ತಂಬಾಕು ರೈತರ ಪರ ಏಕಾಂಗಿ ಹೋರಾಟ


Team Udayavani, Jun 17, 2017, 1:21 PM IST

mys1.jpg

ಪಿರಿಯಾಪಟ್ಟಣ: ತಂಬಾಕು ರೈತರ ವ್ಯಾಪ್ತಿಯಲ್ಲಿ ನಾಲ್ವರು ಸಂಸದರಿದ್ದರೂ ಸಹ, ತಂಬಾಕು ರೈತರ ಪರ ತಾವೋಬ್ಬರೆ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

ತಾಲೂಕಿನ ಮಾಲಂಗಿ ಗ್ರಾಮದಲ್ಲಿ ಐಟಿಸಿ ಕಂಪನಿ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿಗಳ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇವೇಗೌಡರು ಹಿರಿಯರು ಸಾಕಷ್ಟು ರೈತರ ಪರ ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಹೊರತುಪಡಿಸಿದರೆ ಮಂಡ್ಯದ ಪುಟ್ಟರಾಜು ಸೇರಿಂತೆ ಇತರರು ಯಾರು ತಂಬಾಕು ಹೋರಾಟಕ್ಕೆ ಕಿವಿಗೊಡುತ್ತಿಲ್ಲ.

ತಂಬಾಕು ಹೆಚ್ಚು ಬೆಳೆದಾಗ, ಬೆಳೆ ಏರಿಕೆ  ಆಗಬೇಕು.  ಈ ಹಿಂದೆ ಐಟಿಸಿ ಮ್ಯಾನೇಜರ್‌ ಆಗಿದ್ದ ರಾಜಶೇಖರ್‌ ಮೇಲೆ ಒತ್ತಡ ಹೇರಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ದೊರಕಿಸಿಕೊಡುವ ಬಗ್ಗೆ ಕಂಪನಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ದೊಡ್ಡದೊಡ್ಡ ಕಂಪನಿಗಳು ತಮ್ಮ ಆದಾಯದ ಶೇ.2ರಷ್ಟು ಹಣವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡಬೇಕು ಎಂಬುದು ನಿಯಮ. ಆದರೆ ಕೆಲವು ಕಂಪನಿಗಳು ಇದರ ಉಪಯೋಗ ಮಾಡುವುದಿಲ್ಲ ಇನ್ನು ಕೆಲವು ಪ್ರಚಾರಕ್ಕಾಗಿ ಸ್ವಂತ ಫೌಂಡೇಶನ್‌ಗಳನ್ನು ತೆರೆದು ಕೆಲಸ ಮಾಡುತ್ತವೆ.

ಆದರೆ  ಐಟಿಸಿ ಕಂಪನಿ ಮಾತ್ರ ರೈತರ ಬದುಕಿಗೆ ಅಗತ್ಯವಾದ ಮಣ್ಣು ಮತ್ತು ನೀರಿನ ಪುನಶ್ಚೇತನ ಕಾಮಗಾರಿಗಳಿಗೆ ಹಣವಿನಯೋಗಿಸಿ. ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನ 297 ಕೆರೆಗಳ ಪುನಶ್ಚೇತನಕ್ಕಾಗಿ 8.5 ಕೋಟಿ ವ್ಯಯಿಸಿರುವುದು ಶ್ಲಾಘನೀಯ ಕೆಲಸ ಎಂದು ತಿಳಿಸಿದರು.

ಐಟಿಸಿ ಲೀಪ್‌ ಮ್ಯಾನೇಜರ್‌ ಎಚ್‌.ಜಿ.ರವೀಶ್‌ ಮಾತನಾಡಿ, ಕೈಗಾರಿಕರಣ, ನಗರೀಕರಣದಿಂದ ಮನುಷ್ಯ ಪ್ರಕೃತಿಯ ನೈಸರ್ಗಿಕ ಸಂಪತ್ತುಗಳನ್ನು ಹಾಳುಮಾಡುತ್ತಿದ್ದಾನೆ. ಸತತವಾಗಿ ಬೆಳೆ ಬೆಳೆಯುವ ರೈತರು ಮಣ್ಣಿನ ಫ‌ಲವತ್ತತೆ ಹೆಚ್ಚಿಸುವಲ್ಲಿ ಚಿಂತನೆಮಾಡುತ್ತಿಲ್ಲ ಎಂದರು.

ಈಗಾಗಲೇ ಮುಂದಿನ ಪೀಳಿಗೆ ಉಪಯೋಗಿಸಬೇಕಾಗಿದ್ದ ನೈಸರ್ಗಿಕ ಸಂಪತ್ತನ್ನು ನಾವೆ ಬಳಸಿಬಿಟ್ಟಿದ್ದೇವೆ. ಆದುದ್ದರಿಂದ ಕೆರೆಗಳ ಪುನಶ್ಚೇತನ ಮೂಲಕ ಗೋಡನ್ನು ರೈತರ ಜಮೀನಿಗೆ ನೀಡುವುದು, ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಅಭಿವೃದ್ಧಿ ಪಡಿಸುವುದನ್ನು ಐಟಿಸಿ ಕಂಪನಿ ಮಾಡುತ್ತಿದ್ದು, ಮಣ್ಣಿನ ಸವಕಳಿ ತಪ್ಪಿಸುವುದು, ಫ‌ಲವತ್ತೆ ಹೆಚ್ಚಿಸುವುದು, ಬದುಗಳ ನಿರ್ಮಾಣ, ಸೇರಿದಂತೆ ಅನೇಕ ರೈತರ ಅಭಿವೃದ್ಧಿ ಕೆಲಗಳನ್ನು ಮಾಡುತ್ತಿದ್ದು.

ಇದಕ್ಕಾಗಿ 10 ಕೋಟಿಗೂ ಅಧಿಕ ಖರ್ಚು ಮಾಡಿ 167 ಕೆರೆಗಳ ಅಭಿವೃದ್ಧಿಪಡಿಸಲಾಗಿದೆ. ಈ ಮಳೆಗಾಲದಲ್ಲಿ ಎಲ್ಲಾ ಕೆರೆಗಳು ನೀರು ತುಂಬಲಾರಂಭಿಸಿದೆ ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದ ಎಂದು ತಿಳಿಸಿದರು. ವಕೀಲ ಬಿ.ವಿ.ಜವರೇಗೌಡ ಮಾತನಾಡಿ, ರೈತರಿಗೆ ಬ್ಯಾರನ್‌ ಶಿಫ್ಟಿಂಗ್‌ ಮಾಡಲು ಅಡ್ಡಿ ಉಂಟಾಗುತ್ತಿದ್ದು ಇದನ್ನು ನಿವಾರಿಸಬೇಕು ಮತ್ತು ರೈತರಿಗೆ ನೈಸರ್ಗಿಕವಾಗಿ ಉತ್ತಮ ಬೆಳೆಯಾದ ಹೆಚ್ಚಿಗೆ ಉತ್ಪಾದನೆಯಾಗುವ ತಂಬಾಕಿನ ಮೇಲಿನ ದಂಡ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಲಂಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ಹಾಡಿಗಳಿಗೆ ಸೋಲಾರ್‌ ಲೈಟ್‌ ನೀಡುವ ಬಗ್ಗೆ ಸಂಸದರು ಸಹಕಾರ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಕೇಂದ್ರ ಯೋಜನೆಗಳಿಂದ ಗ್ರಾಪಂಗೆ ಆಗಿರುವ ಪ್ರಯೋಜನಗಳ ಬಗ್ಗೆ ಮತ್ತು ನರೇಗಾ ಯೋಜನೆಯ ವರದಿ ನೀಡಿದರು. ವಿಕಲಚೇತನ ಮಕ್ಕಳಿಗೆ ಸಂಸದ ಪ್ರತಾಪ್‌ಸಿಂಹ ಮಾಲಂಗಿ ಗ್ರಾಪಂ ವತಿಯಿಂದ ನೀಡಲಾದ ಪುಸ್ತಕ ಸಾಮಗ್ರಿಗಳನ್ನು ನೀಡಿದರು. 

ತಾಪಂ ಅಧ್ಯಕ್ಷ ಶ್ರೀನಿವಾಸ್‌, ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷ ಗಣೇಶ್‌, ಐಟಿಸಿ ಕಂಪನಿಯ ಮುಖ್ಯಸ್ಥರಾದ ವಿ.ಆರ್‌.ದೀಕ್ಷೀತ್‌, ಅನಿನಾಶ್‌ದ್ವಾರಪು, ಅಸಿಸ್ಟೆಂಟ್‌ ಮ್ಯಾನೇಜರ್‌ ಪೂರ್ಣೇಶ್‌, ಮೈರಾಡಾ ಸಂಸ್ಥೆಯ ವಿಲಿಯಂ ಸಿಸೋಜಾ, ಬಿಜೆಪಿ ಮುಖಂಡ ಆರ್‌.ಟಿ.ಸತೀಶ್‌, ಮುಖಂಡ ಚಂದ್ರು, ಗ್ರಾಪಂ ಸದಸ್ಯ ಪ್ರಹಲ್ಲಾದ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.