ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ
Team Udayavani, May 27, 2018, 12:31 PM IST
ತಿ.ನರಸೀಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಜಿಲ್ಲೆಯಲ್ಲಿ ಪಕ್ಷದ ಸೋಲಿಗೆ ನಾನೇ ಜವಾಬ್ದಾರಿ, ಸ್ವ ಕ್ಷೇತ್ರದ ಸೋಲಿಗೂ ನಾನೇ ನೇರ ಹೊಣೆ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಕೃತಜ್ಞತೆ ಹಾಗೂ ಸೋಲಿನ ಆತ್ಮಾವಲೋವಕನಾ ಸಭೆಯಲ್ಲಿ ಮಾತನಾಡಿದ ಅವರು, ಸೋಲಿಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ನನ್ನ ಮತ್ತು ಕಾರ್ಯಕರ್ತರ ನಡುವೆ ಕಂದಕ ಉಂಟಾಯಿತೋ, ಸಂಪರ್ಕ ಇರಲಿಲ್ಲವೋ, ಅಸಮಧಾನವಿತ್ತೋ… ಆಗಿರುವ ತಪ್ಪನ್ನು ಇನ್ಮುಂದೆ ಸರಿಪಡಿಸಿಕೊಂಡು ಪಕ್ಷದ ಸಂಘಟನೆಗೆ ನಿಮ್ಮೆಲ್ಲರ ಜೊತೆಗಿರುತ್ತೇನೆ ಎಂದು ಭಾವನಾತ್ಮಕ ನುಡಿಗಳನ್ನಾಡಿದರು.
ಈಗಲೂ ಚುನಾವಣೆ ನಡೆದರೆ ಸೋತಿರುವ ಅಂತರಲ್ಲಿ ಮತ್ತೆ ನನ್ನನ್ನು ಗೆಲ್ಲಿಸುವಷ್ಟು ಆಕ್ರೋಶ ಇಲ್ಲಿ ಸೇರಿರುವ ಕಾರ್ಯಕರ್ತರು ಮತ್ತು ಮುಖಂಡರಲ್ಲಿದೆಯಾದರೂ ಕಾಲ ಮಿಂಚಿ ಹೋಗಿದೆ. ನನ್ನ ಸೋಲಿನಿಂದ ನಮ್ಮಲ್ಲಿ ಮಡುಗಟ್ಟಿರುವ ದುಃಖದಿಂದ ಸೋಲಿಸಿದ ಕೆಲವರಿಗೆ ಅತೀವ ಸಂತೋಷವಾಗಿದೆ.
ನಮ್ಮ ದುಃಖ ಅವರೆಲ್ಲರಿಗೂ ಸಂತೋಷ ತರುತ್ತಿರುವುದರಿಂದ ನಮಗದೇ ಸಂತೋಷ. ಯಾರೂ ಗೆದ್ದಿರುವರು ನನ್ನ ಕೈಯಲ್ಲಿ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ನಮಗಿಂತ ಅವರೇ ಕ್ಷೇತ್ರಕ್ಕೆ ಹೆಚ್ಚಿನ ಕೆಲಸವನ್ನು ಮಾಡಲಿ ಅಂತ ಶುಭ ಹಾರೈಸುತ್ತೇನೆ ಎಂದರು.
ಸಿದ್ದರಾಮಯ್ಯ ವ್ಯಕ್ತಿತ್ವ ದೊಡ್ಡದು: ರಾಜ್ಯದಲ್ಲಿ ಕೋಮು ಮತ್ತು ಮೂಲಭೂತವಾದಿಗಳು ಅಧಿಕಾರಕ್ಕೆ ಬರಬಾರದೆಂದು ರಾಜಕೀಯ ನಿಲುವನ್ನೇ ಬದಿಗಿಟ್ಟು ಅವರಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಅನ್ನುತ್ತಲೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಸಿದ್ದರಾಮಯ್ಯ ವ್ಯಕ್ತಿತ್ವ ದೊಡ್ಡದು.
ಪ್ರಜಾಪ್ರಭುತ್ವವಾದಿಯಾಗಿ ನಾನು ಚುನಾವಣೆ ಸೋಲನ್ನು ಸ್ವೀಕರಿಸುತ್ತೇನೆ. ನನ್ನ ಕ್ಷೇತ್ರದಲ್ಲಿ 55 ಸಾವಿರ ಮತಗಳನ್ನು ಕೊಟ್ಟಂತಹ ಮತದಾರರಿಗೆ ದುಡಿದಂತಹ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಸಭೆಯಲ್ಲಿ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ವೈ.ಎನ್.ಶಂಕರೇಗೌಡ, ಜಿಪಂ ಸದಸ್ಯ ಮಂಜುನಾಥನ್, ಮಾಜಿ ಸದಸ್ಯೆ ಸುಧಾ, ತಾಪಂ ಅಧ್ಯಕ್ಷ ಚೆಲುವರಾಜು, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ಮಾಜಿ ಅಧ್ಯಕ್ಷ ಕೆ.ವಜ್ರೆàಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಪುರಸಭೆ ಅಧ್ಯಕ್ಷ ಸಿ.ಉಮೇಶ, ಮಾಜಿ ಅಧ್ಯಕ್ಷರಾದ ಡಿ.ಪದ್ಮನಾಭ, ಮುನಾವರ್ ಪಾಷಾ, ಬಸವಣ್ಣ, ಎನ್.ಶಂಕರೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.