ಶಾಲಾ ಮಂತ್ರಿಮಂಡಲಕ್ಕೆ ಪ್ರತಿನಿಧಿಗಳ ಆಯ್ಕೆ
Team Udayavani, Jul 3, 2019, 3:00 AM IST
ಕೆ.ಆರ್.ನಗರ: ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅವರಲ್ಲಿ ಸ್ಥಳೀಯ ಆಡಳಿತ ಕುರಿತಾಗಿ ರಾಜಕೀಯ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಪಟ್ಟಣದ ಲಯನ್ಸ್ ಪ್ರೌಢಶಾಲೆಯಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲಕ್ಕೆ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು.
ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆದ ಈ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆದಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಮಂತ್ರಿ ಮಂಡಲದ 16 ಸ್ಥಾನಗಳಿಗೆ 42 ಮಂದಿ ಸ್ಪರ್ಧಿಸಿದ್ದರು. 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳ ಒಟ್ಟು 373 ಮತದಾರರಿದ್ದು, 347 ಮತಗಳು ಚಲಾವಣೆಯಾದವು.
ಬೆಳಗ್ಗೆ 8 ರಿಂದ 11.20 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಮತದಾನ ಮಾಡಿದರು. ಸೋಮವಾರ ಮಧ್ಯಾಹ್ನ 2ರಿಂದ 4.40ರವರೆಗೆ ಮತ ಎಣಿಕೆ ನಡೆಯಿತು. ಒಟ್ಟು ಚಲಾವಣೆಯಾದ ಮತಗಳಲ್ಲಿ 344 ಮತಗಳು ಕ್ರಮಬದ್ಧವಾಗಿದ್ದು, 3 ಮತಗಳು ತಿರಸ್ಕೃತಗೊಂಡವು.
ಮತ ಎಣಿಕೆಯಲ್ಲಿ 6ನೇ ತರಗತಿಯಿಂದ ನಿಶಾಂತ್.ಎನ್.ಗೌಡ ಮತ್ತು ಆರ್.ಸ್ಪಂದನಾ, 7ನೇ ತರಗತಿಯಿಂದ ಎಚ್.ಲಹರಿ ಹಾಗೂ ಡಿ.ಎಸ್.ನಿಖೀಲ್, 8ನೇ ತರಗತಿ ಎ ವಿಭಾಗದಿಂದ ಎಂ.ಸಿ.ಶರತ್‌ಕುಮಾರ್ ಮತ್ತು ಕೆ.ಎನ್.ಡೀನಾಶ್ರೀ, ಬಿ ವಿಭಾಗದಿಂದ ಗುರುರಾಜ್, ಕೆ.ಎಸ್.ರೀತುಪ್ರಿಯ,
9ನೇ ತರಗತಿ ಎ ವಿಭಾಗದಿಂದ ಗುಲಾಮ್.ಇ.ರಸೂಲ್ ಹಾಗೂ ಜಿ.ಎಲ್.ಜೀವಿತಾ, ಬಿ ವಿಭಾಗದಿಂದ ಆರ್.ವಿನುತಾ ಮತ್ತು ಎಸ್.ಲಿಖೀತ್, 10ನೇ ತರಗತಿ ಎ ವಿಭಾಗದಿಂದ ಎಂ.ಎಂ.ಶರತ್‌ಕುಮಾರ್ ಹಾಗೂ ವಿ.ಆರ್.ಕೃತಿಕಾ, ಬಿ ವಿಭಾಗದಿಂದ ಆರ್.ಹೊಯ್ಸಳ ಮತ್ತು ಕೆ.ಎಸ್.ಮನುಪ್ರಿಯ ಮಂತ್ರಿಮಂಡಲದ ಪ್ರತಿನಿಧಿಗಳಾಗಿ ಆಯ್ಕೆಯಾದರು.
ಮುಖ್ಯ ಶಿಕ್ಷಕ ಎಲ್.ಎಸ್.ಲೋಕೇಶ್ ಮಾರ್ಗದರ್ಶನದಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಜಿ.ಕೆ.ನಾಗಣ್ಣ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಚುನಾವಣೆಯಲ್ಲಿ ಹಿರಿಯ ಶಿಕ್ಷಕಿ ಎಂ.ಕೆ.ರುಕ್ಮಿಣಿ ಮತಗಟ್ಟೆಯ ಮುಖ್ಯಾಧಿಕಾರಿಯಾಗಿ, ವಿಜ್ಞಾನ ಶಿಕ್ಷಕ ಎ.ವಿ.ಅನಿಲ್‌ಕುಮಾರ್ ಮತ ಎಣಿಕೆಯ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರೆ, ಇತರ ಶಿಕ್ಷಕರು ಸಹಾಯಕರಾಗಿದ್ದರು.
ಈ ವೇಳೆ ಮುಖ್ಯ ಶಿಕ್ಷಕ ಜಿ.ರಮೇಶ್, ಶಿಕ್ಷಕರಾದ ಟಿ.ಪಿ.ಸುರೇಂದ್ರ, ಬಿ.ಎಸ್.ಹರೀಶ್, ಬುಶ್ರಾಬಾನು, ಸಿ.ರಾಮೇಗೌಡ, ಎ.ಎಸ್.ಅಶ್ವಿನಿ, ಎಲ್.ತುಂಗೇಶ್ವರ್, ಸಿ.ಎಂ.ಪುಷ್ಪಾವತಿ, ಎಂ.ಎಲ್.ಅರುಣ್‌ಕುಮಾರ್, ಎಚ್.ಎಸ್.ಸುಮಾ, ಜಿ.ಕೆ.ನಾಗಣ್ಣ, ಎಸ್.ಎಸ್.ಪಲ್ಲವಿ, ಎಸ್.ಯೋಗಾನಂದ, ಟಿ.ಪಿ.ವಸಂತ, ಲಕ್ಷ್ಮೀ, ಸೌಮ್ಯ, ಟಿ.ಎಸ್.ಸುರಭಿ, ಸಿಬ್ಬಂದಿಗಳಾದ ಎಂ.ಕೆ.ಬೀಬಿಜಾನ್, ಕೆ.ಆರ್.ವಿನುತಾ, ಭಾನುಮತಿ, ಲಲಿತ, ಭಾಗ್ಯ, ಪಾರ್ವತಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.