ಕಾಣೆಯಾಗಿದ್ದ “ಕ್ಯಾತನಹಳ್ಳಿ’ ಕೊನೆಗೂ ಪತ್ತೆ
Team Udayavani, Aug 13, 2017, 11:41 AM IST
ನಂಜನಗೂಡು: ಶತಮಾನಗಳ ಹಿಂದೆ ಬದುಕಿ ಬಾಳಿ ಮಹಾ ಮಾರಿ ರೋಗದಿಂದಾಗಿ ಖಾಲಿಯಾದ, ಜನ ವಾಸದ ಕುರುಹು ಸಹ ಇಲ್ಲದ ಗ್ರಾಮದ ಬೀದಿಯೊಂದನ್ನು ತಾಲೂಕಿನ ಕಂದಾಯ ಇಲಾಖೆ ಪತ್ತೆ ಹಚ್ಚಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬ್ಯಾಳಾರು ಹಾಗೂ ದೇಬೂರು ಗ್ರಾಮದ ಸರ್ವೆ ನಂಬರಿಗೆ ಹೊಂದಿಕೊಂಡಂತೆ ಕ್ಯಾತನಹಳ್ಳಿ ಎಂಬ ಪುಟ್ಟ ಗ್ರಾಮವೊಂದು ಭೂ ಮಾಪನ ಇಲಾಖೆ ಸಿದ್ಧಪಡಿಸಿದ್ದ ದಾಖಲೆಯಲ್ಲಿ (ಮಜರೆ ಪ್ರದೇಶ ಕ್ಯಾತನಹಳ್ಳಿ) ಎಂದು ದಾಖಲಾಗಿತ್ತು. ಆದರೆ ಈ ಗ್ರಾಮವಿರುವ ಯಾವುದೇ ಸುಳಿವು ಇಲ್ಲಿನವರಾರಿಗೂ ಇರಲೇ ಇಲ್ಲ. ಗ್ರಾಮದ ಹುಡುಕಾಟ ನಡೆಸಿದ ಅಂಶವನ್ನು ಪತ್ತೆ ಹಚ್ಚಿರುವ ಮೂರನೇ ತಲೆಮಾರಿನವರು, ಭೂಮಾಪನದ ಆಧಾರದ ಮೇಲೆ ಗ್ರಾಮದ ಹುಟುಕಾಟ ಆರಂಭಿಸಿದ್ದರು.
ಕ್ಯಾತನಳ್ಳಿಯಲ್ಲಿ ಸುಮಾರು 90 ವರ್ಷಗಳ ಹಿಂದೆ ತಮ್ಮ ಪೂರ್ವಜರು ವಾಸವಾಗಿದ್ದರು ಹಾಗಾಗಿ ಆ ಗ್ರಾಮವನ್ನು ಹುಡುಕಿ ಕೊಡಿ ಎಂಬ ದೂರಿನ ಮೇರೆಗೆ ತಾಲೂಕು ದಂಡಾಧಿಕಾರಿ ದಯಾನಂದ ಅವರು ಭೂಮಾಪನ ಶಾಖೆಗೆ ಮುಂದಿನ ಕೃಮ ಜರುಗಿಸಲು ಆದೇಶಿಸಿದ ಮೇರೆಗೆ 4.5 ಏಕರೆ ಪ್ರದೇಶದ ಈ ವಾಸದ ಬೀದಿ ಪತ್ತೆಯಾಗಿದೆ ಎನ್ನಲಾಗಿದೆ.
ತಹಶೀಲ್ದಾರ್ ಆದೇಶದ ಮೇರೆಗೆ ಭೂ ಮಾಪನ, ಗ್ರಾಮ ಲೆಕ್ಕಿಗ ಹಾಗೂ ಪಿಡಿಒಗಳ ತಂಡ ಕ್ಯಾತನಹಳ್ಳಿ ಗ್ರಾಮಠಾಣಾ ಸರಹದ್ದು ಪತ್ತೆ ಹಚ್ಚುವ ಕಾರ್ಯ ಕೈ ಗೊಂಡು ಈ ಬೀದಿಯ ಜಾಡು ಕಂಡು ಹಿಡಿಯುವಲ್ಲಿ ಸಫಲರಾದರು. 1934-35ರಲ್ಲಿ ಕಂದಾಯ ಇಲಾಖೆ ಸಿದ್ಧಪಡಿಸಿದ್ದ ನಕ್ಷೆಯಲ್ಲಿ ಕ್ಯಾತನಹಳ್ಳಿ ಎಂಬ ಗ್ರಾಮ ದಾಖಲಾಗಿತ್ತು, ಆಗ ಕೇವಲ ಪರಿಶಿಷ್ಠರು ಮಾತ್ರ ವಾಸವಾಗಿದ್ದರು ಎಂದು ದಾಖಲೆಯಲ್ಲಿ ಉಲ್ಲೇಖವಿದೆ. ಅಂದು ವಾಸವಾಗಿದ್ದವರಾಗಲಿ ಅವರು ಮಕ್ಕಳು ಮೊಮ್ಮಕ್ಕಳಾಗಲಿ ಯಾರೂ ಈಗ ಬದುಕಿರುವ ಬಗ್ಗೆ ಮಾಹಿತಿಗಳಿಲ್ಲ.
ಆಗ ಕಾಲರಾ, ಸಿಡುಬುನಂತಹ ಮಾರಕ ರೋಗಗಳಿಂದಾಗಿ ಇಲ್ಲಿ ವಾಸವಿದ್ದವರೆಲ್ಲ ಹೆದರಿ ತಾಲೂಕಿನ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋದ ಕಾರಣ ಈ ಗ್ರಾಮ ಕಾಣೆಯಾಗಲು ಕಾರಣವಾಗಿರುಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಿಂದೆ ಇಲ್ಲಿ ವಾಸವಿದ್ದ ಸೀರಯ್ಯ, ಮಾಯಿಗಯ್ಯ ಎಂಬುವರ ಹೆಸರಿನಲ್ಲಿ ಇಲ್ಲಿನ 4.5 ಏಕರೆ ಭೂಮಿ ಇದ್ದಿರುವ ಬಗ್ಗೆ ಮಾತ್ರ ದಾಖಲೆಯಲ್ಲಿದೆ. ಅವರ ತಲೆಮಾರಿನ ನಾಲ್ಕನೇ ಕುಡಿಗಳು ಸದ್ಯ ಪಟ್ಟಣದ ಶ್ರೀರಾಂಪುರದಲ್ಲಿ ವಾಸವಾಗಿದ್ದಾ ಎಂದು ಹೇಳಲಾಗುತ್ತಿದೆ.
ಸದ್ಯ ಈ ಜಾಗದಲ್ಲಿ ಕೇರಳ ಮೂಲದವರು ಶುಂಠಿ ಬೆಳೆದಿದ್ದು, ಅದು ಯಾರಿಗೆ ಸೇರಬೇಕು ಎಂಬ ಬಗ್ಗೆಯೂ ಜಿಜಾnಸೆ ನಡೆದಿದ್ದು, ವಾರಸುದಾರರು ಎಂದ ಹೇಳಲಾದ ಕೆಲವರು ಇದಕ್ಕೆ ತಡೆಯೊಡ್ಡಿದ್ದಾರೆ. ಈ ಗ್ರಾಮದಲ್ಲಿ 4.5 ಏಕರೆ ಜನವಸತಿ ಹಾಗೂ ಸೇಂದಿವನ ಕೆರೆ, ಸ್ಮಶಾನಗಳು ದೇವಾಲಗಳು ಇದ್ದ ಬಗ್ಗೆ ಆಂದಿನ ದಾಖಲೆಯಲ್ಲಿ ಕಂಡು ಬಂದಿದ್ದು ಆ ಜಾಗದ ಪತ್ತೆಯೂ ಆಗಬೇಕಿದೆ. ಕಂದಾಯ ಇಲಾಖೆ ಪತ್ತೆ ಮಾಡಿದ ಜಾಗದಲ್ಲಿ ಈಗ ಯಾವುದೇ ತರಹದ ಮನೆಗಳಿದ್ದ ಬಗ್ಗೆ ಕುರುಹುಗಳಿಲ್ಲ ಎಲ್ಲವು ಜಮೀನುಗಳಾಗಿ ಮಾರ್ಪಾಡಾಗಿವೆ.
ಎಲ್ಲೆಲ್ಲೋ ನೆಲೆಸಿರುವ ಇಲ್ಲಿನ ನಾಲ್ಕನೇ ತಲಾಮಾರಿನವರು ಎನ್ನಲಾಗುವ ಅನೇಕರು ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುವಾಗ ಪರಿಪಾಠವನ್ನು ಮಾತ್ರ ಉಳಿಸಿಕೊಂಡಿದ್ದರು. ಅವರೆಲ್ಲ ಊರು ಬಿಟ್ಟು ಶತಮಾನಗಳಾಗುತ್ತಿದ್ದರೂ ಇಲ್ಲಿರುವ ಮಾರಮ್ಮ, ರಾಕಸಮ್ಮ, ಸೀಲು ಬೊಮ್ಮರಾಯಗಳನ್ನು ಜನರು ಇಂದಿಗೂ ನಂಬಿರುವುದು ಮಾತ್ರ ಸೊಜಿಗವಾಗಿದೆ.
ಕಬಳಿಕೆಯಾದ ಭೂಮಿ: ಇಲ್ಲಿನವರು ಜಾಗ ಖಾಲಿ ಮಾಡಿದ ಮೇಲೆ ಪಾಳು ಬಿದ್ದ ಜಮೀನನ್ನು ಸಿಕ್ಕ ಸಿಕ್ಕವರು ಸಾಗುವಳಿ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ. ಕೆಲವರಂತು ಯಾರಧ್ದೋ ಜಮೀನನ್ನು ತಮ್ಮ ಜಮೀನೆಂದು ನಕಲಿ ದಾಖಲೆಯ ಮುಂಖಾಂತರ ಮಾರಾಟ ಮಾಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಕುರುಹುಗಳು ಪತ್ತೆ
ಅಂದು ಮನೆಗಳಿತ್ತು ಎನ್ನುವ ಜಾಗದಲ್ಲಿ 50 ವರ್ಷಗಳಿಗೂ ಮೇಲ್ಪಟ್ಟ ವಯಸ್ಸಿನ ಅರಳಿ ಮರವಿದ್ದು ಮರದ ಕೆಳಗೆ ಪಂಚಾಯಿತಿ ಕಟ್ಟೆಯಿದೆ. ಪಕ್ಕದಲ್ಲೇ ಸಿದ್ದಪ್ಪಾಜಿ ಗುಡಿ, ಸಮೀಪದಲ್ಲೇ ಕ್ಯಾತನಹಳ್ಳಿ ಮಾರಮ್ಮ, ರಾಕಸಮ್ಮ, ಸೀಲು ಬೊಮ್ಮರಾಯ ದೇವಸ್ಥಾನಗಳಿವೆ. ಮಾಸ್ತಿಕಲ್ಲು ಹಾಗೂ ಅಂಕದ ಕಲ್ಲು ಇಂದಿಗೂ ಕಾಣಸಿಗುತ್ತಿದ್ದು, ಜನರು ವಾಸವಿದ್ದರು ಎಂಬುದಕ್ಕೆ ಈ ಪುರಾವೆಗಳೇ ಸಾಕ್ಷಿಯಾಗಿದೆ. ಕಬಿನಿ ಮೇಲ್ದಂಡೆಯ ಕಿರುನಾಲೆ ಗ್ರಾಮದ ಮಧ್ಯೆಭಾಗದಲ್ಲಿ ಹಾದುಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.