ಇಸ್ಕಾನ್‌ನಲ್ಲಿ ಅತೀ ದೊಡ್ಡ ರಾವಣ ದಹನ
Team Udayavani, Oct 23, 2018, 11:48 AM IST
ಮೈಸೂರು: ಇಸ್ಕಾನ್-ಮೈಸೂರು 9ನೇ ವಾರ್ಷಿಕ ದಸರಾ ಉತ್ಸವದ ಅಂಗವಾಗಿ ಶ್ರೀರಾಮ, ರಾವಣನನ್ನು ಸಂಹಾರಮಾಡಿದ ಸಲುವಾಗಿ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ರಾವಣ ದಹನ ನಡೆಸಲಾಯಿತು. ಸಂಗೀತಗಾರ ಡಾ.ವಿದ್ಯಾಭೂಷಣ ಅವರು ಹರಿದಾಸ ಕೀರ್ತನೆಗಳನ್ನು ಹಾಡುವುದರ ಮೂಲಕ ಭಗವಂತನಿಗೆ ಸಂಗೀತ ಸೇವೆಯನ್ನು ಅರ್ಪಿಸಿದರು.
ಇಸ್ಕಾನ್-ಬೆಂಗಳೂರು ಹಾಗೂ ದಿ ಅಕ್ಷಯ ಪಾತ್ರೆ ಫೌಂಡೇಶನ್ ಅಧ್ಯಕ್ಷರಾದ ಮಧು ಪಂಡಿತ್ ದಾಸ ಮಾತನಾಡಿ, ನಮ್ಮ ಹೃದಯಾಳದಲ್ಲೂ ಯಾವಾಗಲೂ ಒಂದು ಯುದ್ಧ ನಡೆಯುತ್ತಲೇ ಇರುತ್ತದೆ. ನಮ್ಮೊಳಗಿನ ಆ ದೈವತ್ವಕ್ಕೂ ಮತ್ತು ರಾಕ್ಷಸತ್ವಕ್ಕೂ ಸದಾ ನಡೆಯುತ್ತಿರುವ ಆ ಯುದ್ಧದ ಪ್ರತೀಕವೇ ರಾಮ-ರಾವಣರ ಯುದ್ಧ ಎಂದರು.
ಶ್ರೀರಾಮ, ರಾವಣನನ್ನು ಸಂಹರಿಸಿದಂತೆಯೇ ನಮ್ಮೊಳಗಿನ ರಾಕ್ಷಸ ಗುಣವನ್ನು ನಾಶ ಮಾಡುವ ಮೂಲಕ ಸಮಾಜದಲ್ಲಿ ದೊಡ್ಡ ಮಹತ್ತರ ಬದಲಾವಣೆಯನ್ನು ತರಬೇಕು. ಭಗವಂತನ ಪವಿತ್ರ ನಾಮ ಸ್ಮರಣೆಯಿಂದ ಮಾತ್ರ ನಮ್ಮೊಳಗಿನ ಕೋಪ, ಕಾಮ, ದುರಾಸೆ ಹಾಗೂ ಅಹಂಕಾರಗಳೆಂಬ ರಾಕ್ಷಸ ಗುಣಗಳ ಸಂಹಾರವಾಗುತ್ತದೆ ಎಂದು ನುಡಿದರು.
ಬಳಿಕ ಶ್ರೀಕೃಷ್ಣ-ಬಲರಾಮರ ಉತ್ಸವ ಮೂರ್ತಿಗಳನ್ನು ರಾಮ-ಲಕ್ಷ್ಮಣರ ಅಲಂಕಾರದಲ್ಲಿ ಗಜವಾಹನ ರಥವನ್ನು ಸೇರಿದ್ದ 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಹರೇ ಕೃಷ್ಣ ನಾಮ ಜಪಿಸುತ್ತಾ ಎಳೆದದರು. ರಾವಣ, ಕುಂಭಕರ್ಣ ಮತ್ತು ಮೇಘನಾದರ 60 ಅಡಿ ಎತ್ತರದ ಪ್ರತಿಕೃತಿಗಳನ್ನು ರಾವಣನ ಮೇಲಿನ ಭಗವಾನ್ ಶ್ರೀರಾಮನ ವಿಜಯದ ಗುರುತಾಗಿಯೂ ಅಂತೆಯೇ, ಸುಳ್ಳಿನ ಮೇಲೆ ಸತ್ಯದ ವಿಜಯವನ್ನೂ ಬಿಂಬಿಸುತ್ತಾ ಅವುಗಳ ದಹನ ಮಾಡಿದ್ದು ನೆರೆದ ಭಕ್ತಾದಿಗಳಲ್ಲಿ ರೋಮಾಂಚನವನ್ನುಂಟು ಮಾಡಿತು.
ಇಸ್ಕಾನ್-ಬೆಂಗಳೂರಿನ ಹಿರಿಯ ಉಪಾಧ್ಯಕ್ಷರಾದ ಚಂಚಲಪತಿ ದಾಸ, ಚೆನ್ನೈನ ಹರೇಕೃಷ್ಣ ಚಳವಳಿ ಅಧ್ಯಕ್ಷರಾದ ಸ್ತೋಕ ದಾಸ ಹಾಗೂ ಇಸ್ಕಾನ್-ಮೈಸೂರು ಅಧ್ಯಕ್ಷರಾದ ಜೈ ಚೈತನ್ಯದಾಸ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.