ತುಂತುರು ಮಳೆಯಲ್ಲೇ ಕೊಡೆ ಹಿಡಿದು ರೋಡ್ ಶೋ
Team Udayavani, May 11, 2018, 2:31 PM IST
ನಂಜನಗೂಡು: ಚುನಾವಣೆಯ ಬಹಿರಂಗ ಮತಯಾಚನೆಯ ಅಂತಿಮ ದಿನಾವಾದ ಗುರುವಾರ ನಂಜನಗೂಡು ಪಟ್ಟಣದಲ್ಲಿ ತುಂತುರು ಮಳೆಯಲ್ಲೂ ಕೊಡೆ ಹಿಡಿದು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭರ್ಜರಿ ರೋಡ್ ಶೋ ನಡೆಸಿದ ಮತಯಾಚನೆ ಮಾಡಿದರು.
ಇಲ್ಲಿನ ಎಂಜಿಎಸ್ ರಸ್ತೆಯಲ್ಲಿರುವ ಪ್ರಚಾರ ಕಾರ್ಯಲಯದಿಂದ ತೆರೆದ ವಾಹನದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಭಾರೀ ಮೆರವಣಿಗೆಯೊಂದಿಗೆ ತೆರಳಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಹಿರಂಗ ಮತಯಾಚನೆಗೆ ತೆರೆ ಎಳೆದರು. ತುಂತುರು ಮಳೆಯಲ್ಲೇ ಮೆರವಣಿಗೆ ಪೂರ್ಣಗೊಳಿಸಿದ ಸಂಸದರು ಹಾಗೂ ಶಾಸಕರು ಬಳಿಕ ಪ್ರಚಾರ ಕಾರ್ಯಾಲಯದಲ್ಲಿ ಸಭೆ ನಡೆಸಿದರು.
ಅಭಿವೃದ್ಧಿಗೆ ಮತ ಹಾಕಿ: ಸಂಸದ ಧ್ರುವನಾರಾಯಣ ಮಾತನಾಡಿ, ಕ್ಷೇತ್ರದಲ್ಲಿ ಸಹಸ್ರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಶಾಸಕರಿಗೆ ಫಲಾನುಭವಿಗಳೇ ಈ ಬಾರಿ ಸ್ವಯಂಪ್ರೇರಿತರಾಗಿ ಮತ ನೀಡಿ ಮತ್ತೂಮ್ಮೆ ಶಾಸಕರಾಗುವ ಅವಕಾಶ ಕಲ್ಪಿಸಬೇಕು. ಕಳೆಲೆ 11 ತಿಂಗಳಲ್ಲಿ ಮೂರು ಬಾರಿ ಪ್ರತಿ ಮತದಾರರ ಮನೆಗಳಿಗೂ ಭೇಟಿ ನೀಡಿ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.
ಮತ್ತೂಮ್ಮೆ ಅವರಿಗೆ ಪೂರ್ಣಾವಧಿ ಶಾಸಕರಾಗಿ ಅವಕಾಶ ಕಲ್ಪಿಸಿದರೆ, ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯ ಜನತೆಗೆ ಅನುಕೂಲಗಳನ್ನು ಕಲ್ಪಿಸಿದ್ದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, 11 ತಿಂಗಳ ಅಲ್ಪಾವಧಿಯ ಅಧಿಕಾರದಲ್ಲಿ ಕ್ಷೇತ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಜನಸೇವೆ ಮಾಡಿದ್ದೇನೆ. ಮತ್ತೂಮ್ಮೆ ಪೂರ್ಣಾವಧಿ ಅಧಿಕಾರ ಕಲ್ಪಿಸಿದರೆ ನಂಜನಗೂಡು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ. ಜನತೆ ಈ ಅಲ್ಪ ದಿನಗಳಲ್ಲಿಯೇ ತಾನು ಮಾಡಿರುವ ಅಭಿವೃದ್ಧಿಯನ್ನು ಮನಗಂಡು ಮತ್ತೂಮ್ಮೆ ತನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಕ್ಷೇತ್ರ ಉಸ್ತುವಾರಿಗಳಾದ ಶ್ರೀಕಂಠ, ಕಾವೇರಪ್ಪ, ನಗರಸಭಾಧ್ಯಕ್ಷೆ ಪುಷ್ಪಲತಾ, ಉರ್ಪಾಧ್ಯಕ್ಷ ಪ್ರದೀಪ, ಸದಸ್ಯರಾದ ಮಂಜುನಾಥ, ದೊಡ್ಡಮಾದಯ್ಯ, ರಾಮಕೃಷ್ಣ, ರಾಜೇಶ್, ಚೆಲುವರಾಜು ,ರಾಜು, ಚಂದ್ರು ಮೀನಾಕ್ಷಿ ಇತರರು ಉಪಸ್ಥತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.