ಪೊಲೀಸರನ್ನೂ ಕಾಡಿದ ಅಪಘಾತ ವದಂತಿ
Team Udayavani, Aug 9, 2018, 4:24 PM IST
ಎಚ್.ಡಿ.ಕೋಟೆ: ತಾಲೂಕಿನ ಅಲಘಡ ಸಮೀಪ ಕಬಿನಿ ಜಲಾಶಯದ ಬಲದಂಡೆ ನಾಲೆಗೆ ಅಡ್ಡಲಾಗಿ ಕಟ್ಟಿರುವ
ಚಿಕ್ಕ ಸೇತುವೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಲೆಯೊಳಗೆ ಬಿದ್ದಿದ್ದ ಅಪಘಾತ ವದಂತಿ ಹಿನ್ನೆಲೆಯಲ್ಲಿ
ಪೊಲೀಸರು ನಾಲೆಯಲ್ಲಿ ಕಾರ್ಯಾಚರಣೆ ನಡೆಸಿದ ಘಟನೆ ನಡೆಯಿತು.
ಚಿಕ್ಕದೇವಮ್ಮನ ದೇವಸ್ಥಾನ ಕಪಿಲಾ ನದಿಗೆ ಸಂಪರ್ಕ ಕಲ್ಪಿಸುವ ಗಣೇಶನ ದೇವಸ್ಥಾನದ ರಸ್ತೆ ತಿರುವಿನಲ್ಲಿ ಕಬಿನಿ
ಬಲದಂಡೆ ನಾಲೆಯ ಸೇತುವೆಯ ತಡೆಗೋಡೆಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದ್ದು, ಗೋಡೆ ಸಂಪೂರ್ಣ ನಾಲೆಯೊಳಗೆ ಬಿದ್ದು ಮುಳುಗಿ ಹೋಗಿದೆ. ಹೀಗಾಗಿ ವಾಹನವೇ ನಾಲೆಯೊಳಗೆ ಬಿದ್ದಿರಬಹುದೆಂದು ಅನುಮಾನಗೊಂಡ ಸಾರ್ವಜನಿಕರು ವಿಷಯವನ್ನು ಸರಗೂರು ಪಟ್ಟಣದ ಪೊಲೀಸರಿಗೆ ತಿಳಿಸಿದ್ದಾರೆ.
ಕೂಡಲೇ ಪಟ್ಟಣದ ಪೊಲೀಸರು ಸ್ಥಳಕ್ಕಾಗಮಿಸಿ ವೃತ್ತ ನಿರೀಕ್ಷಕ ಹರೀಶ್ ಕುಮಾರ್, ಆರಕ್ಷಕ ಉಪನಿರೀಕ್ಷಕ ಎಂ.
ಬಸವರಾಜು ನೇತೃತ್ವದಲ್ಲಿ ಸುಮಾರು 10 ಗಂಟೆ ಕಾರ್ಯಾಚರಣೆ ನಡೆಸಿದರು. ಅಲ್ಲದೆ ಕಾರ್ಯಾಚರಣೆ ವೇಳೆ
ನಾಲೆಯ ತುಂಬ ನೀರು ಹರಿಯುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ನೀರನ್ನು ಶೂನ್ಯಕ್ಕೆ
ಇಳಿಸಿದರು. ಇದರಿಂದ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ
ಪರಾರಿಯಾಗಿರಬಹುದು ಎಂದು ಕಾರ್ಯಾಚರಣೆ ಕೈಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಎಎಸ್‌ಐ ಮಾದಪ್ಪ, ಜವರಪ್ಪ, ರಮೇಶ್‌ರಾವ್ ಹಾಗೂ ಸಿಬ್ಬಂದಿ ಸೇರಿದಂತೆ ನೀರಾವರಿ
ಇಲಾಖೆಯ ಎಇಇ ರಘು, ಜೆಇ ಇತೇಶ್, ಡಾ. ಶರತ್, ಸೇರಿದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.