ಆಕರ್ಷಿಸಿದ ಗೆಡ್ಡೆ ಗೆಣಸುಗಳ ಲೋಕ
Team Udayavani, Jan 13, 2020, 3:00 AM IST
ಮೈಸೂರು: ಮೈಸೂರಿನ ಸಹಜ ಸಮೃದ್ಧ ಸಂಸ್ಥೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ ಗೆಡ್ಡೆ ಗೆಣಸು ಮೇಳದಲ್ಲಿ ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ , ಮಣ್ಣಿನ ಕಸುವನ್ನು ಪಡೆದ ಪುಷ್ಟಿದಾಯಕ ಹಾಗೂ ಶಕ್ತಿದಾಯಕ ಆಹಾರ, ಬರಗಾಲದ ಬಂಧು ಗೆಡ್ಡೆ ಗೆಣಸುಗಳ ಲೋಕ ಅನಾವರಣಗೊಂಡಿತ್ತು. ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಮೈಸೂರಿನ ಗ್ರಾಹಕರಿಗೆ ಪರಿಚಯಿಸಲು ಮೊದಲಬಾರಿಗೆ ಏರ್ಪಡಿಸಿದ್ದ ಮೇಳ ಮೈಸೂರಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಅಪರೂಪದ ಗೆಡ್ಡೆ ಗೆಣಸು: ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಇತ್ತು. ಜೇನು ಕುರುಬ, ಬೆಟ್ಟ ಕುರುಬ, ಕುಣಬಿ, ಸಿದ್ಧಿ, ಸೋಲಿಗ, ಇರುಳಿಗ ಸಮುದಾಯದ ಪ್ರತಿನಿಧಿಗಳು ಅಪರೂಪದ ಗೆಡ್ಡೆ ಗೆಣಸು ಮತ್ತು ಮೂಲಿಕೆಗಳನ್ನು ತಂದು ಸಾಂಸ್ಕೃತಿಕ ನಗರಿಯ ಜನತೆಗೆ ನೈಸರ್ಗಿಕವಾಗಿ ಬೆಳೆಯುವ, ವಿಷಮುಕ್ತವಾದ ಗೆಡ್ಡೆ ಗೆಣಸುಗಳು ಪೋಷಕಾಂಶದ ಕಣಜ ಎಂಬುವನ್ನು ಮನವರಿಕೆ ಮಾಡಿಕೊಟ್ಟರು.
ನಿಸರ್ಗದ ಅಮೂಲ್ಯ ಸಂಪತ್ತು: ಮೇಳ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸದ ಹೊರತು ಭವಿಷ್ಯವಿಲ್ಲ ಎಂದು ಹೇಳಿದರು.
ನಮ್ಮ ಪೂರ್ವಿಕರ ಆಹಾರ: ನಮ್ಮ ಪೂರ್ವಿಕರ ಆಹಾರವಾಗಿದ್ದ, ಪೋಷಕಾಂಶಗಳಿಂದ ಸಮೃದ್ಧವಾದ ನೈಸರ್ಗಿಕ ಗೆಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಕಾಡಿನ ಗೆಣಸುಗಳನ್ನು ಬೇಯಿಸಿ ತಿನ್ನುವುದರ ಮೂಲಕ ಈ ಬಾರಿಯ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಪಾಲೀಶ್ ಅಕ್ಕಿಯಿಂದ ಅನಾರೋಗ್ಯ: ಗಿರಿಜನರು, ಪಡಿತರ ಅಕ್ಕಿ ನೋಡುವ ಮೊದಲು ಕಾಡಿನ ಗೆಡ್ಡೆಗಳು ಅವರ ಅನ್ನದ ಅಗತ್ಯವನ್ನು ನೀಗಿಸುತ್ತಿದ್ದವು. ಗೆಡ್ಡೆಗಳು ಕಾಬೊìಹೈಡ್ರೇಟ್ ಹಾಗೂ ಮಾಂಸ ಪ್ರೋಟಿನ್ ಕೊಡುತ್ತಿತ್ತು. ಗೆಣಸು ಕೀಳುವ ಕ್ರಮ ಕೂಡ ನಿಸರ್ಗದ ಜತೆ ಹೊಂದಾಣಿಕೆಯಾಗಿತ್ತು. ಅರ್ಧ ಭಾಗವನ್ನು ನೆಲದಲ್ಲೇ ಬಿಟ್ಟು, ಮುಂದಿನ ಹಂಗಾಮಿಗೆ ಬಳ್ಳಿ ಬರುವಂತೆ ಅನುವು ಮಾಡಿಕೊಡಲಾಗುತ್ತಿತ್ತು. ಅವರ ಕಾಡಿನ ಜ್ಞಾನ ಮತ್ತು ಅನ್ನ ಸಂಸ್ಕೃತಿಯ ಸಂಭ್ರಮವನ್ನು ಹಾಳು ಮಾಡಿ, ಅನಾರೋಗ್ಯ ಆಹ್ವಾನಿಸುವ ಪಾಲೀಶ್ ಅಕ್ಕಿ ನೀಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಕೃತಿಯ ಅಮೂಲ್ಯ ಕೊಡುಗೆ: ಜಾನಕಮ್ಮ ಮಾತನಾಡಿ, ನಿಸರ್ಗದ ಕಾಣಿಕೆಯಾದ ಗೆಡ್ಡೆ ಗೆಣಸನ್ನು ವ್ಯವಸಾಯದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಹೆಚ್ಚು ಶ್ರಮವಿಲ್ಲದೆ ಬೆಳೆಯಬಹುದಾದ ಕಂದಮೂಲಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು° ಉಳಿಸಿಕೊಳ್ಳಬೇಕಿದೆ ಎಂದರು. ಧಾರವಾಡದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ಅರುಣ ಕುಮಾರ್ ಭಾದೊಡ್ಡಿ ಹಾಜರಿದ್ದರು. ಎಪಿಎಂಸಿ ಉಪಾಧ್ಯಕ್ಷ ಜೆ. ಚಿಕ್ಕ ಜವರಪ್ಪ ಗೆಡ್ಡೆ ಗೆಣಸಿನ ಅದ್ಭುತ ಲೋಕ ಪುಸ್ತಕ ಬಿಡುಗಡೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.