ಸಮಾಜವನ್ನು ಬಡಿದೆಬ್ಬಿಸುವ ಸಾಂಸ್ಕೃತಿಕ ರಾಜಕೀಯ ಅವಶ್ಯ
Team Udayavani, Jan 28, 2019, 7:20 AM IST
ಮೈಸೂರು: ರಾಮಾಯಣ, ಮಹಾ ಭಾರತ ಎರಡೂ ಅದ್ಭುತ ಮಹಾ ಕಾವ್ಯಗಳು. ಇಲ್ಲಿನ ಪುರಾಣದ ಪಾತ್ರಗಳಿಗೆ ರಾಜಕೀಯ ವೇಷ ಹಾಕಿ ಬೀದಿಗೆ ತಂದು ಯುದ್ಧಕ್ಕೆ ಬಿಟ್ಟಿದ್ದೇವೆ. ಇದರ ವಿರುದ್ಧ ಸಮಾಜವನ್ನು ಬಡಿದೆಬ್ಬಿಸುವ ಸಾಂಸ್ಕೃತಿಕ ರಾಜಕೀಯದ ಅವಶ್ಯಕತೆ ಇದೆ ಎಂದು ಪ್ರಗತಿಪರ ಚಿಂತಕ ದಿನೇಶ್ ಅಮಿನ್‌ಮಟ್ಟು ಹೇಳಿದರು.
ಚಾಮರಾಜ ನಗರದ ರಂಗವಾಹಿನಿ ಹಾಗೂ ಗಾನಾಸುಮಾ ಮ್ಯೂಸಿಕಲ್ ಗ್ರೂಪ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾನಾಸುಮಾ ಪಟ್ಟಸೋಮನ ಹಳ್ಳಿ ಅವರ ಮಹಿಷ ಮಂಡಲ ಮಧ್ಯದೊಳಗೆ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಮನ ಬಗ್ಗೆ ಮಾತನಾಡಿದರೆ ಪ್ರಶ್ನೆ ಮಾಡು ವವರು, ಕೇಸ್ ಹಾಕುವವರು ರಾಮಾಯಣದ ಮೂಲ ಪಠ್ಯ ಓದಿಲ್ಲ. ರಾಮ, ಸೀತೆಯನ್ನು ನಡೆಸಿ ಕೊಂಡಿದ್ದು, ವಾಲಿಯನ್ನು ಕೊಂದಿದ್ದನ್ನು ನೋಡಿ ದರೆ ಮನುಷ್ಯರಾದವರಿಗೆ ರಾಮ ಇಷ್ಟವಾಗುವು ದಿಲ್ಲ. ರಾಮಾಯಣವನ್ನು ವಾಲ್ಮೀಕಿ ಪೂರ್ತಿ ಬರೆದಿಲ್ಲ. ಆದರೆ, ರಾಮ ಸಸ್ಯಹಾರಿ ಎಂದು ಏನೇನೋ ಹೇಳಿ ರಾಮಾಯಣ ಬರೆದ ವಾಲ್ಮೀಕಿಗೆ ಅನ್ಯಾಯ ಮಾಡಿದ್ದೇವೆ ಎಂದು ತಿಳಿಸಿದರು.
ಯಾವುದೇ ಊರಿಗೆ ಹೋದರೂ ರಾಮಾಯಣ, ಮಹಾಭಾರತದ ಕುರುಹುಗಳನ್ನು ಹೇಳುತ್ತಾರೆ. ನನಗೆ ರಾಮ-ಕೃಷ್ಣ ಆದರ್ಶ ಪುರುಷರು ಎನಿಸಲ್ಲ. ಹಿಂದೂ ಧರ್ಮ ಆಚಾರ್ಯತ್ರಯರಿಂದ ಉಳಿ ದಿಲ್ಲ. ಬದಲಿಗೆ ನಾರಾಯಣ ಗುರು, ವಿವೇಕಾ ನಂದರಂತಹ ಸುಧಾರಣಾವಾದಿಗಳಿಂದ ಉಳಿ ದಿದೆ. ಸ್ವಾಮಿ ವಿವೇಕಾನಂದರನ್ನು ದೇವರು ಮಾಡಿಟ್ಟಿದ್ದಾರೆ. ಎಲ್ಲರೂ ಆ ಭಜನಾ ಮಂಡಳಿ ಸೇರಿಕೊಂಡಿದ್ದೇವೆ. ಪೆರಿಯಾರ್, ಅಂಬೇಡ್ಕರ್ ಅಂಥವರು ಸಿಡಿದು ಹೊರ ಹೋಗಿದ್ದಾರೆ. ಒಳಗಿದ್ದು ಸುಧಾರಣೆ ಮಾಡಿದವರೂ ಇದ್ದಾರೆ. ಇಲ್ಲದಿದ್ದರೆ, ಹಿಂದೂ ಧರ್ಮ ನೇಪಾಳದಲ್ಲಿ ಮಾತ್ರ ಇರುತ್ತಿತ್ತು. ಹಿಂದೂ ಕೋಡ್ ಬಿಲ್ ತಂದಿದ್ದರೆ ಅಂಬೇಡ್ಕರ್ ಕೂಡ ಹೊರ ಹೋಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ, ಪತ್ರಕರ್ತ ಡಾ.ಕೃಷ್ಣಮೂರ್ತಿ ಚಮರಂ, ಇತಿಹಾಸ ಸಂಶೋಧಕರಾದ ವಿಜಯಾ ಮಹೇಶ್, ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ರೂಪಾ ಪ್ರಕಾಶನದ ಮಹೇಶ್ ಕುಮಾರ್, ಕೃತಿಯ ಲೇಖಕ ಗಾನಾಸುಮಾ ಪಟ್ಟಸೋಮನಹಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.