ಗುಲಾಬಿ ಗ್ಯಾಂಗ್‌ ಮಾದರಿಯಲ್ಲಿ ಮೈಸೂರಲ್ಲಿ ರಕ್ಷಾ ತಂಡ


Team Udayavani, Mar 9, 2018, 12:25 PM IST

m2-gulabi.jpg

ಮೈಸೂರು: ಸಮಾಜದಲ್ಲಿ ನಿರಂತರವಾಗಿ ನಡೆಯುವ ಮಹಿಳಾ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿ, ಮಹಿಳೆಯರಿಗೆ ರಕ್ಷಣೆ ನೀಡಲು ರಕ್ಷಾ ಹೆಸರಿನ ತಂಡವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲು ಸಜಾjಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಹಲವು ಪ್ರಯತ್ನಗಳನ್ನು ನಡೆಸಿದರು ಇಂದಿಗೂ ಅನೇಕ ಮಹಿಳೆಯರು ಶೋಷಣೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂತಹ ಮಹಿಳೆಯರಿಗೆ ರಕ್ಷಣೆ ಒದಗಿಸಿ, ಸಾಂತ್ವನ ನೀಡಿ, ನ್ಯಾಯ ಒದಗಿಸುವ ಉದ್ದೇಶದಿಂದ ರಕ್ಷಾ ತಂಡವನ್ನು ಆರಂಭಿಸಲಾಗುತ್ತಿದೆ.

ಸಮಾಜದಲ್ಲಿ ಮಹಿಳೆಯರ ಪರವಾಗಿ ಹೋರಾಡುವವರನ್ನು ಒಗ್ಗೂಡಿಸಿ ರೂಪಿಸಿರುವ ರಕ್ಷಾ ತಂಡದ ಸದಸ್ಯರು ಪಿಂಕ್‌ ಕೋಟ್‌ ಧರಿಸಿ ಜಿಲ್ಲೆಯಾದ‌Âಂತ ಪ್ರತಿಯೊಂದು ಗ್ರಾಮ, ನಗರ ಪ್ರದೇಶಗಳಿಗೆ ತೆರಳಿ ಅಲ್ಲಿರುವ ಶೋಷಿತ ಮಹಿಳೆಯರ ಪರವಾಗಿ ಹೋರಾಟ ನಡೆಸಿ ಅವರುಗಳಿಗೆ ನೆರವಾಗಲಿದ್ದಾರೆ.

ರಕ್ಷಾ ಉದ್ದೇಶವೇನು?: ಸಮಾಜದಲ್ಲಿ ಮಹಿಳೆಯರು ಅತ್ಯಾಚಾರ, ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ರೀತಿಯಲ್ಲಿ ಶೋಷಣೆಗೊಳಗಾಗುತ್ತಾರೆ. ಹೀಗೆ ಶೋಷಣೆಗೆ ಸಿಲುಕುವ ಮಹಿಳೆಯರ ಪರವಾಗಿ ಹೋರಾಡಿ, ಕಾನೂನಿನ ನೆರವು, ರಕ್ಷಣೆ ನೀಡಿ, ನ್ಯಾಯ ಒದಗಿಸುವುದು ರಕ್ಷಾ ತಂಡದ ಪ್ರಮುಖ ಉದ್ದೇಶ.

ಅಲ್ಲದೆ ಅವರುಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲೂ ಸಹ ರಕ್ಷಾ ತಂಡದ ಸದಸ್ಯರು ಕಾರ್ಯನಿರ್ವಹಿಸಲಿದ್ದು, ಆ ಮೂಲಕ ಅವರಲ್ಲಿನ ಅಸಹಾಯಕತೆಯನ್ನು ಹೋಗಲಾಡಿಸಿ, ಧೈರ್ಯ ನೀಡಲಾಗುತ್ತಿದೆ. ಸಮಾಜದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸುವ ರಕ್ಷಾ ತಂಡದಲ್ಲಿ ಮಹಿಳೆಯರು ಮಾತ್ರವಲ್ಲದೆ, ಪುರುಷರು ಸಹ ಕೈಜೋಡಿಸಬಹುದಾಗಿದೆ. ಇದಕ್ಕಾಗಿ ತಂಡದ ಸದಸ್ಯರ ಸಂಖ್ಯೆಗೆ ಯಾವುದೇ ಕನಿಷ್ಠ ಮಿತಿಯನ್ನು ಅಳವಡಿಸಿಲ್ಲ.

ರಕ್ಷಾ ಆರಂಭಕ್ಕೆ ಕಾರಣ: ಬಹುತೇಕ ಸಂದರ್ಭಗಳಲ್ಲಿ ಶೋಷಣೆ ಅಥವಾ ದೌರ್ಜನ್ಯಕ್ಕೆ ಸಿಲುಕುವ ಮಹಿಳೆಯರು ನ್ಯಾಯಕ್ಕಾಗಿ ಹೋರಾಟ ನಡೆಸುವುದು ತೀರಾ ಕಡಿಮೆ. ಇದಕ್ಕೆ ಸಾಕ್ಷಿಯೆಂಬಂತೆ ಮೈಸೂರಿನ ಮೇಟಗಳ್ಳಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತಂದೆಯೇ ತನ್ನ ಎರಡು ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ. ಆದರೆ, ಮೃತ ಬಾಲಕಿಯ ತಾಯಿಗೆ ನ್ಯಾಯಕ್ಕಾಗಿ ಏನು ಮಾಡಬೇಕೆಂಬುದು ತಿಳುವಳಿಕೆ ಇಲ್ಲದೆ ಆಕೆ ಸುಮ್ಮನಾಗುತ್ತಿದ್ದಳು.

ಅಷ್ಟರಲ್ಲೇ ಆಕೆಯ ನೆರವಿಗೆ ಧಾವಿಸಿದ ಅಂಗನವಾಡಿ ಕಾರ್ಯಕರ್ತೆ, ಕೆಲವು ಸಂಘಟನೆಯ ಬೆಂಬಲದೊಂದಿಗೆ ಪ್ರಕರಣ ದಾಖಲಿಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣವನ್ನು ಮುಖ್ಯವಾಗಿಸಿಕೊಂಡು ಶೋಷಿತ ಮಹಿಳೆಯರ ದನಿಯಾಗಿ ಹೋರಾಡಲು ರಕ್ಷಾ ತಂಡವನ್ನು ಆರಂಭಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧ ಮಾಹಿತಿ ನೀಡಿದರು.

ಗುಲಾಬಿ ಗ್ಯಾಂಗ್‌ ಸ್ಫೂರ್ತಿ: ಮೈಸೂರಿನಲ್ಲಿ ರಕ್ಷಾ ತಂಡ ಆರಂಭಕ್ಕೆ ಉತ್ತರ ಪ್ರದೇಶದಲ್ಲಿನ ಗುಲಾಬಿ ಗ್ಯಾಂಗ್‌ ಸ್ಫೂರ್ತಿಯಾಗಿದೆ. ಉತ್ತರ ಪ್ರದೇಶದ ಬಾಂಡ ಜಿಲ್ಲೆಯಲ್ಲಿ ಸಂಪತ್‌ ಪಾಲ್‌ ಎಂಬ ಮಹಿಳೆ 2006ರಲ್ಲಿ ಪ್ರಾರಂಭಿಸಿರುವ ಗುಲಾಬಿ ಗ್ಯಾಂಗ್‌ ಮಹಿಳೆಯರ ಮೇಲಿನ ಅನ್ಯಾಯ, ಅತ್ಯಾಚಾರ, ಕೌಟುಂಬಿಕ ಕಲಹಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಪ್ರಸ್ತುತ ಅತ್ಯಧಿಕ ಸದಸ್ಯರನ್ನು ಹೊಂದಿರುವ ಗುಲಾಬಿ ಗ್ಯಾಂಗ್‌, ಮಹಿಳಾ ಸಬಲೀಕರಣ, ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳು, ಸ್ವ ಉದೋಗಕ್ಕೆ ಪ್ರೇರಣೆ ಮತ್ತು ತರಬೇತಿಯನ್ನು ನೀಡುತ್ತಿದೆ. ಈ ತಂಡದಿಂದ ಪ್ರೇರಣೆಗೊಳಗಾಗಿರುವ ಕೆ.ರಾಧ, ಮೈಸೂರಿನಲ್ಲೂ ಮಹಿಳೆಯರಿಗಾಗಿ ವಿಶಿಷ್ಠವಾದ ತಂಡವನ್ನು ರಚನೆ ಮಾಡುವ ಚಿಂತನೆ ನಡೆಸಿ, ರಕ್ಷಾ ಹೆಸರಿನ ತಂಡವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕಾರ್ಯಾರಂಭ ಮಾಡಿರುವುದು ವಿಶೇಷ.

ಶೋಷಿತ ಮಹಿಳೆಯರ ದನಿಯಾಗಿ ಹೋರಾಡಲು ತಂಡವನ್ನು ಪ್ರಾರಂಭಿಸುವ ಸ್ವಂತ ಆಲೋಚನೆಯಿಂದ ರಕ್ಷಾ ತಂಡವನ್ನು ಆರಂಭಿಸಲಾಗಿದೆ. ಈ ತಂಡದ ಸದಸ್ಯರು ಮಹಿಳೆಯರ ರಕ್ಷಣೆ ಮತ್ತು ಅರಿವು ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ರಕ್ಷಾ ತಂಡವನ್ನು ಸಂಘಟಿಸಲಿದ್ದು, ಪ್ರಸ್ತುತ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ.
-ಕೆ.ರಾಧ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

* ಸಿ. ದಿನೇಶ್‌

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.