ಮಹಿಳಾ ಮಯವಾದ ಟಿಪ್ಪು ಎಕ್ಸ್‌ಪ್ರೆಸ್ ರೈಲು!
Team Udayavani, Mar 6, 2020, 3:00 AM IST
ಮೈಸೂರು: ರೈಲ್ವೆ ಇಲಾಖೆ ಮಾ.1ರಿಂದ 10ರವರೆಗೆ 10 ದಿನಗಳ ಕಾಲ ಭಾರತೀಯ ಮಹಿಳಾ ದಿನಾಚರಣೆ ಅಭಿಯಾನ ಆರಂಭಿಸಿರುವ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್‌ಪ್ರೆಸ್ ಗುರುವಾರ ಸಂಪೂರ್ಣ ಮಹಿಳಾ ಸಿಬ್ಬಂದಿ ಮಯವಾಗಿತ್ತು.
ರೈಲನ್ನು ಚಲಾಯಿಸುವ ಲೋಕೋ ಪೈಲಟ್‌ಗಳಿಂದ ಟಿಕೆಟ್ ಚೆಕ್ ಮಾಡುವ ಟಿಸಿವರೆಗೆ ಎಲ್ಲರೂ ಮಹಿಳಾ ಸಿಬ್ಬಂದಿಯೇ ಆಗಿದ್ದರು. ಈಗಾಗಲೇ ಮೈಸೂರು ವಿಭಾಗ ಆರೋಗ್ಯ ತಪಾಸಣೆ, ಯೋಗ ಶಿಬಿರ, ಚಾರಣ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ.
ಲಿಂಗ ಸಮಾನ ಕೆಲಸದ ಸ್ಥಳವನ್ನು ನಿರ್ಮಿಸಲು ಮತ್ತು ಕೆಲಸದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣದ ಮನೋಭಾವಕ್ಕೆ ಪೂರಕವಾಗಿ ಈ ಚಟುವಟಿಕೆ ನಡೆಸಲು ಉದ್ದೇಶಿಸಿದೆ. ಹೀಗಾಗಿ ರೈಲ್ವೆ ವಿಭಾಗದ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋಪೈಲಟ್, ಗಾರ್ಡ್, ಟಿಕೆಟ್ ಪರಿಶೀಲನಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಒಳಗೊಂಡ ಎಲ್ಲ ಮಹಿಳಾ ಸಿಬ್ಬಂದಿ ಗುರುವಾರದ ಅಭಿಯಾನದಲ್ಲಿ ಭಾಗವಸಿ ಕರ್ತವ್ಯ ನಿರ್ವಸುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಹೂಗುತ್ಛ ನೀಡಿ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಮೈಸೂರು ಭಾಗದಲ್ಲಿ ಶೇ.10ರಷ್ಟು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಲಿಂಗ ಸಮಾನತೆಯ ವಾತಾವರಣ ಸೃಷ್ಟಿಸಲು ಶ್ರಮಿಸಲಾಗುತ್ತಿದೆ.
ವಿಭಾಗದ ಎಲ್ಲಾ ಹಂತಗಳಲ್ಲೂ ಉತ್ತಮವಾಗಿ ಕಾರ್ಯನಿರ್ವಸುವ ಮೂಲಕ ಸಾಧನೆ ಮಾಡಬೇಕು ಎಂದು ಸಿಬ್ಬಂದಿಗೆ ಸಲಹೆ ನೀಡಿದರು. ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ದೇವಸಹಾಯಂ, ಹಿರಿಯ ಶಾಖಾ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.
ಯಾರ್ಯಾರು ಯಾವ ಕಾರ್ಯನಿರ್ವಹಿಸಿದ್ರು?: ಗುರುವಾರ ಬೆಳಗ್ಗೆ ಬೆಂಗಳೂರಿಗೆ ಪ್ರಯಾಣಿಸಿದ ರೈಲನ್ನು ಲೋಕೋ ಪೈಲಟ್ ಆಗಿ ಬಲ್ಲ ಸಿವ ಪಾರ್ವತಿ, ಸಹಾಯಕ ಲೋಕೊ ಪೈಲಟ್ ಆಗಿ ರಂಗೋಲಿ ಪಾಟೀಲ್ ಚಾಲನೆ ಮಾಡಿದರು. ಗಾರ್ಡ್ ಆಗಿ ರಿಚಿತಮಣಿ ಶರ್ಮ, ಟಿಟಿಇ ಆಗಿ ಎಸ್.ಗಾಯತ್ರಿ, ಟಿಕೆಟ್ ಚೆಕ್ಕಿಂಗ್ ತಂಡದಲ್ಲಿ ಪುಷ್ಪಮ್ಮ, ಎಸ್.ಎನ್.ರಾಜೇಶ್ವರಿ, ಕೆ.ಎಂ.ಹನಿ, ಎನ್.ಎಸ್.ಅನಿತಾ, ಕೆ.ಟಿ.ಬೆಸ್ಟಿ ಕಾರ್ಯನಿರ್ವಹಿಸಿದರು. ಆರ್‌ಪಿಎಫ್ ಭದ್ರತಾ ಸಿಬ್ಬಂದಿಗಳಾದ ಗೀತಾ ಲತಾ ನಾಯ್ಕ, ದೇವಕಿ, ಭಾರತಿ, ರೇಣುಕಾ ಕರ್ತವ್ಯ ನಿರ್ವಹಿಸಿದರು.
ರೈಲ್ವೆ ನಿಲ್ದಾಣದಿಂದ ಹೊರಡುವ ಹಾಗೂ ಮೈಸೂರಿಗೆ ಬರುವ ರೈಲುಗಳ ತಾಂತ್ರಿಕತೆಯನ್ನು ಸೀನಿಯರ್ ಟೆಕ್ನಿಷಿಯನ್ ರಮ್ಯಾ ನೇತೃತ್ವದಲ್ಲಿ ಆರು ಮಂದಿ ಟೆಕ್ನಿಷಿಯನ್‌ಗಳು ತಪಾಸಣೆ ನಡೆಸುವ ಕಾರ್ಯದಲ್ಲಿ ತೊಡಗಿದ್ದರು. ರೈಲ್ವೆ ನಿಲ್ದಾಣದಲ್ಲಿ ಸೀನಿಯರ್ ಗಾರ್ಡ್ ಆಗಿ ನಾಗಮಣಿ ಪ್ರಸಾದ್, ಟಿ.ಪಿ.ಡಿಮು, ಪಾಯಿಂಟ್ ವುಮೆನ್ ಆಗಿ ಪಿ.ಪುಷ್ಪ ಕಾರ್ಯನಿರ್ವಹಿಸಿ ಪ್ರಯಾಣಿಕರು ಹಾಗೂ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.