ಇದೇ ಮೊದಲ ಬಾರಿಗೆ ಪಂಜ ಕುಸ್ತಿ ಆಯೋಜನೆ
Team Udayavani, Sep 2, 2017, 12:37 PM IST
ಮೈಸೂರು: ಸೆ.21ರಿಂದ 26ರವರೆಗೆ ನಡೆಯಲಿರುವ ದಸರಾ ಕುಸ್ತಿ ಪಂದ್ಯಾವಳಿಯ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸರಾ ಕುಸ್ತಿ ಉಪ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ತಿಳಿಸಿದರು. ನಗರದ ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ಈ ಬಾರಿ ಸ್ಥಳೀಯ ಕುಸ್ತಿಪಟುಗಳನ್ನು ಪೋ›ತ್ಸಾಹಿಸುವ ಉದ್ದೇಶದಿಂದ ವಿಭಾಗಮಟ್ಟದ ಬಾಲಕರ ಕುಸ್ತಿ ಪಂದ್ಯಾವಳಿಯನ್ನು ಸಹ ಏರ್ಪಡಿಸಲಾಗಿದೆ. ಈ ಪಂದ್ಯಾವಳಿಯು ಎರಡು ವಿಭಾಗದಲ್ಲಿ ನಡೆಯಲಿದ್ದು, ಪುರುಷರ ಕಿರಿಯರ(17 ವರ್ಷದೊಳಗೆ) ಹಾಗೂ ಹಿರಿಯರ ವಿಭಾಗ(17 ವರ್ಷ ಮೇಲ್ಪಟ್ಟು)ಗಳಲ್ಲಿ ಪಂದ್ಯ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.23 ಮಹಿಳಾ ಪಂದ್ಯಾವಳಿ: ಉಳಿದಂತೆ ಸೆ.21ರಂದು ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನಾ ಸಮಾರಂ¸ ನಡೆಯಲಿದ್ದು, ಬಳಿಕ ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ. ಸೆ.22ರಂದು ಮೈಸೂರು ವಿಭಾಗಮಟ್ಟದ ಬಾಲಕರ ಕುಸ್ತಿ, ಸೆ.23ರಂದು 9ನೇ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ, ಸೆ.24 ಮತ್ತು 25ರಂದು 35ನೇ ರಾಜ್ಯಮಟ್ಟದ ಪುರುಷರ ಹಾಗೂ ಬಾಲಕರ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. 26ರಂದು ಮೈಸೂರು ವಿಭಾಗ ಮಟ್ಟದ ಬಾಲಕರ, ರಾಜ್ಯಮಟ್ಟದ ಪುರುಷರ ಪಂದ್ಯಾವಳಿ ಜತೆಗೆ ನಾಡಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳು: ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳಿಗೆ ಕುಸ್ತಿ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಂತೆ ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆ, ಎರಡೂ ಕೈಗಳಿಂದ ಗದೆ ತಿರುಗಿಸುವ ಸ್ಪರ್ಧೆ, ದಂಡ ಮತ್ತು ಸಪೋರ್ಟ್ ಹೊಡೆಯುವ ಸ್ಪರ್ಧೆ, ಗರ್ಧನ್ ಕಲ್ಲು ಎತ್ತಿಕೊಂಡು ಬಸ್ಕಿ ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮೊದಲ ಬಾರಿಗೆ ಪಂಜ ಕುಸ್ತಿ(ಆವ…ì ರೆಸ್ಲಿಂಗ್) ಪಂದ್ಯಗಳನ್ನು ಆಯೋಜಿಸಲಾಗಿದ್ದು, ಪುರುಷ ಹಾಗೂ ಮಹಿಳೆಯರಿಗೆ ವಿವಿಧ ತೂಕದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಡಿಜಿಟಲ್ ಪಾವತಿ: ಕುಸ್ತಿ ಉಪಸಮಿತಿಯ ಖರ್ಚುವೆಚ್ಚದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕುಸ್ತಿ ಪಟುಗಳು, ಸರಬರಾಜುದಾರರು ಸೇರಿದಂತೆ ಇನ್ನಿತರ ಆರ್ಥಿಕ ವಹಿವಾಟುಗಳನ್ನು ಡಿಜಿಟಲ್ ಪಾವತಿ ಮಾಡಲಾಗುವುದು. ಇದಕ್ಕಾಗಿ ಬ್ಯಾಂಕ್ ಖಾತೆಯ ಅಗತ್ಯವಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಖಾತೆ ತೆರೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ ಅವರು, ಕುಸ್ತಿ ಆಟಕ್ಕೆ ಹೆಚ್ಚಿನ ಪೋ›ತ್ಸಾಹ ನೀಡುವ ಉದ್ದೇಶದಿಂದ ನಗರದಲ್ಲಿರುವ ಗರಡಿ ಮನೆಗಳ ಜೀರ್ಣೋದ್ಧಾರ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ ಮೊಹಮ್ಮದ್ ಸುಜಿತಾ, ಕುಸ್ತಿ ಉಪಸಮಿತಿ ಕಾರ್ಯದರ್ಶಿ ಡಿ.ರವಿಕುಮಾರ್, ಕರ್ನಾಟಕ ಕುಸ್ತಿ ಒಕ್ಕೂಟದ ಅಧ್ಯಕ್ಷ ಪೊ›.ಕೆ.ಆರ್.ರಂಗಯ್ಯ, ಪಂಜ ಕುಸ್ತಿ ಅಧ್ಯಕ್ಷ ಎನ್.ಎಲ್. ಮೋಹನ್, ಪೈಲ್ವಾನ್‌ಗಳಾದ ಕೆಂಪೇಗೌಡ, ಅಮೃತ್ ಇನ್ನಿತರರು ಹಾಜರಿದ್ದರು.
ನಾಲ್ಕು ದಿಕ್ಕಿನಲ್ಲಿ ಪಂದ್ಯಾವಳಿ: ನಾಡಕುಸ್ತಿ ಪಂದ್ಯಗಳಿಗೆ ಹಾಗೂ ಕುಸ್ತಿಪಟುಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡುವ ಉದ್ದೇಶದಿಂದ ಈ ಬಾರಿ ನಗರದ ವಿವಿಧೆಡೆ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಅಶೋಕಪುರಂ, ಕೆ.ಜಿ.ಕೊಪ್ಪಲು, ರಾಜೀವ್‌ನಗರ ಹಾಗೂ ಟಿ.ಕೆ.ಬಡಾವಣೆಗಳಲ್ಲಿ ಒಂದು ದಿನದ ನಾಡಕುಸ್ತಿ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ವಿಜೇತರಾಗುವವರಿಗೆ 50 ಸಾವಿರ ಅಥವಾ 1 ಲಕ್ಷ ರೂ. ಬಹುಮಾನ ನೀಡಲಾಗುವುದು. ಯುವ ಕುಸ್ತಿಪಟುಗಳನ್ನು ಬೆಳೆಸುವ ಸಲುವಾಗಿ ಮೈಸೂರಿನಲ್ಲಿರುವ ನ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಕುಸ್ತಿಯಲ್ಲಿ ಬಾಗವಹಿಸುವ ಕುಸ್ತಿಪಟುಗಳಿಗೆ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ರವಿ ಡಿ.ಚನ್ನಣ್ಣನವರ ತಿಳಿಸಿದರು.
ಕುಸ್ತಿಅಖಾಡ ಮೇಲ್ದರ್ಜೆಗೆ: ನಗರದ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಮಾತ್ರವಲ್ಲದೆ ವಿವಿಧ ಸಂದರ್ಭಗಳಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ಹೀಗಾಗಿ ಕ್ರೀಡಾಂಗಣದ ಎರಡು ಕಡೆಗಳಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಅಂದಾಜು 3 ಕೋಟಿ ರೂ.ವೆಚ್ಚದಲ್ಲಿ ಛಾವಣಿ ನಿರ್ಮಿಸಲಾಗುವುದು. ಜತೆಗೆ ಕುಸ್ತಿ ಅಖಾಡಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡುವ ಬಗ್ಗೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಪಸಮಿತಿ ಕಾರ್ಯದರ್ಶಿ ಡಿ.ರವಿಕುಮಾರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.