ಅಧಿಕಾರಿ, ವಾಚರ್ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ
Team Udayavani, Mar 1, 2021, 1:19 PM IST
ಎಚ್.ಡಿ.ಕೋಟೆ: ಕೇರಳದಲ್ಲಿ ಅರಣ್ಯ ಇಲಾಖೆ ವಲಯ ಅಧಿಕಾರಿ ಹಾಗೂ ವಾಚರ್ ಮೇಲೆದಾಳಿ ನಡೆಸಿದ್ದ ಹೆಣ್ಣು ಹುಲಿ ತಾಲೂಕಿನ ಎನ್ ಬೇಗೂರು ಅರಣ್ಯ ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಶನಿವಾರ ರಾತ್ರಿ ಸೆರೆ ಸಿಕ್ಕಿದೆ.
ಶರೀರದಲ್ಲಿ ಗಾಯಗಳಾಗಿ ಬೇಟೆಯಾಡಲು ಅಶಕ್ತವಾಗಿವಾಗಿರುವ ಸುಮಾರು 7-8 ವರ್ಷದ ಹೆಣ್ಣು ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು. ಬಳಿಕ ಹುಲಿಯ ಆರೋಗ್ಯ ಸ್ಥಿತಿಗತಿ ಗಮನಿಸಿ ಹುಲಿಯನ್ನು ಕಾಡಿಗೆ ಬಿಡಬೇಕೆ ಎಂಬ ಕುರಿತು ನಿರ್ಧರಿಸುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಒಂದೂವರೆ ತಿಂಗಳ ಹಿಂದೆ ಕೇರಳ ಕರ್ನಾಟಕ ಗಡಿಭಾಗದ ಚಾಮಾಪುರ ಎಂಬಲ್ಲಿ ಹುಲಿಯೊಂದು ಕೇರಳ ಅರಣ್ಯ ಇಲಾಖೆಯ ಇಬ್ಬರ ಮೇಲೆ ದಾಳಿಗೆ ಮುಂದಾಗಿತ್ತು. ಈ ಸಂದರ್ಭದಲ್ಲಿಅಲ್ಲಿಂದ ಕಣ್ಮರೆಯಾಗಿದ್ದ ಹುಲಿ ಕರ್ನಾಟಕ ಗಡಿ ಭಾಗದ ಎನ್.ಬೇಗೂರಿನ ಬಾಣೂರು ಆಸುಪಾಸಿನಲ್ಲಿ ಬೀಡು ಬಿಟ್ಟಿರುವ ಕುರಿತು ಶಂಕೆ ಇತ್ತು. ಹುಲಿ ಸೆರೆ ಹಿಡಿಯುವಂತೆ ಕೇರಳ ಅರಣ್ಯ ಇಲಾಖೆಯು ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿತ್ತು. ಅರಣ್ಯಇಲಾಖೆ ಹಿರಿಯ ಅಧಿಕಾರಿಗಳ ಆದೇಶದಂತೆಸಾಕಾನೆಗಳ ಸಹಾಯದಿಂದ 15 ದಿನಗಳ ತನಕಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದರೂ ಸತತ ಒಂದು ತಿಂಗಳಿಂದ ಹುಲಿ ಪತ್ತೆಯಾಗಿರಲಿಲ್ಲ.ಹುಲಿ ಸೆರೆಗೆ ಸಿಸಿ ಕ್ಯಾಮರಾ ಕೂಡ ಅಳವಡಿಸಿತ್ತಾದರೂ ಕಳೆದ 3 ದಿನಗಳ ಹಿಂದಿನತನಕ ಹುಲಿ ಪತ್ತೆಯಾಗಿರಲಿಲ್ಲ. 3 ದಿನಗಳ ಹಿಂದೆ ಹುಲಿಯ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶನಿವಾರ ಮಧ್ಯಾಹ್ನ ಹುಲಿಪೊದೆಯೊಂದರಲ್ಲಿ ಅಶಕ್ತವಾಗಿ ಮಲಗಿದ್ದ ದೃಶ್ಯಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗೋಚರಿಸಿದೆ.
ಕೂಡಲೇ ಹುಲಿ ಸೆರೆಗೆ ತಂತ್ರ ರೂಪಿಸಿದಅರಣ್ಯ ಶನಿವಾರ ಸಂಜೆ ವೇಳೆಗೆ ಗುಂಡ್ರೆ ಅರಣ್ಯಪ್ರದೇಶದ ಚಾಮಾಪುರ ಎಂಬಲ್ಲಿ ಬೋನ್‌ಅಳವಡಿಸಿ, ಅದರಲ್ಲಿ ಮೇಕೆ ಇರಿಸಲಾಯಿತು.ಬಳಿಕ ಹುಲಿ ತನಗರಿವಿಲ್ಲದಂತೆ ಬೋನಿನಲ್ಲಿ ಬಂಧಿಯಾಗಿದೆ.
ಸೆರೆಯಾದ ಹುಲಿಯನ್ನು ಸ್ಥಳಾಂತರಿಸಲುಕ್ರಮ ಕೈಗೊಂಡಿದ್ದು, ಕಾರ್ಯಾಚರಣೆಯಲ್ಲಿಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ಗುಂಡ್ರೆ ವಲಯದ ವಲಯಅರಣ್ಯಾಧಿಕಾರಿ ಶಶಿಧರ್, ಎನ್.ಬೇಗೂರುವಲಯ ಅರಣ್ಯಾಧಿಕಾರಿ ಸಚಿನ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.