ಶಿಕ್ಷಣ ನೀತಿ ರೂಪಿಸುವಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು
Team Udayavani, Sep 21, 2019, 3:00 AM IST
ಮೈಸೂರು: ಶಿಕ್ಷಣ ನೀತಿ ರೂಪಿಸುವ ವಿಚಾರದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡದೇ ತಟಸ್ಥವಾಗಿರಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ ಹೇಳಿದರು. ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ವತಿಯಿಂದ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ನುರಿತ ತಜ್ಞರ ಸಮಿತಿ ರಚಿಸಿ ಅವರು ನೀಡುವ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಷ್ಟೇ ಸರ್ಕಾರದ ಕೆಲಸವಾಗಿರಬೇಕು.
ಇತ್ತೀಚೆಗೆ ಪಠ್ಯಪುಸ್ತಕ ಒಂದರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಇದ್ದ ಪಠ್ಯವನ್ನು ಬದಲಾಯಿಸಿ, ಆರ್‌ಎಸ್‌ಎಸ್ ಇತಿಹಾಸದ ಬಗ್ಗೆ ಪಠ್ಯ ಅಳವಡಿಸಲಾಗಿದೆ. ಇದು ಸಹಿಸಲಸಾಧ್ಯ ಎಂದರು. ಶಿಕ್ಷಕರು ಮತ್ತು ಅಧ್ಯಾಪಕರು ಒಂದು ರಾಜಕೀಯ ಪಕ್ಷ ಅಥವಾ ಒಂದು ಸಿದ್ಧಾಂತಕ್ಕೆ ವಾಲದೇ, ಮಕ್ಕಳಿಗೆ ಎಲ್ಲಾ ತತ್ವ ಸಿದ್ಧಾಂತ ಹಾಗೂ ವಿಚಾರಗಳನ್ನು ಹೇಳಿಕೊಡಬೇಕು. ಇದರಿಂದ ಶಿಕ್ಷಣ ವ್ಯವಸ್ಥೆ ಸುಧಾರಿಸುವುದಲ್ಲದೇ ಒಳ್ಳೆಯ ಪ್ರಜೆಗಳು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿದೇಶಿ ಬಂಡವಾಳ: ಇಂದು ವಿದೇಶಿ ಬಂಡವಾಳ ಹೂಡುವಂತೆ ಹೊರದೇಶದ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಲಾಗುತ್ತಿದೆ. ಇದು ಏಕೆ ? ನಮ್ಮಲ್ಲಿ ನಮಗೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವ ಯೋಗ್ಯತೆ ಮತ್ತು ಸಾಮರ್ಥ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಒಂದು ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟದಕ್ಕೆ ನೂರಾರು ವರ್ಷಗಳಕಾಲ ನಮ್ಮನ್ನಾಳುವಂತಾಯಿತು. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ಸ್ಥಿತಿ ಮುಂದೆ ಏನು ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೊಸ ಭಾರತ: ದೇಶದಲ್ಲಿ ಇಂದಿಗೂ ಶೇ.30ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸ್ವಾತಂತ್ರ್ಯ ಬಂದು 72 ವರ್ಷವಾದರು ಅವರಿಗೆ ಸ್ವಾಂತಂತ್ರ್ಯ ಸಿಕ್ಕಿಲ್ಲ. ಸಿಕ್ಕಿರುವುದು ಮೋದಿ, ಬಿಎಸ್‌ವೈ, ಸಿದ್ದರಾಮಯ್ಯನಂತವರಿಗೆ. ಬಡಜನರಿಗೆ ಮತದಾನ ಹಕ್ಕು ನೀಡಿದ್ದೀರಿ, ಉದ್ಯೋಗ, ನೆಲೆ, ಮನೆ ಆಹಾರ ನೀಡುತ್ತಿಲ್ಲ. ಹಲವಾರು ಪಂಚವಾರ್ಷಿಕ ಯೋಜನೆ ರೂಪಿಸಿ ಕೋಟಿ ಕೋಟಿ ಹಣ ವ್ಯಯಮಾಡಲಾಯಿತು. ಆದರೆ ಬಡವರನ್ನು ಹಾಗೆಯೇ ಇಟ್ಟರು. ಇದುವರೆಗೂ ಅವರ ಕಷ್ಟವನ್ನು ಯಾರೂ ಕೇಳಲಿಲ್ಲ. ಈ ಬಗ್ಗೆ ನಾವೂ ಚಿಂತನೆ ಮಾಡುತ್ತಿಲ್ಲ. ಮುಂದೆ ಹೀಗಾಗಬಾರದು ವಿದ್ಯಾರ್ಥಿಗಳಿಗೆ ಹೊಸ ಭಾರತ, ಹೊಸ ಭಾವನೆಯ ಬಗ್ಗೆ ತಿಳಿವಳಿಕೆ ಮೂಡಿಸಿ ಹೊಸ ಕ್ರಾಂತಿಯನ್ನು ಕಟ್ಟಬೇಕಿದೆ ಎಂದರು.
ಗಾಂಧೀಜಿ ಅವರನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ತಂದದ್ದು, ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಧ್ಯೇಯ ಈಡೇರಿದ ಮೇಲೆ ಪಕ್ಷದ ಅಸ್ತಿತ್ವ ಬೇಡ ಎಂದು ಗಾಂಧಿ ಹೇಳಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ವೈ. ಶ್ರೀಕಾಂತ್, ಪ್ರಾಧ್ಯಾಪಕರು ಇದ್ದರು.
ಅನ್ನ, ಉದ್ಯೋಗ, ಸಂಪತ್ತು ಕಿತ್ತುಕೊಂಡರೂ ಪ್ರಶ್ನಿಸುತ್ತಿಲ್ಲ: ಇಂದು ಮಾಲ್ ಸಂಸ್ಕೃತಿ ಮತ್ತು ಅತ್ಯಾಧುನಿಕ ಯಂತ್ರಗಳು ದೇಶಕ್ಕೆ ಕಾಲಿಟ್ಟು ಬಡಜನರ ಅನ್ನ, ಉದ್ಯೋಗ, ಸಂಪಾದನೆ ಎಲ್ಲವನ್ನೂ ಕಿತ್ತುಕೊಳ್ಳುತ್ತಿವೆ. ಇದೆಲ್ಲವೂ ಆಶಿಕ್ಷಣ ನೀತಿ, ಸರ್ಕಾರ, ಹಸ್ತಕ್ಷೇಪ, Education Policy, Government, Interventionಡಳಿತ ನಡೆಸುತ್ತಿರುವವರಿಗೆ ತಿಳಿಯುತ್ತಿಲ್ಲವೇ?, ಇದನ್ನು ನೋಡಿ ಯಾರು ಪ್ರಶ್ನಿಸುತ್ತಿಲ್ಲ?, ಇಂದು ಎಲ್ಲರೂ ವಿದೇಶಿ ಸಾಮಗ್ರಿಗಳನ್ನು ಬಳಕೆ ಮಾಡುತ್ತಿದ್ದಾರೆ. ಸ್ವದೇಶಿ ವಸ್ತುಗಳೆಂದರೆ ಮೂಗು ಮುರೆಯುತ್ತಾರೆ. ಹೀಗಾದರೆ ದೇಶದ ಭವಿಷ್ಯ ಏನು?, ಗಾಂಧೀಜಿಯವರಂತೆ ನಮ್ಮ ಬದುಕಿನಲ್ಲಿ ಸರಳ ಜೀವನ ಅಳವಡಿಸಿಕೊಂಡು ನಮ್ಮ ಸ್ವದೇಶಿ ವಸ್ತುಗಳನ್ನೇ ಬಳಕೆ ಮಾಡಬೇಕು. ಇದು ಫ್ಯಾಶನ್ ಆಗದೇ ಬದುಕಿನ ಒಂದು ಭಾಗವಾಗಬೇಕು ಎಂದು ದೊರಸ್ವಾಮಿ ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.