ಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸುವುದೇ ತಮ್ಮ ಉದ್ದೇಶ


Team Udayavani, Jan 21, 2018, 12:02 PM IST

m6-pattanna.jpg

ಹುಣಸೂರು: ನಗರ ವ್ಯಾಪ್ತಿಯಲ್ಲಿ ಮುಂದಿನ 25-30 ವರ್ಷಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು ತಮ್ಮ ಉದ್ದೇಶವಾಗಿದ್ದು, ಸುಗಮ ಸಂಚಾರ, ವ್ಯವಸ್ಥಿತ ರಸ್ತೆ ಚರಂಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಶ್ರಮ ಹಾಕುತ್ತೇನೆ ಎಂದು ನೂತನ ಅಧ್ಯಕ್ಷ ಎಂ.ಶಿವಕುಮಾರ್‌ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ತಮ್ಮ ಗುರಿಯಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳ ಜಾರಿಯ ಜೊತೆಗೆ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೆ ಆದ್ಯತೆ ನೀಡುತ್ತೇನೆ ಎಂದರು.

ನಗರೋತ್ಥಾನ ಯೋಜನೆಯಡಿ ಹುಣಸೂರು ನಗರಸಭೆಗೆ 20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಪೈಕಿ 16.4 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಪ್ರತಿ ವಾರ್ಡ್‌ಗೆ ಕನಿಷ್ಠ  40 ಲಕ್ಷ ರೂ.ಯಿಂದ 1 ಕೋಟಿ ರೂ.ವರೆಗೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರ ಪ್ರಾರಂಭಗೊಳ್ಳಲಿದೆ. ಈಗಾಗಲೇ ಹುಣಸೂರು ನಗರಾಭಿವೃದ್ಧಿ ಪ್ರಾಧಿಕಾರ(ಹೂಡಾ) ಅಸ್ತಿತ್ವದಲ್ಲಿದ್ದು, ಶೀಘ್ರವೇ ಮೆಗಾ ಮಾಸ್ಟರ್‌ ಪ್ರಾಜೆಕ್ಟ್ ಯೋಜನೆ ಜಾರಿಗೊಳಿಸುವತ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯೂ ಮಾರುತಿಬಡಾವಣೆ, ಮಂಜುನಾಥಬಡಾವಣೆ, ಮತ್ತಿತರ ಲೇ ಔಟ್‌ಗಳಲ್ಲಿ ರಸ್ತೆ-ಚರಂಡಿಗೆ ಆದ್ಯತೆ ನೀಡುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಶೀಘ್ರ ಕ್ರಮವಹಿಸುತ್ತೇನೆ, ಕೆಲ ಬಡಾವಣೆ ನಿರ್ಮಿಸುವಾಗ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೆಗೊಳ್ಳಲಾಗುವುದು ಎಂದು ತಿಳಿಸಿದರು.

ಕಂದಾಯ ವಸೂಲಿಗೆ ಕ್ರಮ: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಕಂದಾಯಗಳನ್ನು ಬಾಕಿ ಉಳಿಸಿಕೊಂಡಿರುವ ಬಾಕಿದಾರರರಿಂದ ಕಂದಾಯ ವಸೂಲಾತಿಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ನೀರು ಪೂರೈಸಲು ಹಾಲಿ ಇರುವ ಪಂಪ್‌ಹೌಸ್‌ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈಗಿರುವ ಪಂಪ್‌ಹೌಸ್‌ ಬಳಿ ಸರ್ಕಾರಿ ಭೂಮಿ ಗುರುತಿಸಿ ಪಂಪ್‌ಹೌಸ್‌ನ್ನು ಉನ್ನತ ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಫ್ಲೆಕ್ಸ್‌ಗೆ ಕಡಿವಾಣ: ನಗರದ ಸುಂದರ ಪರಿಸರವನ್ನೇ ಹಾಳು ಮಾಡುವ ಫ್ಲೆಕ್ಸ್‌-ಕಟೌಟ್‌ಗಳನ್ನು ಎಲ್ಲೆಂದರಲ್ಲಿ ಅಳವಡಿಸುತ್ತಿದ್ದು, ಇನ್ನು ಮುಂದೆ ನಿಗದಿತ ಜಾಗದಲ್ಲೇ ಆಳವಡಿಸಬೇಕು ಹಾಗೂ ಅವಧಿಯೊಳಗೆ ಅಳವಡಿಸಿದವರೇ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೆಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುಂದರ ನಗರ-ಸುಗಮ ಸಂಚಾರಕ್ಕೆ ಕ್ರಮ: ಇನ್ನು ಹೆಚ್ಚು ಜನ-ವಾಹನ ದಟ್ಟಣೆ ಇರುವ ಬೆಪಾಸ್‌ರಸ್ತೆ, ಕೋರ್ಟ್‌ ಸರ್ಕಲ್‌ ಮತ್ತು ಕಲ್ಕುಣಿಕೆ ವತ್ತದಲ್ಲಿ ಸಿಗ್ನಲ್‌ ಲೈಟ್‌ ಅಳವಡಿಕೆ ಹಾಗೂ ನಗರವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರಬರೆಯಲಾಗುವುದು ಹಾಗೂ ಸುಸಜ್ಜಿತ ಖಾಸಗಿ ವಾಹನನಿಲ್ದಾಣ, ಕೈಗಾರಿಕಾ-ವಸತಿ ಪ್ರದೇಶ, ಫ‌ುಟ್‌ಪಾತ್‌ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಸ್ಟರ್‌ ಪ್ರಾಜೆಕ್ಟ್ ಮೂಲಕವೇ ಆಗಬೇಕಿದ್ದು ಈ ಬಗ್ಗೆಯೂ ಗಮನ ಹರಿಸುತ್ತೇನೆ.

ಸಾರ್ವಜನಿಕ ಭೇಟಿಗೆ ಅವಕಾಶ: ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆವರೆಗೆ ಕಚೇರಿಯಲ್ಲಿ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು. ಸದಸ್ಯರಾದ ಸುನಿತಾ, ಜಯರಾಮೇಗೌಡ, ಹಜರತ್‌ಜಾನ್‌, ಶಿವರಾಜ್‌, ಸತೀಶ್‌ಕುಮಾರ್‌, ಕೃಷ್ಣರಾಜ ಗುಪ್ತ, ಎಚ್‌.ವೈ.ಮಹದೇವ್‌, ಶರವಣ ಇತರರು ಇದ್ದರು.

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.