ಕಾಡಾನೆ ದಾಳಿಯಿಂದ ಸಾಕಾನೆಗೆ ಗಾಯ
Team Udayavani, Apr 12, 2018, 4:57 PM IST
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿಯೋಜನೆಯ ಆನೆಶಿಬಿರದಲ್ಲಿ ಕಾಡಾನೆ ದಾಳಿಯಿಂದ ಗಾಯ ಗೊಂಡಿದ್ದ ಸಾಕಾನೆ ಜಯಪ್ರಕಾಶನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ತಿಂಗಳ ಹಿಂದೆ ಬಂಡೀಪುರ ಆನೆ ಶಿಬಿರದಿಂದ ಸಾಕಾನೆಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆಯ ಕಾರಣದಿಂದ ಜಯಪ್ರಕಾಶ, ಚೈತ್ರಾ, ಲಕ್ಷ್ಮೀ ಹಾಗೂ ಎರಡು ಮರಿ ಆನೆಯನ್ನು ರಾಂಪುರ ಶಿಬಿರಕ್ಕೆ
ಸ್ಥಳಾಂತರಿಸಲಾಗಿತ್ತು. ರಾಂಪುರ ಆನೆ ಶಿಬಿರದಲ್ಲಿ ಮೇವು ಮೇಯಲು ಜಯಪ್ರಕಾಶ ಎಂಬ ಸಾಕಾನೆಯು ಕಾಡಿನೊಳಗೆ ಹೋಗಿದ್ದಾಗ ಕಾಡಾನೆ ದಾಳಿ ನಡೆಸಿದ್ದರಿಂದ ಜಯಪ್ರಕಾಶ್ ಕಾಲಿನ ಭಾಗಕ್ಕೆ ಬಲವಾದ ಏಟಾಗಿತ್ತು. ಸದ್ಯಕ್ಕೆ ಸಾಕಾನೆ ಜಯಪ್ರಕಾಶಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗುಣಮುಖವಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
ಎರಡನೇ ಬಾರಿ ದಾಳಿ: ಜಯಪ್ರಕಾಶ್ ಆನೆ ರಾಂಪುರ ಶಿಬಿರಕ್ಕೆ ಸ್ಥಳಾಂತರ ಗೊಂಡು ಎರಡು ತಿಂಗಳಾಗಿದ್ದು ಕಳೆದ ತಿಂಗಳು ಕೂಡ ರಾಂಪುರ ಆನೆ ಶಿಬಿರದ ಬಳಿಯಲ್ಲಿಯೇ ಕಾಡಾನೆ ದಾಳಿ ನಡೆಸಿದ್ದವು. ಇದೇ ರಾಂಪುರ ಆನೆ ಶಿಬಿರದಲ್ಲಿ 2014ರಲ್ಲಿ ಕಾಂತಿ ಎಂಬ ಸಾಕಾನೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಂತಿ ಸಾವನ್ನಪ್ಪಿತ್ತು. ಹಾಗಾಗಿ ಸಾಕಾನೆಗಳಿಗೆ ರಾಂಪುರ ಕ್ಯಾಂಪ್ ಸೂಕ್ತ ಸ್ಥಳವಲ್ಲ. ಇಂತಹ ಪ್ರದೇಶದಲ್ಲಿ ಸಾಕಾನೆಗಳು ವಾಸ ಮಾಡಿದರೆ ರಕ್ಷಣೆ ಇಲ್ಲ. ಇದೀಗ ಸಾಕಾನೆ ಗಾಯಗೊಂಡಿದೆ ಮುಂದೆ ಅನಾಹುತ ಆಗಬಹುದು. ಹಾಗಾಗಿ ಸಾಕಾನೆಗಳ ವಾಸಕ್ಕೆ ಸೂಕ್ತವಾದ ಶಿಬಿರವನ್ನು ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.