ಮುಂಗಾರು ಕೈಕೊಟ್ಟರೆ ಮೋಡ ಬಿತ್ತನೆ
Team Udayavani, Jun 25, 2017, 3:45 AM IST
ಮೈಸೂರು: ಸತತವಾಗಿ ಬರಗಾಲ ಎದುರಿಸುತ್ತಿರುವ ಕರ್ನಾಟಕಕ್ಕೆ ಈ ಬಾರಿಯೂ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜೂನ್ ತಿಂಗಳ ಆರಂಭದಲ್ಲಿ ಸಾಮಾನ್ಯವಾಗಿ ಮುಂಗಾರು ಆರಂಭವಾಗುವುದು ವಾಡಿಕೆ. ಆದರೆ, ಈ ವರ್ಷ ಜೂನ್ ತಿಂಗಳ ಅಂತ್ಯ ಸಮೀಪಿಸಿದರೂ ಮುಂಗಾರು ಮಳೆ ಉತ್ತಮವಾಗಿ ಆಗಿಲ್ಲ. ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಒಂದು ವೇಳೆ ಮಳೆ ಬರಲಿಲ್ಲ ಎಂದರೆ ಮೋಡ ಬಿತ್ತನೆ ಮಾಡಿಸಲು ಸರಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಇದೇ ವೇಳೆ, ಸಾಲ ಮನ್ನಾ ವಿಚಾರದಲ್ಲಿ ಯಾರಿಗೂ ತಾರ ತಮ್ಯ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಘೋಷಣೆ ಮಾಡಲಾದರೂ ಇನ್ನೂ ಅಧಿಕೃತ ಆದೇಶ ಬಿದ್ದಿಲ್ಲ. ಆದರೆ ಕರ್ನಾಟಕದಲ್ಲಿ ಮನ್ನಾ ಬಗ್ಗೆ ಘೋಷಣೆ ಮಾಡಿದ ಮಾರನೇ ದಿನವೇ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ಅವರು ಬಹು ಕಾಲದಿಂದ ಹಾಗೆಯೇ ಉಳಿದಿದ್ದ ಸಾಲ ಮನ್ನಾ ಮಾಡಿರಬಹುದು. ಆದರೆ ನಾವು 2017ರ ಜೂನ್ 20ರ ವರೆಗಿನ ಅಲ್ಪಾವಧಿ ಸಾಲ ಮನ್ನಾ ಮಾಡುವ ಮೂಲಕ ಎಲ್ಲರಿಗೆ ಉಪಯೋಗವಾಗುವಂತೆ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.