ಕಂದನನ್ನು ನೇಣಿಗೇರಿಸಿ ತಾಯಿಯೂ ಆತ್ಮಹತ್ಯೆ
Team Udayavani, Nov 10, 2017, 11:28 AM IST
ಹುಣಸೂರು: ತನ್ನ ಪುಟ್ಟಕಂದಮ್ಮನ್ನು ನೇಣಿಗೇರಿಸಿ ಅದೇ ಹಗ್ಗದಿಂದ ತಾಯಿಯೂ ನೇಣಿಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರಿನಲ್ಲಿ ಗುರುವಾರ ನಡೆದಿದೆ. ತಾಲೂಕಿನ ಹನಗೋಡು ಹೋಬಳಿ ಮುದಗನೂರಿನ ಪ್ರಶಾಂತ್ ಎಂಬುವವರ ಪತ್ನಿ ಕುಸುಮಾ (28), 1 ವರ್ಷದ ಪುತ್ರ ಪೃಥ್ವಿಕ್‌ಗೌಡ ನೇಣಿಗೆ ಶರಣಾದವರು.
ಕುಸುಮಾ ಕೊಳವಿಗೆ ಆಶ್ರಮ ಶಾಲೆಯಲ್ಲಿ ಗುತ್ತಿಗೆ ಶಿಕ್ಷಕಿಯಾಗಿದ್ದರು. ಆದರೆ, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುಸುಮಾರ ಸಹೋದರ ಅನುಮಾನಾಸ್ಪದ ಸಾವು ಕುರಿತು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ: ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಹಳ್ಳಿಯ ಲೇ.ವೆಂಕಟೇಶರ ಪುತ್ರಿ ಕುಸುಮಾರನ್ನು 2 ವರ್ಷಗಳ ಹಿಂದೆ ಮುದಗನೂರಿನ ಪ್ರಶಾಂತನಿಗೆ ಮದುವೆ ಮಾಡಿಕೊಡಲಾಗಿತ್ತು. ಕುಟುಂಬ ಅನ್ಯೋನ್ಯವಾಗಿತ್ತು. ಆದರೆ, ಕುಸುಮಾ ಮಗುವಿನೊಂದಿಗೆ ಆಗಾಗ್ಗೆ ಮನೆ ಬಿಟ್ಟು ಹೋಗುವುದು-ಬರುವುದು ಮಾಡುತ್ತಿದ್ದರು.
ಮಂಗಳವಾರವೂ ಇದೇ ರೀತಿ ಮನೆಯಿಂದ ಹೊರ ಹೋಗಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. ಸಂಜೆ ಪತ್ತೆ ಮಾಡಿ ಮನೆಗೆ ಕರೆತರಲಾಗಿತ್ತು. ಈಕೆ, ಎಂದಿನಂತೆ ಮನೆಯಲ್ಲಿ ಗುರುವಾರ ಸಹ ಬೆಳಗಿನ ತಿಂಡಿ-ಕಾಫಿ ಮಾಡಿಕೊಟ್ಟಿದ್ದರು.
ಆನಂತರ ಮಗುವಿನೊಂದಿಗೆ ಸ್ನಾನಕ್ಕೆ ಹೋದಾಕೆ ಬಹಳ ಹೊತ್ತಾದರೂ ಬಾರದಿದ್ದರಿಂದ ಕುಟುಂಬದವರೇ ಬಾಗಿಲನ್ನು ಒಡೆದು ನೋಡಿದಾಗ ಮಗುವಿನೊಂದಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ವಿಷಯ ತಿಳಿದ ಗ್ರಾಮಸ್ಥರು ಕುಸುಮಾ ಕುಟುಂಬಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಸಿಪಿಐ ಪೂವಯ್ಯ, ಪಿಎಸ್‌ಐ ಪುಟ್ಟಸ್ವಾಮಿ, ತಹಶೀಲ್ದಾರ್ ಮೋಹನ್ ಪರಿಶೀಲನೆ ನಡೆಸಿದರು. ಈ ವೇಳೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.