ಚಾಲಕನ ಬಳಿ ಹಣವಿಲ್ಲವೆಂದು ವಾಹನ ಸುಟ್ಟು ಹಾಕಿ ವಿಕೃತಿ ಮೆರದ ಪುಂಡರು
Team Udayavani, Jul 15, 2022, 11:21 AM IST
ಹುಣಸೂರು: ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಿ ಚಾಲಕನ ಬಳಿ ಹಣವಿಲ್ಲದ್ದನ್ನು ಕಂಡು ಪೆಟ್ರೋಲ್ ಹಾಕಿ ಆಟೋವನ್ನೇ ಸುಟ್ಟು ಹಾಕಿರುವ ಘಟನೆ ತಾಲೂಕಿನ ರತ್ನಪುರಿ ರಸ್ತೆಯ ಸಣ್ಣೇಗೌಡರ ಕಾಲೋನಿ ಬಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಹುಣಸೂರು ತಾಲೂಕಿನ ಸಂತೆಕೆರೆಕೋಡಿ ಗ್ರಾಮದ ನೂರ್ ಎಂಬಾತ ಗೂಡ್ಸ್ ಆಟೋ ಸುಟ್ಟು ಕರಕಲಾಗಿದೆ.
ರಾತ್ರಿ ಆಟೋ ಚಾಲಕ ನೂರ್ ಹುಣಸೂರು ಕಡೆಯಿಂದ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವಿನೋಬಾ ಕಾಲೋನಿಯಿಂದ ಬೈಕ್ ಸವಾರರು ಸಣ್ಣೇಗೌಡರ ಕಾಲೋನಿ ಬಳಿಯ ಹೊಸ ಕಾಲುವೆ ವರೆಗೆ ಹಿಂಬಾಲಿಸಿಕೊಂಡು ಬಂದು ಓವರ್ ಮಾಡಿ ಆಟೋವನ್ನು ನಿಲ್ಲಿಸಿ, ಹಣ ನೀಡುವಂತೆ ಬೆದರಿಸಿದ್ದಾರೆ.
ಆಟೋ ನಿಲ್ಲಿಸಿ ಹಣ ಕೇಳುತ್ತಿದ್ದಂತೆ ಯಾರೋ ದರೋಡೆ ಕೋರರಿರಬಹುದೆಂದು ಹೆದರಿದ ನೂರ್ ಕತ್ತಲಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾನೆ. ಇದರಿಂದ ಕಿಡಿಗೇಡಿಗಳು ಹತಾಶರಾಗಿ ಆಟೋಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಇದನ್ನೂ ಓದಿ:ಕೆದೂರು: ರೈಲ್ವೆ ಟ್ರ್ಯಾಕ್ ಬಳಿ ಅವಿವಾಹಿತ ಪುರುಷನ ಶವ ಪತ್ತೆ
ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಡಿವೈಎಸ್ ಪಿ ರವಿಪ್ರಸಾದ್, ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸಿ.ವಿ.ರವಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.
ಆಟೋ ಸಂಪೂರ್ಣ ಸುಟ್ಟು ಹೋಗಿದ್ದು, ಆಟೋ ಚಾಲಕ ಆಘಾತಕ್ಕೊಳಗಾಗಿದ್ದಾರೆ. ಇದರಿಂದಾಗಿ ಸಮರ್ಪಕ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಆತ ಚೇತರಿಸಿಕೊಂಡ ನಂತರವಷ್ಟೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡುಕರ ಕಾಟವೂ ಇದೆ
ರತ್ನಪುರಿ ರಸ್ತೆಯಲ್ಲಿ ರಾತ್ರಿ ವೇಳೆ ಕುಡುಕರ ಕಾಟ ಹೆಚ್ಚಿದ್ದು. ಇದು ಕುಡುಕರ ಕೃತ್ಯವೋ ಅಥವಾ ಚಾಲಕನಿಂದ ಹಣ ಕಿತ್ತುಕೊಳ್ಳಲು ಈ ರೀತಿ ಮಾಡಿದ್ದಾಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.