೆಯೊಂದಿಗಿದ್ದೇವೆ ಎಂದರು ತಿಳಿಸಿದರು.

ಶಾಸಕ ಎಚ್‌.ಚಿಕ್ಕಮಾದು ಮತನಾಡಿ, ಹುಣಸೂರಲ್ಲಿ ಜಿಟಿಡಿ ಮತ್ತು ನಮ್ಮ ನಡುವೆ ಗೊಂದಲವಿದೆ. ನಾವೇ ಗೆಲೆ¤àವೆಂಬ ಭ್ರಮೆಯಲ್ಲಿರುವ ಕಾಂಗ್ರೆಸ್ಸಿಗೆ ಈ ಬಾರಿ ತಕ್ಕ ಪಾಠ ಕಲಿಸಿ ಅಹಂಕಾರ ಹಿಡಿಯಬೇಕಿದೆ, ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯದಡಿ ಸ್ಥಾನ-ಮಾನ ಕಲ್ಪಿಸಿರುವ ಎಚ್‌.ಡಿ. ದೇವೇಗೌಡರು ಮನಸ್ಸನ್ನು ನೋಯಿಸದೆ, ಅವರ ಆಶಯದಂತೆ ಕೆಲಸ ಮಾಡೋಣ ಎಂದರು.

ಮುಖಂಡ ಹರೀಶ್‌ಗೌಡ, ಜಿಪಂ ಸದಸ್ಯ ಸುರೇಂದ್ರ, ತಾಪಂ ಸದಸ್ಯ ಪ್ರಭಾಕರ್‌, ಮಾಜಿ ಪುರಸಭೆ ಉಪಾಧ್ಯಕ್ಷ ಮಹಮದ್‌ಪೀರ್‌, ಗ್ರಾಪಂ ಅಧ್ಯಕ್ಷ ಹೊನ್ನಪ್ಪ ರಾವ್‌ ಕಾಳಿಂಗೆ, ಯುವ ಘಟಕದ ಅಧ್ಯಕ್ಷ ಲೋಕೇಶ್‌, ಪಕ್ಷದ ತಾಲೂಕು ಮಾಜಿ ಅಧ್ಯಕ್ಷ ಪುಟ್ಟಾದಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ರವಿಗೌಡ, ಸದಸ್ಯ ಬಸವರಾಜಪ್ಪ, ವಿನೋಬಾ ಕಾಲೋನಿಯ ಗಣೇಶ್‌, ಯಶೋಧರಪುರದ ವೆಂಕಟೇಶ, ವಕೀಲ ಪುಟ್ಟರಾಜು, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಮಹದೇವೇಗೌಡ, ನಗರಸಭೆ ಅಧ್ಯಕ್ಷ ಲಕ್ಷಣ್‌, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಎಪಿಎಂಸಿ ಅಧ್ಯಕ್ಷ ಕುಮಾರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ವೆಂಕಟೇಶ್‌, ಗಣೇಶ್‌ಗೌಡ ಇತರರು ಇದ್ದರು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.