ವನ್ಯಜೀವಿಗಳ ದಾಹ ನೀಗಿಸಲು ಸೌರಪಂಪ್‌


Team Udayavani, Feb 27, 2017, 12:51 PM IST

mys7.jpg

ಹುಣಸೂರು: ಜನವಸತಿ ಪ್ರದೇಶದಲ್ಲಿ ನೀರಿಲ್ಲದಿದ್ದರೆ ಪ್ರತಿಭಟನೆಯನ್ನಾದರೂ ಮಾಡಿ ನೀರನ್ನು ಪಡೆಯಬಹುದು. ಆದರೆ ಈಗಾಗಲೇ ಮಾನವ ಅತಿಕ್ರಮಣದಿಂದ ಆಹಾರ ಮತ್ತು ನಿವಾಸ ಸಮಸ್ಯೆ ಎದುರಿಸುತ್ತಿರುವ ವನ್ಯಜೀವಿಗಳು ನೀರಿಲ್ಲದಿದ್ದರೆ ಜನವಸತಿ ಪ್ರದೇಶಗಳ ಕಡೆಗೆ ಬರುವುದೊಂದೇ ಅವುಗಳಿಗಿರುವ ಮಾರ್ಗ.

ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಕಾರಣ ಗಳಲ್ಲೊಂದಾಗಿರುವ ಅರಣ್ಯದೊಳಗೆ ನೀರಿನ ಸಮಸ್ಯೆಯನ್ನು ನೀಗಿಸಲು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಬೋರ್‌ವೆಲ್‌ ಕೊರೆಯಿಸಿ ಸೌರವಿದ್ಯುತ್‌ ಬಳಕೆಯ ಮೋಟಾರ್‌ ಪಂಪ್‌ನ್ನು ಅಳವಡಿಸಿ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ನೀರು ಪೂರೈಸುತ್ತಿದೆ.

ಈ ವರ್ಷ ಮಳೆ ಕೊರತೆಯಿಂದಾಗಿ ನವೆಂಬರ್‌ ಆರಂಭದಲ್ಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ ವಲಯಗಳಲ್ಲಿ ನೀರು ಇಂಗಿಹೋಗಿ ವನ್ಯಜೀವಿಗಳಿಗೆ ನೀರಿನ ಕೊರತೆ ಎದುರಾಗಿತ್ತು. ಇದರಿಂದ ನàಈರಿಗಾಗಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳತ್ತ ಮುಖ ಮಾಡಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಅರಣ್ಯದೊಳಗೆ ಬೋರ್‌ವೆಲ್‌ ಕೊರೆಯಿಸಿ ಸೌರ ವಿದ್ಯುತ್‌ ಫ‌ಲಕಗಳನ್ನು ಅಳವಡಿಸಿ ಮೋಟಾರ್‌ಗಳಿಂದ ನೀರಿನ ಮೂಲಗಳನ್ನು ತುಂಬಿಸುವ ಕೆಲಸ ಮಾಡುತ್ತಿದೆ. 

ವೀರನಹೊಸಹಳ್ಳಿಯಲ್ಲಿ ಪ್ರಥಮ ಸೌರಪಂಪ್‌: ಪ್ರಾಯೋಗಿಕವಾಗಿ ಅಂತರಸಂತೆ ವಲಯದ ಟೈಗರ್‌ ಟ್ಯಾಂಕ್‌ ಜಿ.ಕೆ.ಕೆರೆ, ಹೊಸಕೆರೆಗೆ ನೀರು ತುಂಬಿಸಲಾಗಿದ್ದು, ಅದೇ ಮಾದರಿಯಲ್ಲಿ ವೀರನಹೊಸಹಳ್ಳಿಯ ಕೆರೆಯನ್ನೂ ತುಂಬಿಸಲಾಗಿದೆ. ಇದೀಗ ನಾಗರಹೊಳೆಯ ಕೆಲವು ಕೋರ್‌ ಏರಿಯಾ ಹೊರತು ಪಡಿಸಿದರೆ, ನೀರಿನ ಸಮಸ್ಯೆ ಎಲ್ಲೆಡೆ ಸಾಕಷ್ಟಿದೆ. ಇದನ್ನು ನೀಗಿಸಲು ಇಲಾಖೆ ಸೌರ ಪಂಪ್‌ಸೆಟ್‌ ಮೊರೆ ಹೋಗಿದ್ದು, ಈಗಾಗಲೆ ನಾಯಂಜಿಕಟ್ಟೆ ಬಳಿ ಮತ್ತೂಂದು ಸೌರ ಪಂಪ್‌ಸೆಟ್‌ ಅಳವಡಿಸಲಾಗುತ್ತಿದೆ.

ಎಲ್ಲ ವಲಯಗಳಲ್ಲೂ ಸೌರ ಪಂಪ್‌ಸೆಟ್‌ ಅಳವಡಿಸಲು ಇಲಾಖೆ ಮುಂದಾಗಿದೆ.ನಾಗರಹೊಳೆಯ ಹೆಬ್ಟಾಗಿಲು, ಅತೀ ಹೆಚ್ಚು ಒಣ ಪ್ರದೇಶವಾದ ವೀರನಹೊಸಹಳ್ಳಿ ವಲಯದಲ್ಲಿ ಸಾಕಷ್ಟು ಕೆರೆ ಕಟ್ಟೆಗಳು ಬತ್ತಿ ಹೋಗಿವೆ. 400 ಅಡಿಗೂ ಹೆಚ್ಚು ಕೊಳವೆ ಬಾವಿ ತೋಡಿದ್ದು, ಕಟ್ಟೆಯ ದಡದಲ್ಲಿ ರೈಲುಕಂಬಿ ಬಳಸಿ, ದೊಡ್ಡದಾದ ಸೌರ ಪ್ಯಾನಲ್‌ ಅಳವಡಿಸಿದ್ದು, ಮೊದಲ ಬಾರಿಗೆ ಎರೆಕಟ್ಟೆ ಪ್ರದೇಶದಲ್ಲಿ ಸೌರ ಪಂಪ್‌ಸೆಟ್‌ ಅಳವಡಿಸಿದ್ದು, ಗುರುವಾರದಿಂದ ಕಟ್ಟೆಗೆ ನೀರು ತುಂಬಿಸುವ ಕಾರ್ಯ ಆರಂಭ‌ವಾಗಿದೆ. 

ಈಗಾಗಲೆ ಎರೆಕಟ್ಟೆಯ ಹೂಳನ್ನೆತ್ತಿದ್ದು, ಬಿಸಿಲಿನ ಸಮಯದಲ್ಲಿ ಎರಡು ಇಂಚಿಗೂ ಹೆಚ್ಚು ನೀರು ಹರಿಯುತ್ತಿದೆ. ಇನ್ನು 15 ದಿನದಲ್ಲಿ ಕಟ್ಟೆ ತುಂಬಲಿದೆ, ಈ ಕಟ್ಟೆ ತುಂಬಿದ ನಂತರ ಹತ್ತಿರದ ಹಿತ್ತಲುಗುಂಡಿಕಟ್ಟೆಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸಲಾಗುವುದು, ಅಲ್ಲದೆ ಸುತ್ತಮುತ್ತ ಸ್ವಲ್ಪ ದೂರದಲ್ಲಿ ಗುಂಡಿ ತೋಡಿ, ಪೈಪ್‌ ಲೈನ್‌ ಅಳವಡಿಸಿ ಗುಂಡಿಗಳಿಗೂ ನೀರು ತುಂಬಿಸಿ ಪ್ರಾಣಿಗಳ ದಾಹ ಇಂಗಿಸುವ ಪ್ರಯತ್ನ ಇಲ್ಲಿನ ಅಧಿಕಾರಿಗಳದ್ದು, ಈಗಾಗಲೆ ನಾಗರಹೊಳೆ ಮುಖ್ಯರಸ್ತೆಯಲ್ಲಿನ ಮರಳುಕಟ್ಟೆಗೆ ಕಳೆದೆರಡು ತಿಂಗಳಿನಿಂದ ಖಾಸಗಿ ರೈತರ ಜಮೀನಿನ ಪಂಪ್‌ಸೆಟ್‌ನಿಂದ ನೀರು ತುಂಬಿಸಲಾಗುತ್ತಿದೆ.

ಲಕ್ಷ್ಮಣತೀರ್ಥ ಖಾಲಿ: ಉದ್ಯಾನದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಿಂದ ಈಗಾಗಲೆ ಜನರೇಟರ್‌ ಬಳಸಿ ಹಾಲುದೊಡ್ಡಿಕೊಳ, ಮಂಡಳ್ಳಿಕೆರೆ, ಪಾರದಕೊಳಕ್ಕೆ ನೀರು ತುಂಬಿಸಲಾಗಿದೆ. ಅಲ್ಲದೆ ಮೂರ್ಕಲ್‌ ಬೋರ್‌ವೆಲ್‌ನಿಂದ ಬಿದಿರುಕಟ್ಟೆ, ಚನ್ನಮ್ಮನಕಟ್ಟೆಗೂ ನೀರು ತುಂಬಿಸಿದ್ದು, ಈ ಬಾಗದಲ್ಲಿ ಸೌರ ಪಂಪ್‌ಸೆಟ್‌ ಅಳವಡಿಸುವ ಯೋಚನೆ ಇದೆ. ಇದೀಗ ನದಿಯಲ್ಲೂ ನೀರಿಲ್ಲ. ಹೀಗಾಗಿ ಸೌರ ಪಂಪ್‌ಸೆಟ್‌ ಅತ್ಯವಶ್ಯವಾಗಿದೆ. ರಾಜೇಗೌಡನಕಟ್ಟೆಯ ಕಾಂಕ್ರಿಟ್‌ ತೊಟ್ಟಿಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಮಧುಸೂದನ್‌ ತಿಳಿಸಿದರು.

ಹುಣಸೂರು, ಆನೆಚೌಕೂರು ವಲಯಗಳ ಬಹುತೇಕ ಕೆರೆ- ಕಟ್ಟೆಗಳಲ್ಲೂ ನೀರಿಲ್ಲ, ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಗುತ್ತಿದೆ. ನೀರಿಗೆ ತೊಂದರೆ ಇರುವೆಡೆಗಳಲ್ಲಿ ಬೋರ್‌ವೆಲ್‌ ಕೊರೆಯಿಸಿ ಸೌರಪಂಪ್‌ ಅಳವಡಿಸಿ ನೀರು ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೇಗ ಮಳೆ ಆರಂಭವಾಗದಿದ್ದಲ್ಲಿ ಬೋರ್‌ ವೆಲ್‌ ನಲ್ಲಿಯೂ ನೀರು ಕಡಿಮೆಯಾಗಲಿದೆ.
-ಪ್ರಸನ್ನಕುಮಾರ್‌, ಎಸಿಎಫ್

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.