ಗತಕಾಲದ ಚರ್ಚೆಯೊಡನೆ ಚಿಂತನೆ ಮುಖ್ಯ
Team Udayavani, Mar 4, 2020, 3:00 AM IST
ಮೈಸೂರು: ಸಾಹಿತ್ಯಕ್ಕೂ ಮಾನವನ ಬದುಕಿಗೂ ಅವಿನಾಭಾವ ಸಂಬಂಧವಿದೆ. ಬದುಕು ಹಿಂದೆಂದಿಗಿಂತಲೂ ಇಂದು ಬಹಳಷ್ಟು ಬದಲಾಗಿದೆ. ವೇಗದ ಬದುಕಿನೊಂದಿಗೆ ವ್ಯವಹಾರವೂ ಸೇರಿಕೊಂಡಿದೆ. ಈ ಬದುಕಿಗೆ ಇಂದಿನ ಸಾಹಿತ್ಯದ ಸ್ಪಂದನೆ ಕುರಿತು ಆಲೋಚಿಸಬೇಕಾದ ಅಗತ್ಯತೆ ಇದೆ. ಗತಕಾಲದ ಚರ್ಚೆಯೊಡನೆ ವರ್ತಮಾನದ ಚಿಂತನೆ ಬಹಳ ಮುಖ್ಯ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಹೇಳಿದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗದಿಂದ ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ಸಮಕಾಲೀನ ಕನ್ನಡ ಸಾಹಿತ್ಯ- ಸವಾಲು ಮತ್ತು ಸಾಧ್ಯತೆಗಳು ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಂವೇದನಾಶೀಲತೆ ಕಡಿಮೆ: ಮಾನವನ ಇಂದಿನ ವ್ಯವಹಾರಿಕ ದೃಷ್ಟಿಯಿಂದ ವ್ಯಕ್ತಿಯ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆ ಕಡಿಮೆಯಾಗುತ್ತಿದೆ. ಇದು ಅಧ್ಯಯನ ಮತ್ತು ಬರವಣಿಗೆಗೆ ಬಹುದೊಡ್ಡ ತೊಡಕಾಗಿದೆ. ಇಂದು ನಾವು ಬರಿ ಮಾತಿನ ಯುಗದಲ್ಲಿದ್ದೇವೆ. ಹಗಲು ರಾತ್ರಿಯೆನ್ನದೆ ಮಾತಿನಲ್ಲಿ ತೊಡಗಿದ್ದೇವೆ. ಈ ಮಾತು ಮೌನವನ್ನು ಕೊಲ್ಲುತ್ತಿದೆ. ಮೌನ ಮಾನವನ ಬದುಕಿಗೆ ಅತ್ಯಗತ್ಯವಾದುದು. ಇದರಿಂದ ಮಾತ್ರವೇ ಆತ್ಮಾವಲೋಕನ ಸಾಧ್ಯ. ಆದರೆ ಆತ್ಮಾವಲೋಕನವಿಲ್ಲದೆ ಅಭಿರುಚಿ ಹಾಳಾಗುತ್ತಿದೆ ಎಂದರು.
ಮಸುಕು ಮಸುಕಾದ ಬದುಕು ನಮ್ಮದಾಗಿದೆ: ನವೋದಯದ ನಾಡು-ನುಡಿಯ ಮತ್ತು ಪ್ರಕೃತಿ ಪ್ರೇಮದ ತೀವ್ರತೆ ನಮ್ಮಲ್ಲಿ ಮಾಯವಾಗಿದೆ. ಮಸುಕು ಮಸುಕಾದ ಬದುಕು ನಮ್ಮದಾಗಿದೆ. ಯಾವುದೂ ನಿಂತಿಲ್ಲ, ನಡೆಯುತ್ತಿದೆ. ಆದರೆ ಅದು ಸತ್ವವನ್ನು, ಸಾಮರ್ಥ್ಯವನ್ನು ಕಳೆದುಕೊಂಡಿದೆ. ಇಂತಹ ವಿಚಾರ ಸಂಕಿರಣಗಳಿಂದ, ಕಾರ್ಯಕ್ರಮಗಳಿಂದ ಅವಲೋಕನ ಮಾಡುವ ಮೂಲಕ ದಾರಿಯನ್ನು ಗುರುತಿಸಬೇಕಾಗಿದೆ, ಸರಿಯಾದ ದಾರಿಯತ್ತ ನಡೆಯಬೇಕಾಗಿದೆ ಎಂದರು.
ಇಂಗ್ಲಿಷ್ ವ್ಯಾಮೋಹ ಬಿಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಕರ್ನಾಟಕದಲ್ಲಿರುವವರೆಲ್ಲರಿಗೂ ಕನ್ನಡ ಹೆತ್ತತಾಯಿಯಂತೆ. ಅದನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಇಂದು ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ ಕಡಿಮೆಯಾಗಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವಿದು. ಇಂಗ್ಲಿಷ್ ವ್ಯಾಮೋಹವನ್ನು ಬಿಡಬೇಕು. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗಮನಾರ್ಹವಾದುದು. ಈ ದಿಸೆಯಲ್ಲಿ ಸಮರ್ಪಕವಾದ ಕಾನೂನುಗಳನ್ನು,ಯೋಜನೆಗಳನ್ನು ತಂದಲ್ಲಿ ಕನ್ನಡದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಮಹದೇವಪ್ಪ ಉಪಸ್ಥಿತರಿದ್ದರು. ಸೃಜನಶೀಲ ಸಾಹಿತ್ಯ ಕುರಿತು ಪ್ರೊ. ಅಮರೇಶ ನುಗಡೋಣಿ, ಸೃಜನೇತರ ಸಾಹಿತ್ಯ ಕುರಿತು ಪ್ರೊ. ಮಾಧವ ಪೆರಾಜೆ, ಅನುವಾದ ಸಾಹಿತ್ಯ ಕುರಿತು ಪ್ರೊ.ವಿ.ಬಿ. ತಾರಕೇಶ್ವರ ಮಾತನಾಡಿದರು. ದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!
MUST WATCH
ಹೊಸ ಸೇರ್ಪಡೆ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.