ಚಾ.ಬೆಟ್ಟ ಉಳಿವಿಗೆ ನಿವಾಸಿಗಳ ತೆರವೊಂದೇ ದಾರಿ
Team Udayavani, Nov 23, 2021, 2:06 PM IST
ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹಾಗೂ ಪ್ರಾಕೃತಿಕವಾಗಿ ಮಹತ್ವ ಪಡೆದುಕೊಂಡಿರುವ ಚಾಮುಂ ಡಿ ಬೆಟ್ಟವನ್ನು ಮಾನವನ ಹಸ್ತ ಕ್ಷೇಪ ವಿಲ್ಲದೆ ನೈಸರ್ಗಿಕ ಸಂಪತ್ತಾಗಿಯೇ ಉಳಿಸಿ ಕೊಳ್ಳಲು ಅಲ್ಲಿನ ನಿವಾಸಿಗಳನ್ನು ಬೆಟ್ಟದಿಂದ ತೆರವು ಮಾಡಿಸುವುದು ಒಂದೇ ದಾರಿ ಎಂಬ ಸಲಹೆ ಪರಿಸರವಾದಿಗಳಿಂದ ಕೇಳಿ ಬಂದಿತು.
ಚಾಮುಂಡಿಬೆಟ್ಟ ಉಳಿಸಿ ಹೋರಾಟದ ಭಾಗವಾಗಿ ಸೋಮವಾರ ಮೈಸೂರು ಗ್ರಾಹಕ ಪರಿಷತ್‌ನಲ್ಲಿ ನಡೆದ ಸಾರ್ವಜನಿಕ ಸಭೆ ಯಲ್ಲಿ ಬೆಟ್ಟಕ್ಕೆ ಸಂಪೂರ್ಣ ಖಾಸಗಿ ವಾಹನ ನಿರ್ಬಂಧಿಸಿ, ಸರ್ಕಾರಿ ವಾಹನಕ್ಕೆ ಮಾತ್ರ ಅವಕಾಶ ಕೊಡಬೇಕೆಂಬ ವಿಚಾರ ದೊಂದಿಗೆ ಕೆಲ ಪರಿಸರವಾದಿಗಳು, ಬೆಟ್ಟ ದಲ್ಲಿ ವಾಸವಿರುವ ನಿವಾಸಿಗಳ ಸ್ವಂತ ವಾಹನ ವನ್ನೂ ನಿರ್ಬಂಧಿಸಬೇಕೆಂಬ ಮಾತು ಕೇಳಿ ಬಂತು. ಇದಕ್ಕೆ ವಿರೋಧಭಾಸ ವ್ಯಕ್ತವಾಯಿತು. ಇನ್ನೂ ಕೆಲವರು ಬೆಟ್ಟದ ನಿವಾ ಸಿ ಗಳಿಗೆ ಪಾಸ್ ನೀಡಿ ಅವರ ವಾಹನ ದಲ್ಲೇ ಓಡಾಡಲು ಅವಕಾಶ ಕೊಡ ಬೇಕೆಂದು ಕೆಲವರು ಸಲಹೆ ನೀಡಿದರು.
ವಸ್ತುಗಳ ಖರೀದಿ ಬೇಡ: ಮೈಸೂರು ಗ್ರಾಹಕ ಪರಿಷತ್(ಎಂಜಿಪಿ) ಭಾಮಿ ಶೆಣೈ ಮಾತನಾಡಿ, ಹಲವು ವರ್ಷಗಳ ಹಿಂದೆ ಬೆಟ್ಟದಲ್ಲಿ ಹೆಚ್ಚು ಜನರು ವಾಸವಾಗಿರಲಿಲ್ಲ. ಜತೆಗೆ ಅವರೆಲ್ಲ ವಾಹನವನ್ನು ಬಳಸುತ್ತಿ ರಲಿಲ್ಲ. ಹೀಗಾಗಿ ಸಂಪೂರ್ಣವಾಗಿ ಖಾಸಗಿ ವಾಹನಗಳನ್ನು ನಿರ್ಬಂಧಿಸಿದರೆ, ಅವರು ಕಳೆದ 40 ವರ್ಷಗಳ ಹಿಂದೆ ಬದುಕಿ ದಂತೆಯೇ ಬದಕಲಿ ಎಂದು ಹೇಳಿದರು. ಬೆಟ್ಟದ ನಿವಾಸಿಗಳಿಗೆ ಪಾಪ ಎಂದು ಕರುಣೆ ತೋರುವ ಅಗತ್ಯವಿಲ್ಲ. ಬೆಟ್ಟದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸ ಬಾರ ದು. ಬೇಕಿದ್ದರೆ ಬದಲಿ ವ್ಯವಸ್ಥೆಯಾಗಿ ಬೆಟ್ಟದ ಪಾದದಲ್ಲಿ ವ್ಯಾಪಾರ ನಡೆಸಲಿ ಎಂದು ಸಲಹೆ ನೀಡಿದರು.
ಮನವೊಲಿಸಿ: ಪರಿಸರವಾದಿ ಕುಸುಮಾ ಆಯರಹಳ್ಳಿ ಮಾತನಾಡಿ, ಬೆಟ್ಟದ ನಿವಾಸಿಗಳಿಗೆ ತೊಂದರೆ ಕೊಡುವ ಉದ್ದೇಶದಿಂದ ನಮ್ಮದಲ್ಲ. ಇದು ಪರಿಸರವಾದಿಗಳು ಹಾಗೂ ಅಲ್ಲಿನ ನಿವಾಸಿಗಳ ನಡುವೆ ತಿಕ್ಕಾಟಕ್ಕೆ ತಿರುಗಬಹುದು. ಮುಂದೆ ಸಂಭವಿಸಬಹುದಾದ ಅಪಾಯದಿಂದ ಅಲ್ಲಿನ ನಿವಾಸಿ ಗಳೇ ಎಚ್ಚೆತ್ತುಕೊಳ್ಳಬೇಕು. ಮನೆಗಳು ಇರುವ ಜಾಗದಲ್ಲಿಯೂ ಕೂಡ ಕುಸಿತ ಆಗಬಹುದು. ಹೀಗಾಗಿ ಅವರನ್ನು ಮನವೊಲಿಸಿ, ಬೆಟ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಕೊಡಬೇಕಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ:- ಹೊಸಬೆಟ್ಟು ಶಾಲೆಯ ಗೋಡೆ ಮೇಲೆ ವರ್ಣ ಚಿತ್ತಾರ
ಪರಿಸರವಾದಿ ಶೈಲಜೇಶ್ ಮಾತನಾಡಿ, ನಂದಿ ಮಾರ್ಗ ರಸ್ತೆಯಲ್ಲಿ ಭೂ ಕುಸಿತ ಆಗಿದೆ. ಮತ್ತೆ ನಂದಿ ಸಮೀಪದಲ್ಲೂ ಕುಸಿತ ಕಂಡಿದೆ. ಮುಂದೆ ಜನರು ವಾಸಿಸುವ ಪ್ರದೇಶ ದಲ್ಲೂ ಭೂ ಕುಸಿತ ಆಗಬಹುದು. ಇದನ್ನು ಅಲ್ಲಿನ ನಿವಾಸಿಗಳೇ ಮನಗಾಣಬೇಕು ಎಂದು ಹೇಳಿದರು.
ಜಾಗೃತಿ: ಪರಿಸರವಾದಿ ಪರಶುರಾಮೇ ಗೌಡ ಮಾತನಾಡಿ, ಚಾಮುಂಡಿಬೆಟ್ಟ ಉಳಿ ಸುವ ವಿಚಾರ ದಲ್ಲಿ ಕಾರ್ಯಸಾದುವಾಗು ವ ಬೇಡಿಕೆಗಳನ್ನು ಮಾತ್ರ ಮಂಡಿಸಬೇಕು. ಅವು ಗಳನ್ನು ಈಡೇರಿಕೆಗಾಗಿ ಮೈಸೂರಿಗೆಲ್ಲರು ಒಟ್ಟಾಗಿ ಹೋರಾಟ ನಡೆಸಬೇಕು. ಇದಕ್ಕಾಗಿ ಜಾಗೃತಿ ಮೂಡಿಸಿ ಮೈಸೂರಿಗರನ್ನು ಸಜ್ಜಾಗೊಳಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್ತಿನ ಭಾಮಿ ಶಣೈ, ಪರಿಸರ ವಾದಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರಾದ ಮಾಳವಿಕ ಗುಬ್ಬಿವಾಣಿ, ಶೈಲಜೇಶ, ಕುಸುಮಾ ಆಯರಹಳ್ಳಿ, ವಿದ್ಯಾರ್ಥಿ ಯಶವಂತ್, ಪ್ರೊ.ಕಾಳಚನ್ನೇಗೌಡ, ಲೀಲಾ, ನಂಜುಂಡ, ಪ್ರವೀಣ್, ಗೀತಾ, ಆದರ್ಶ್, ಟೀಂ ಮೈಸೂರಿನ ಹರೀಶ್ ಇನ್ನಿತರರು ಪಾಲ್ಗೊಂಡಿದ್ದರು.
ಜನವರಿಯಿಂದ ಜಾಗೃತಿಗೆ ತಂಡ ರಚನೆ
ಮೈಸೂರು: ಚಾಮುಂಡಿಬೆಟ್ಟ ಉಳಿವಿಗಾಗಿ ಜನವರಿಯಿಂದ ಸತ್ಯಾಗ್ರಹ ಕೈಗೊಳ್ಳಬೇಕು, ಶಾಲಾ ಕಾಲೇ ಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಬೇಕು, ಮಾನವ ಸರಪಳಿ, ಜಾಗೃತಿ ಜಾಥಾ ಸೇರಿದಂತೆ ಹಲವು ಹೋರಾಟ ಕೈಗೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕು ಎನ್ನುವ ನಿರ್ಣಯಗಳನ್ನು ಮೈಸೂರು ಗ್ರಾಹಕ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಯಿತು. ಬೆಟ್ಟ ಉಳಿವಿಗಾಗಿ ಸತ್ಯಾಗ್ರಹ ನಡೆಸಬೇಕಿದೆ.
ಇದು ಯಾರನ್ನೂ ಒತ್ತಾಯಿಸುವಂತಿರಬಾರದು, ಅಂದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಸ್ವಯಂ ಲಾಕ್‌ಡೌನ್ ಆಗುವಂತೆ ಮಾಡಬೇಕು. ಬೆಟ್ಟದಲ್ಲಿ ಖಾಸಗಿ ಚಟುವಟಿಕೆಗಳನ್ನು ಉತ್ತೇಜಿಸದಂತೆ ನೋಡಿಕೊಳ್ಳಬೇಕು. ಇದಕ್ಕೆ ಜನ ಬೆಂಬಲ ಪಡೆಯಲು ಮೈಸೂರು ನಗರಾದ್ಯಂತ ಸಹಿ ಸಂಗ್ರಹ, ಭಿತ್ತಿಪತ್ರ, ಕರಪತ್ರ ಹಂಚುವ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂಬ ಸಲಹೆ ಕೇಳಿಬಂದವು.
ಮುಖ್ಯವಾಗಿ ಚಾಮುಂಡಿಬೆಟ್ಟ ಏಕೆ ಉಳಿಸ ಬೇಕು? ಅದಕ್ಕೆ ನಾವೇನು ಮಾಡಬೇಕು? ಎನ್ನುವ ಜಾಗೃತಿ ಮಾಹಿತಿ ಕುರಿತಂತೆ ತಿಳಿವಳಿಕೆ ಮೂಡಿ ಸಲು, ಕರಪತ್ರ ಕರಡು ರಚನಾ ಸಮಿತಿ (ಕುಸುಮಾ ಆಯರಹಳ್ಳಿ, ಮಾಳವಿಕಾ ಗುಬ್ಬಿವಾಣಿ, ಶೈಲಜೇಶ), ಶಾಲಾ ಕಾಲೇಜುಗಳಲ್ಲಿ ಸಹಿ ಸಂಗ್ರಹ ಅಭಿಯಾನ ಸಮಿತಿ(ವಿದ್ಯಾರ್ಥಿ ಯಶವಂತ್, ಕಾಳಚನ್ನೇಗೌಡ), ಸಾರ್ವಜನಿಕರಿಂದ ವಿವಿಧೆಡೆ ಸಹಿ ಸಂಗ್ರಹ ಅಭಿಯಾನ ಸಮಿತಿ (ಲೀಲಾ, ನಂಜುಂಡ, ಪ್ರವೀಣ್, ಗೀತಾ) ಸೇರಿ ದಂತೆ ವಿವಿಧ ತಂಡಗಳನ್ನು ರಚಿಸಲಾಯಿತು.
ಇದೇ ವೇಳೆ ಸಭೆಯಲ್ಲಿದ್ದವರಿಂದ ಈ ವೇಳೆ ಚಾಮುಂಡಿಬೆಟ್ಟವನ್ನು ಸಂರಕ್ಷಿತ ಪ್ರದೇಶ ಹಾಗೂ ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಿಸಬೇಕು. ಬೆಟ್ಟದಲ್ಲಿ ಹಾಗೂ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಕಡಿವಾಣ ಹಾಕಬೇಕು. ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧಿಸಿ, ನೈಸರ್ಗಿಕ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು. ಗಿಡ ನೆಡುವುದು, ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡುವುದು ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮೊದಲು ಗ್ರಾಪಂನಿಂದ ಬೆಟ್ಟದ ಆಡಳಿತವನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದುಕೊಳ್ಳಬೇಕು. ಜೊತೆಗೆ ಬೆಟ್ಟದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.