ಹಾಡಿಯ ಮಕ್ಕಳಿಗೆ ಕಜ್ಜಿಯಿಂದ ಕೀವು,ರಕ್ತ
Team Udayavani, Jan 28, 2019, 7:22 AM IST
ಹುಣಸೂರು: ಕಳೆದ ಎರಡು ತಿಂಗಳಿನಿಂದ ಹಾಡಿಯ ಅಂಗನವಾಡಿ ಮಕ್ಕಳಿನಿಂದ ಹಿಡಿದು 13 ವರ್ಷದ ಮಕ್ಕಳವರೆಗೂ ವಿಚಿತ್ರ ಕಜ್ಜಿ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳಿಗೆ ಕಜ್ಜಿಯಿಂದ ರಕ್ತ ಸೋರುತ್ತಿದ್ದರೆ, ಕಾಲಿನಲ್ಲುಂಟಾ ಗಿರುವ ವೃಣದಿಂದ ಕೀವು ಸೋರುತ್ತಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿ ಯಿದ್ದರೂ ಇವರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡಿರುವ ಹುಣಸೂರು ತಾಲೂಕಿನ ನಾಗಾಪುರ 2 ಹಾಗೂ 6 ಬ್ಲಾಕ್‌ನ 18ಕ್ಕೂ ಹೆಚ್ಚು ಮಕ್ಕಳಲ್ಲಿ ವಿಚಿತ್ರ ಕಜ್ಜಿರೋಗ ಕಾಣಿಸಿಕೊಂಡಿದೆ.
ಗಾಯದಿಂದ ವಾಸನೆ: ಹಾಡಿಯ ಅಂಗನವಾಡಿಗೆ ತೆರಳುವ ರೋಹನ್, 9ನೇ ತರಗತಿಯ ಐಶ್ವರ್ಯ, 7ನೇ ತರಗತಿಯ ಪ್ರಮೋದ್, 4ನೇ ತರಗತಿಯ ಮಂಜು, ಅನಿಲ್, ರಾಣಿ, 2ನೇ ತರಗತಿಯ ಪ್ರವೀಣ್, 1ನೇ ತರಗತಿಯ ವಿಶ್ವ ಸೇರಿದಂತೆ ಅನೇಕ ಮಕ್ಕಳು ಕಜ್ಜಿಯಿಂದ ನರಳುತ್ತಿದ್ದು, ಗಾಯದಿಂದಾ ಗಿರುವ ವಾಸನೆಯಿಂದಾಗಿ ಶಾಲೆಗೆ ತೆರಳಲು ಅಸಹ್ಯ ಪಡುತ್ತಿದ್ದಾರೆ.
ಸೋಂಕು ಹರಡುವ ಆತಂಕ: ನಾಗಾಪುರ ಸರ್ಕಾರಿ ಫ್ರೌಢಶಾಲೆ, ಗಿರಿಜನ ಆಶ್ರಮ ಶಾಲೆ ಹಾಗೂ ಅಂಗನವಾಡಿಗೆ ಕಜ್ಜಿಯ ವೃಣದ ನಡುವೆಯೂ ಕೆಲ ಮಕ್ಕಳು ತೆರಳುತ್ತಿದ್ದು, ಇದು ಇತರೆ ಮಕ್ಕಳಿಗೂ ಹರಡುವ ಆತಂಕ ಎದುರಾಗಿದ್ದರೂ ಶಾಲೆಯ ಶಿಕ್ಷಕರು, ಅಂಗನವಾಡಿಯವರು ಕಂಡೂ ಕಾಣದಂತಿ ದ್ದಾರೆ.
ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಇನ್ನು ಗಿರಿಜನ ಕಲ್ಯಾಣ ಇಲಾಖೆ, ಗಿರಿಜನ ಸಂಚಾರ ಘಟಕ ಹಾಗೂ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಇರುವ ಆರ್‌ಬಿಎಸ್‌ಕೆ (ರಾಷ್ಟ್ರೀಯು ಸ್ವಾಸ್ಥ ಆರೋಗ್ಯ ಯೋಜನೆ)ಎಂಬ ಎರಡು ಘಟಕಗಳಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿವೆ.
ಕಾಡುತ್ತಿದೆ ಖಿನ್ನತೆ: ಕಜ್ಜಿ ಇರುವ ಮಕ್ಕಳ ಗೋಳು ಹೇಳ ತೀರದಾಗಿದೆ. ಕಡಿತದಿಂದ ನವೆ ಉಂಟಾಗಿ ಮೈ-ಕೈ ಕೆರೆದುಕೊಂಡು ಹಲವು ಮಕ್ಕಳು ಮತ್ತಷ್ಟು ಗಾಯ ಮಾಡಿಕೊಂಡಿದ್ದಾರೆ. ಅಂಗನವಾಡಿ ಮಗು ರೋಹನ್ ತನ್ನ ಕಾಲಿನ ಮೀನುತತ್ತಿಯಲ್ಲಿ ಕೆರೆದು ಕೊಂಡು ದೊಡ್ಡ ಗಾಯವಾಗಿ, ಕೀವು ಸೀರುವಂತೆ ಮಾಡಿಕೊಂಡಿದ್ದಾನೆ.
ಮಂಜು ಮತ್ತು ವಿಶ್ವ ಮತ್ತಿತರ ರಿಗೆ ಮೈಯೆಲ್ಲಾ ಗಾಯವಾಗಿದ್ದರೆ, ಬಾಲಕಿಯರಾದ ಐಶ್ವರ್ಯ, ರಾಣಿ ನೋವಿನಿಂದ ಯಾವಾಗಲೂ ಕಣ್ಣೀರಿಡುತ್ತಾ ಬಿಸಿಲಿನಲ್ಲಿ ಕಾಯುತ್ತಾ ಖಿನ್ನತೆ ಗೊಳಗಾಗಿದ್ದಾರೆ. ಇವರ ಪೋಷಕರ ಪಾಡು ಹೇಳ ತೀರದಾಗಿದೆ. ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿ ಕೊಳ್ಳಬೇಕೆಂಬುದು ತೋಚುತ್ತಿಲ್ಲ.
ಊಟ ಸೇವಿಸಲೂ ಆಗೋಲ್ಲ: ಕೆಲ ಮಕ್ಕಳ ಇಡೀ ಹಸ್ತ ಗಾಯವಾಗಿದ್ದರಿಂದ ಊಟ-ತಿಂಡಿ ಸೇವಿಸಲೂ ಆಗದಂತ ಪರಿಸ್ಥಿತಿ ಇದೆ. ಗಾಯ ಮಾಡಿಕೊಂಡಿರುವ ಕೈಗಳಲ್ಲೇ ಆಹಾರ ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೀಳರಿಮೆಯಿಂದಾಗಿ ಕೆಲ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ.
ಗಿರಿಜನ ಕಲ್ಯಾಣ ಇಲಾಖಿೆ ನಿರ್ಲಕ್ಷ್ಯ: ಶಾಲೆ ಹಾಗೂ ಅಂಗನವಾಡಿಗೆ ಬರುವ ಈ ಮಕ್ಕಳ ಗಂಭೀರ ಕಾಯಿಲೆ ಬಗ್ಗೆ ಶಿಕ್ಷಕರು ಮೌನವಹಿಸಿದ್ದರೆ, ಗಿರಿಜನ ಕಲ್ಯಾಣಕ್ಕಾಗಿಯೇ ಇರುವ ಗಿರಿಜನ ಕಲ್ಯಾಣ ಇಲಾಖಿೆಗೂ ಈ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಇವರೆಲ್ಲರ ನಿರ್ಲಕ್ಷ್ಯದಿಂದಾಗಿ ಆದಿವಾಸಿ ಮಕ್ಕಳು ಅನಾರೋಗ್ಯದಿಂದ ಬಳಲುವಂತಾಗಿದೆ.
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್ ಆಕರ್ಷಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.