![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Mar 13, 2018, 12:21 PM IST
ಮೈಸೂರು: ದೇಶದ್ರೋಹದ ಸುಳ್ಳು ಆರೋಪದಡಿ ಉತ್ತರಪ್ರದೇಶದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ರಾಷ್ಟ್ರೀಯ ವಕ್ತಾರ ಮೌಲನಾ ಸಜಾದ್ ನೊಮಾನಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿ ಸಂಘಪರಿವಾರದ ವಿರುದ್ಧ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಹದೇವಪುರ ಮುಖ್ಯರಸ್ತೆಯ ಏನ್ ಮಿನಾರ್ ಮಸೀದಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿರುವ ಸಜಾjದ್ ಅವರು ಜೀವನದುದ್ದಕ್ಕೂ ಶಾಂತಿ, ಸೌಹಾರ್ದತೆ ಮತ್ತು ದೇಶ ಪ್ರೇಮದ ಧ್ಯೇಯವನ್ನು ಎತ್ತಿ ಹಿಡಿದವರು. ದೇಶದಲ್ಲಿ ಪ್ರಜಾಸತ್ತೆ ಹಾಗೂ ಜಾತ್ಯತೀತ ತತ್ವವನ್ನು ಬಲಪಡಿಸಲು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರು.
ಪೀಸ್ ಅಂಡ್ ಜಸ್ಟೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಶೋಷಿತ ಜನರ ಐಕ್ಯತೆ ಮತ್ತು ಪ್ರಜಾಸತ್ತೆ ಉಳಿವಿಗಾಗಿ ದೇಶಾದ್ಯಂತ ಸಂಚರಿಸುತ್ತಿದ್ದರು. ಎಲ್ಲಾ ಧರ್ಮಗ್ರಂಥಗಳ ಅಗಾಧ ಪಾಂಡಿತ್ಯವಿರುವ ಸಜಾjದ್ ನೊಮಾನಿಯವರನ್ನು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಅವರ ಮೇಲೆ ಸುಳ್ಳು ದೂರಿನ ಆಧಾರದ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಕೂಡ ಇದೇ ರೀತಿ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್, ವಿದ್ಯಾರ್ಥಿ ನಾಯಕ ಕನ್ನಯ್ಯಕುಮಾರ್, ಮೌಲನಾ ಜಾಕೀರ್ ನಾಯ್ಕ,ಕೇರಳದ ಅಬ್ದುಲ್ ನಾಸೀರ್ ಮದನಿ ಅವರುಗಳ ವಿರುದ್ಧ ಸುಳ್ಳು ದೂರಿದ ಆಧಾರದ ಮೇಲೆ ಮೊಕದ್ದಮೆ ದಾಖಲಿಸಿರುವುದು ಷಡ್ಯಂತ್ರದ ಭಾಗವಾಗಿದೆ. ಜನಪರ ಹೋರಾಟಗಾರರು, ಧಾರ್ಮಿಕ ಮುಖಂಡರುಗಳ ಮೇಲೆ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವುದು ಖಂಡನೀಯ.
ಕೂಡಲೇ ಎಫ್ಐಆರ್ ಹಿಂಪಡೆದು ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಎಸ್‌ಡಿಪಿಐ ಮೈಸೂರು ನಗರಾಧ್ಯಕ್ಷ ಅಝಾಮ್ ಪಾಷ, ನಗರ ಕಾರ್ಯದರ್ಶಿ ಕೌಶಾನ್ ಬೇಗ್,ಪಿಎಫ್ಐ ರಾಜ್ಯ ಕೋಶಾಧಿಕಾರಿ ಮಹಮ್ಮದ್ ಫಾರೂಕ್, ಪಿಎಫ್ಐ ಮೈಸೂರು ಜಿಲ್ಲಾಧ್ಯಕ್ಷ ಅಮೀನ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.