ಈ ಬಾರಿಯ ಗಜಯಾನಕ್ಕೆ ಸಾಂಸ್ಕೃತಿಕ ಮೆರಗು
Team Udayavani, Aug 13, 2017, 11:41 AM IST
ಹುಣಸೂರು: ಮೈಸೂರು ದಸರಾದ ಮುನ್ನುಡಿ ಗಜಪಯಣದ ಸಂಭ್ರಮಕ್ಕೆ ಈ ಬಾರಿ ಅದ್ಧೂರಿಯಾಗಿ ನಡೆದ ಗಜಪಯಣಕ್ಕೆ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಡೊಳ್ಳುಕುಣಿತ, ವೀರಗಾಸೆ, ಬೊಂಬೆ ಕುಣಿತ, ಮಂಗಳವಾದ್ಯ ಆಯೋಜಿಸಿದ್ದರೆ, ಮತ್ತೂಂದೆಡೆ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸೌರಭದ ವೈಭವವನ್ನೇ ಮೆರೆಸಿತು.
ಉದ್ಘಾಟನಾ ಕಾರ್ಯಕ್ರಮದ ನಂತರ ಬೃಹತ್ ವೇದಿಕೆಯಲ್ಲಿ ಸ್ಥಳೀಯ ಆದಿವಾಸಿ ಹಾಡಿಯ ಮಕ್ಕಳು, ಟಿಬೆಟ್ ಮಕ್ಕಳು ಹಾಗೂ ಹುಣಸೂರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಲವಾರು ರಂಗು ರಂಗಿನ ನೃತ್ಯ ಪ್ರದರ್ಶನಗಳ ಮೂಲಕ ನೆರೆದಿದ್ದ ಜನರನ್ನು ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದರು.
ನತ್ಯಕ್ಕೂ ಸೈ, ಡಿಸ್ಕೋಗೂ ನಾವ್ ರೆಡಿ: ಕಾರ್ಯಕ್ರಮದ ಆರಂಭಕ್ಕೆ ನಾಗಾಪುರ ಆಶ್ರಮ ಶಾಲೆಯ ಮಕ್ಕಳು ಹಚ್ಚೆವು ಕನ್ನಡದ ದೀಪದ ಕನ್ನಡ ನುಡಿಗೆ ಹೆಜ್ಜೆ ಹಾಕಿ ಶುಭ ಕೋರಿದರು. ಗಣ್ಯರ ಭಾಷಣದ ನಂತರ ಮೈಸೂರಿನ ನೃತ್ಯಗಿರಿ ನಾಟ್ಯ ತಂಡದವರು ಪ್ರದರ್ಶಿಸಿದ ಗಜಮುಖ ನೃತ್ಯ ರೂಪಕವು ಗ್ರಾಮೀಣ ಪ್ರದೇಶ ಹಾಗೂ ಹಾಡಿ ಮಂದಿಯನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.
ವೀರನಹೊಸಹಳ್ಳಿ ಹಾಗೂ ನಲ್ಲೂರುಪಾಲ ಆಶ್ರಮ ಶಾಲೆ, ನಾಗಾಪುರ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ಪ್ರದರ್ಶಿಸಿದ ನೃತ್ಯ ವೈಭವದ ಜೊತೆಗೆ ಕನ್ನಡ, ತಮಿಳ್, ತೆಲಗು ಹಾಡುಗಳಿಗೆ ಹೆಜ್ಜೆ ಹಾಕಿದರು, ಕಾಡಕುಡಿಗಳ ನೃತ್ಯ ಕಂಡ ನೆರೆದಿದ್ದವರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಆದಿವಾಸಿಗಳು ತಮ್ಮ ಮಕ್ಕಳ ಕುಣಿತದಿಂದ ಸಂತಸಗೊಂಡು ಕೇಕೆ ಹಾಕುತ್ತಾ ಕಣ್ತುಂಬಿಕೊಂಡರು.
ನಾಗಾಪುರ ಪಕ್ಕದ ಹರಳಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಕಾಡು ಮತ್ತು ವನ್ಯಜೀವಿಗಳ ಕುರಿತಾದ ದೂರಿ-ದೂರಿ ಹಾಡಿಗೆ ಸಖತ್ ಹೆಜ್ಜೆ ಹಾಕಿ ನೆರೆದಿದ್ದ ಆದಿವಾಸಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ನಲ್ಲೂರು ಪಾಲದ ಸಜನ ಸರೋವರ ಶಾಲೆ, ಗುರುಪುರ ಸರಕಾರಿ ಪ್ರೌಢಶಾಲೆಗಳ ಮಕ್ಕಳು ನೀಡಿದ ಅಮೋಘ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಹುಣಸೂರಿನ ಸಂತಜೋಸಫರ ಪಿ.ಯು.ಕಾಲೇಜಿನ ಎಕೋ ಕ್ಲಬ್‌ನ ವಿದ್ಯಾರ್ಥಿಗಳು ಅಡವಿದೇವಿಯ ಹಾಡಿಗೆ ಗಿರಿಜನರ ವೇಷ ಧರಿಸಿ ಪ್ರಸ್ತುತ ಪಡಿಸಿದ ನತ್ಯ, ಅದುಲಾಂ ಶಾಲೆಯ ವಿದ್ಯಾರ್ಥಿಗಳು ಹಿಂದಿ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದವರ ಮನಸ್ಸನ್ನು ಮುದಗೊಳಿಸಿದರು. ಗುರುಪುರ ಟಿಬೇಟಿಯನ್ ಕೇಂದ್ರೀಯ ಶಾಲೆ ವಿದ್ಯಾರ್ಥಿಗಳು ತಮ್ಮದೇ ಭಾಷೆ-ಸಂಸ್ಕೃತಿಗೆ ಪೂರಕವಾದ ಹಾಡಿನೊಂದಿಗೆ ನೃತ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಸಾಂಸ್ಕೃತಿಕ ಸ್ವಾಗತ: ಗಜಪಯಣಕ್ಕೆ ಬೆಳಗಿನಿಂದಲೇ ಆಗಮಿಸಿದ ಸುತ್ತಮುತ್ತಲ ಹಳ್ಳಿಯವರು ಹಾಗೂ ಅನತಿ ದೂರದಿಂದ ಬಂದ ಪ್ರವಾಸಿಗರು, ವಿದೇಶಿಯರಿಗೆ ನಾಗರಹೊಳೆ ಮುಖ್ಯರಸ್ತೆಯಲ್ಲಿ ಭವ್ಯವಾಗಿ ನಿರ್ಮಿಸಿದ್ದ ಗಜಪಯಣಕ್ಕೆ ಚಾಲನೆ ನೀಡುವ ಸ್ವಾಗತ ಕಮಾನಿನ ಬಳಿ ಡೊಳ್ಳುಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತದ ಮೂಲಕ ಸಾಂಸ್ಕೃತಿಕ ರಂಗು ಮೆರೆದರು.
ಆನಂತರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಎಚ್.ಪಿ.ಮಂಜುನಾಥ್, ಮೇಯರ್ ರವಿಕುಮಾರ್, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವೃದದವರನ್ನು ಪೂರ್ಣಕುಂಭ ಹಾಗೂ ಸಾಂಸ್ಕೃತಿಕ ವೈಭವದಿಂದ ಬರಮಾಡಿಕೊಳ್ಳಲಾಯಿತು.
ಬಾರದ ಭೀಮ: ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಮತ್ತಿಗೋಡು ಆನೆ ಶಿಬಿರದ 17 ವರ್ಷದ ಬಲಭೀಮನ ನಿರೀಕ್ಷೆಯಲ್ಲಿದ್ದ ಜನರಿಗೆ ಗಜಪಯಣಕ್ಕಾಗಮಿಸದೆ ನಿರಾಸೆ ಕಾದಿತ್ತು. ಈ ಹಿಂದೆ ಮೊದಲ ಹಂತದಲ್ಲೇ ಹೊರಡುತ್ತಾನೆಂಬ ಮಾಹಿತಿ ನೀಡಿದ್ದ ಅರಣ್ಯಾಧಿಕಾರಿಗಳು ಇಲ್ಲಿಗೆ ಕರೆತರದೆ ನೇರವಾಗಿ ಲಾರಿ ಮೂಲಕ ಮೈಸೂರಿಗೆ ಕರೆದೊಯ್ಯಲಾಗುವುದೆಂದು ತಿಳಿಸಿದರು.
ಸಂಭ್ರಮಿಸಿದ ವಿದೇಶಿಗರು: ಗಜಪಯಣವನ್ನು ವೀಕ್ಷಿಸಲು ಆಗಮಿಸಿದ್ದ ಕೀನ್ಯಾ ದೇಶದ ವಿದ್ಯಾರ್ಥಿಗಳು ಇದೊಂದು ಸಾಂಸ್ಕೃತಿಕ ವೈಭವವೆಂದು ಹೇಳಿ ಸಂತಸ ವ್ಯಕ್ತಪಡಿಸಿದರು.
ಗಜಯಾನದ ಹೈಲೆಟ್ಸ್: ಗಜಪಯಣಕ್ಕೆ ಚಾಲನೆ ನೀಡಲು ಆಗಮಿಸುವ ಗಣ್ಯರನ್ನು ಸ್ವಾಗತಿಸಲು ಒಂದನೇ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದ ಕಾವೇರಿ ಸ್ವ ಸಹಾಯ ಸಂಘದ ಹಾಗೂ ಅಂಬೇಡ್ಕರ್ ನಗರದ ಕಾಳಿಕಾಂಬ ಸ್ತ್ರೀ ಶಕ್ತಿ ಸಂಘದ ನೂರಕ್ಕೂ ಹೆಚ್ಚು ಮಹಿಳೆಯರು ಸಮವಸ್ತ್ರ ಧರಿಸಿ ಪೂರ್ಣಕುಂಭ ಸ್ವಾಗತ ನೀಡಿದ್ದು ಗಜಪಯಣಕ್ಕೆ ಕಳಶವಿದ್ದಂತಿತ್ತು.
ವಿಶ್ವ ಆನೆ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಗಜ ಎಂಬ 6 ನಿಮಿಷಗಳ ಸಾûಾÂಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಗಜಪಯಣಕ್ಕೆ ಚಾಲನೆ ನೀಡಿದ ನಂತರ ಲಾರಿಗೆ ಆನೆಗಳನ್ನು ಹತ್ತಿಸುವ ವೇಳೆ ನೆರೆದಿದ್ದ ನೂರಾರು ಮಂದಿ ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
* ಸಂಪತ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.