ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಾಯಕತ್ವದ ಬಿ-ಟೀಂ ಇದೆ


Team Udayavani, Mar 28, 2018, 12:40 PM IST

m2-kainalli.jpg

ಮೈಸೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಜೆಡಿಎಸ್‌, ಬಿಜೆಪಿಯ ಬಿ-ಟೀಂ ಎಂದು ಸಿದ್ದರಾಮಯ್ಯ ಹೇಳಿಸಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್‌ನಲ್ಲೇ ಸಿದ್ದರಾಮಯ್ಯ ನಾಯಕತ್ವದ ಜೆಡಿಎಸ್‌ನ ಬಿ-ಟೀಂ ಇದೆ, ಕಾಂಗ್ರೆಸ್‌ ವರ್ಸಸ್‌ ಸಿದ್ದರಾಮಯ್ಯ ಆಗಿದೆ ಎಂದು ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಂಸದ ಎಚ್‌.ವಿಶ್ವನಾಥ್‌ ತಿರುಗೇಟು ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಟೀಂನಲ್ಲಿರುವವರೆಲ್ಲಾ ಆಟ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನ ಪ್ರಮುಖ ಆಟಗಾರರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ ಅಂತಹ ಅನೇಕರು ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.

ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಹಣ ಪಡೆದು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ, ಇದೀಗ ಜೆಡಿಎಸ್‌ ತೊರೆದು  ಕಾಂಗ್ರೆಸ್‌ ಸೇರಿದ ಏಳು ಜನ ಶಾಸಕರೂ ಎಕ್ಸಟ್ರಾ ಪ್ಲೇಯರ್ ಆಗಿದ್ದಾರೆ. ಬೌಂಡರಿಯಿಂದ ಹೊರಗೆ ಬಿದ್ದ ಬಾಲು ತರುವುದು, ಆಟಗಾರರಿಗೆ ನೀರು, ಜ್ಯೂಸ್‌ ತಂದು ಕೊಡುವುದು, ಬೆವರು ಒರೆಸಲು ಟವಲ್‌ ತಂದುಕೊಡುವುದು ಇವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ರಾಹುಲ್‌ ಅಪ್ರಬುದ್ಧ ನಾಯಕ: ಮೈಸೂರು ಭಾಗದಲ್ಲಿ ಎರಡು ದಿನಗಳ ಕಾಲ ಜನಾಶೀರ್ವಾದ ಯಾತ್ರೆ ನಡೆಸಿದ ರಾಹುಲ್‌ ಗಾಂಧಿ, ಒಂದು ದೊಡ್ಡ ಪಕ್ಷದ ಅಧ್ಯಕ್ಷರಾಗಿ, ಲೋಕಸಭಾ ಸದಸ್ಯರಾಗಿದ್ದರೂ ಆಡಳಿತದ ಅನುಭವ, ಗಾಂಭೀರ್ಯತೆ ಇಲ್ಲ. ಅವರೊಬ್ಬ ಅಪ್ರಬುದ್ಧ ನಾಯಕ ಎಂದು ಟೀಕಿಸಿದರು. ಭಾರತದಂತಹ ದೊಡ್ಡ ರಾಷ್ಟ್ರದ ಭಾವಿ ಪ್ರಧಾನಿ ಎಂದು ಬಿಂಬಿಸಿಕೊಂಡಿರುವವರಿಗೆ ಎನ್‌ಸಿಸಿ ಎಂದರೇನೆಂದು ಗೊತ್ತಿಲ್ಲ. ಸಾಮಾನ್ಯ ಜಾnನವೇ ಇಲ್ಲದವರನ್ನು ರಾಷ್ಟ್ರದ ನಾಯಕ ಎಂದು ಯಾರು ಒಪ್ಪಿ$ಕೊಳ್ಳುತ್ತಾರೆ ಎಂದು ಟೀಕಿಸಿದರು.

ರಾಜ್ಯದ ನಾಯಕರ ಮರೆತ ರಾಗಾ: ಯಾರೋ ಬರೆದುಕೊಟ್ಟದ್ದನ್ನು ಓದುವ ರಾಹುಲ್‌ ಗಾಂಧಿ, ಹಿರಿಯ ನಾಯಕ ಎಚ್‌.ಡಿ.ದೇವೇಗೌಡರ ಬಗ್ಗೆ ಮಾತನಾಡುತ್ತೀರಾ? ರಾಜಕೀಯ ಸಂಸ್ಕೃತಿ ಗೊತ್ತಿಲ್ಲದ ಬಗ್ಗೆ ನಿಮ್ಮ ಮಾತುಗಳೇ ಹೇಳುತ್ತವೆ. ಡಿ.ದೇವರಾಜ ಅರಸು, ಸಾಹುಕಾರ್‌ ಚೆನ್ನಯ್ಯ, ಅಜೀಜ್‌ ಸೇs…, ಎನ್‌.ರಾಚಯ್ಯ, ಎಚ್‌.ಎಂ.ಚನ್ನಬಸಪ್ಪ, ಕೆ.ಎಸ್‌.ನಾಗರತ್ನಮ್ಮ ಅವರಂತಹ ಘಟಾನುಘಟಿ ನಾಯಕರನ್ನು ಕೊಟ್ಟ ಜಿಲ್ಲೆ ಅವಿಭಜಿತ ಮೈಸೂರು. ಅಂತಹ ಜಿಲ್ಲೆಗೆ ಬಂದು ಏನು ಮಾತನಾಡಬೇಕು ಅನ್ನುವುದು ಗೊತ್ತಿಲ್ಲ ನಿಮಗೆ.

ಚಿಕ್ಕ ಮಗಳೂರು ಜಿಲ್ಲೆಯಲ್ಲಿ ನಮ್ಮ ಅಜ್ಜಿ (ಇಂದಿರಾಗಾಂಧಿ)ಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ ಎಂದು ಹೇಳಿದ್ದೀರಾ, ಅಂದು ಮೊರಾರ್ಜಿ ದೇಸಾಯಿ ಅವರು ಕಾಂಗ್ರೆಸ್‌ ಸದಸ್ಯತ್ವದಿಂದ ವಜಾ ಮಾಡಿದ ಮೇಲೆ ದಿಕ್ಕುಗಾಣದಂತಾಗಿದ್ದ ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆತಂದು ಲೋಕಸಭಾಸದಸ್ಯರನ್ನಾಗಿಸಿ ಘನತೆ, ಗೌರವ ತಂದುಕೊಟ್ಟವರು ಡಿ.ದೇವರಾಜಅರಸು, ಅದಕ್ಕೆ ನೆರವಾದವರು ಡಿ.ಬಿ.ಚಂದ್ರೇಗೌಡರು. ಅಂತಹವರು ಮರೆತು ಹೋದರಾ ನಿಮಗೆ ? ಅಥವಾ ನಿಮಗೆ ಬರೆದು ಕೊಟ್ಟವರು ಈ ಅಂಶಗಳನ್ನು ಸೇರಿಸಿರಲಿಲ್ಲವೇ ಎಂದು ಟೀಕಿಸಿದರು.

3500ರೈತರ ಆತ್ಮಹತ್ಯೆ, ಧರ್ಮದ ಹೆಸರಿನಲ್ಲಿ ಯುವಕರ ಮಾರಣಹೋಮ ಸೇರಿದಂತೆ ಅನೇಕ ಘಟನೆ ನಡೆದಿದೆ. ಮಲ್ಲಿಕಾರ್ಜುನಖರ್ಗೆ, ಡಾ.ಜಿ.ಪರಮೇಶ್ವರ್‌, ವಿ.ಶ್ರೀನಿವಾಸಪ್ರಸಾದ್‌ ಸೇರಿದಂತೆ ಅನೇಕರಿಗೆ ಸಿದ್ದರಾಮಯ್ಯ ಅಸೂಯೆಪಟ್ಟರು. ಇನ್ನು ಸಿದ್ದರಾಮಯ್ಯಗೆ ಬಹುವಚನವೇ ಗೊತ್ತಿಲ್ಲ. 1300 ಕೋಟಿ ಜಾಹಿರಾತುಕೊಟ್ಟು ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರಿಗೆ ಅಂತರಂಗ-ಬಹಿರಂಗ ಎರಡೂ ಶುದ್ಧಿಯಾಗಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರಿಗೆ ಹಣ ಬಲ, ಭುಜ ಬಲ ಎರಡೂ ಇದೆ. ಹುಣಸೂರು ಕ್ಷೇತ್ರದಲ್ಲಿ ನಮ್ಮ ಸಮಾಜದವರನ್ನು ಕರೆಸಿ ಮಾತನಾಡುತ್ತಿದ್ದಾರೆ. ದುಡ್ಡಿಲ್ಲದೆ ಚುನಾವಣೆ ಆಗಲ್ಲ. ಆದರೆ, ದುಡ್ಡೇ ಎಲ್ಲವೂ ಅಲ್ಲ. ಆಗಿದ್ದರೆ, ಮಾರ್ವಾಡಿಗಳೆಲ್ಲ ಶಾಸಕರಾಗಿರುತ್ತಿದ್ದರು, ನೋಡೋಣ ಜನ ಇದ್ದಾರೆ.
-ಎಚ್‌.ವಿಶ್ವನಾಥ್‌, ಮಾಜಿ ಸಂಸದ

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.