ಇಂದಿನಿಂದ ಮಹೋದಯ ಮಹಾಮಾಘಸ್ನಾನ


Team Udayavani, Feb 17, 2019, 7:35 AM IST

m1-indininda.jpg

ಮೈಸೂರು: ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ಭಾನುವಾರದಿಂದ ಮೂರು ದಿನ ಮಹೋದಯ ಪುಣ್ಯಕಾಲದ ಮಹಾ ಮಾಘಸ್ನಾನ 11ನೇ ಕುಂಭಮೇಳ ನಡೆಯಲಿದೆ.

ಮೂರು ದಿನಗಳೂ ಪ್ರಾತಃಕಾಲದಿಂದ ಸಂಕಲ್ಪ, ಹೋಮ, ಅಗಸೆಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಸಂಗಮದ ಎರಡೂ ದ್ವೀಪಗಳಲ್ಲಿ ಯಾಗ ಮಂಟಪ, ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾಗಿದೆ. 

11ನೇ ಕುಂಭಮೇಳದ ಯಶಸ್ಸಿಗಾಗಿ ಜಿಲ್ಲಾಡಳಿತ ಟೊಂಕಕಟ್ಟಿ ನಿಂತು ಕ್ಷೇತ್ರದಲ್ಲಿ ಮೂಲ ಸೌಕರ್ಯ ಒದಗಿಸಿಕೊಡುವ ಕೆಲಸ ಮಾಡುತ್ತಿದ್ದರೆ, ಕುಂಭಮೇಳದಲ್ಲಿ ಧಾರ್ಮಿಕ ಕೈಂಕರ್ಯಗಳ ಜವಾಬ್ದಾರಿಯನ್ನು ಕೈಲಾಸಾಶ್ರಮ, ಸುತ್ತೂರು ಮಠ ಹಾಗೂ ಆದಿ ಚುಂಚನಗಿರಿ ಮಠಗಳು ಹಂಚಿಕೊಂಡಿವೆ.

ಕೈಲಾಸಾಶ್ರಮ ಹೋಮ-ಹವನಗಳು, ಸುತ್ತೂರು ಮಠ- ಮಹಾತ್ಮರ ಸ್ವಾಗತ, ಆದಿಚುಂಚನಗಿರಿ ಮಠ- ಧರ್ಮಾಧಿಕಾರಿಗಳು, ಮಹಾತ್ಮರ ಗೌರವ, ಪುಣ್ಯಸ್ನಾನದ ಜವಾಬ್ದಾರಿ ಹೊತ್ತಿದ್ದು, ಕುಂಭಮೇಳಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಮೂರು ಮಠಗಳು ಸೇರಿ ಪ್ರಸಾದದ ವ್ಯವಸ್ಥೆ ಮಾಡುತ್ತಿವೆ.

ಭಾನುವಾರ ಬೆಳಗ್ಗೆ 8.30ಕ್ಕೆ ಶ್ರೀ ಅಗಸೆಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ, ಅಂಕುರಾರ್ಪಣೆ. 9ಗಂಟೆಯಿಂದ ತ್ರಯೋದಶಿ, ಶ್ರೀ ಅಗಸೆöàಶ್ವರ ಸನ್ನಿಧಿಯಲ್ಲಿ ಅನುಜ್ಞೆ ಪುಣ್ಯಾಹ, ಗಣಹೋಮ, ಪೂರ್ಣಾಹುತಿ ಅಭಿಷೇಕ, ಮಹಾ ಮಂಗಳಾರತಿ ನಡೆಯಲಿದೆ. ಸಂಜೆ 5 ಗಂಟೆಗೆ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಿಸಲಾಗುತ್ತದೆ.

ಸಂಜೆ 5 ಗಂಟೆಗೆ 11ನೇ ಕುಂಭಮೇಳಕ್ಕೆ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಧಾರ್ಮಿಕ ಶ್ರದ್ಧೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಸಂಸ್ಕೃತಿ ಚಿಂತಕಿ ಡಾ.ಟಿ.ಸಿ.ಪೂರ್ಣಿಮಾ ಉಪನ್ಯಾಸ ಮಾಡಲಿದ್ದಾರೆ.

18ರಂದು ಪ್ರಾತಃಕಾಲ 9 ಗಂಟೆಗೆ ಚತುರ್ದಶಿ, ನದಿಪಾತ್ರದಲ್ಲಿ ಪುಣ್ಯಾಹ ನವಗ್ರಹ ಹೋಮ, ಸುದರ್ಶನ ಹೋಮ, ರುದ್ರಹೋಮ,ಪೂರ್ಣಾಹುತಿ, ಇತ್ಯಾದಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯನ್ನು ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಮಾಘ ಸ್ನಾನದ ಮಹತ್ವ ಕುರಿತು ಶ್ರೀ ಲಗಧಮಹರ್ಷಿ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಜಿ.ಬಿ.ಅಮರೇಶ ಶಾಸಿŒ ಉಪನ್ಯಾಸ ನೀಡಲಿದ್ದಾರೆ.

ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ತಿ.ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಹಾತ್ಮರು-ಸಂತರ ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ಮತ್ತು ಉತ್ಸವ, ಸಂಜೆ 6.30ಕ್ಕೆ ಯಾಗಶಾಲಾ ಪ್ರವೇಶ ಶ್ರೀ ರುದ್ರಹೋಮ ಮತ್ತು ಪೂರ್ಣಾಹುತಿ ನಡೆಯಲಿದ್ದು, ರಾತ್ರಿ 7ಗಂಟೆಗೆ ವಾರಾಣಸಿ ಮಾದರಿಯಂತೆ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ನೆರವೇರಿಸಲಾಗುತ್ತದೆ. 

19ರಂದು ಬೆಳಗ್ಗೆ ನದಿಪಾತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಮಾಡುವುದರೊಂದಿಗೆ ಮಹೋದಯ ಪುಣ್ಯಸ್ನಾನ ಆರಂಭವಾಗಲಿದೆ. ಪ್ರಾತಃ 9.35 ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30 ರಿಂದ 12ಗಂಟೆ ನಡುವಿನ ವೃಷಭ ಲಗ್ನ ಹಾಗೂ ಅಭಿಜಿತ್‌ ಮುಹೂರ್ತ, ವಿಧಿ ಮುಹೂರ್ತ, ವೇದ ಮುಹೂರ್ತಗಳು ಮಹೋದಯ ಪುಣ್ಯಸ್ನಾನಕ್ಕೆ ಶುಭ ಮುಹೂರ್ತಗಳು ಎಂದು ಹೇಳಲಾಗಿದೆ. 

ಮಧ್ಯಾಹ್ನ 12ಗಂಟೆಗೆ ನಡೆಯುವ ಧರ್ಮಸಭೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌, ಪರಮೇಶ್ವರ ನಾಯಕ್‌, ಸಾ.ರಾ.ಮಹೇಶ್‌, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ.

ವಿಶೇಷ ಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎಸ್‌.ಎಂ.ಕೃಷ್ಣ, ಶಾಸಕ ಎಚ್‌.ವಿಶ್ವನಾಥ್‌, ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಧರ್ಮಸಭೆಯಲ್ಲಿ ನದಿ ಸ್ನಾನದ ಮಹತ್ವ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಶೆಲ್ವಪಿಳ್ಳೆ„ ಅಯ್ಯಂಗಾರ್‌ ಉಪನ್ಯಾಸ ನೀಡಲಿದ್ದಾರೆ.

ಮುಖ್ಯಮಂತ್ರಿ, ಮಹಾತ್ಮರಿಂದ ಪುಣ್ಯಸ್ನಾನ: ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಶ್ರೀಅಗಸೆöàಶ್ವರ ಸ್ವಾಮಿ ದೇವಸ್ಥಾನದ ನಡುವೆ ತೇಲುವ ಸೇತುವೆಯನ್ನು ಯೋಧರು ನಿರ್ಮಿಸಿಕೊಟ್ಟಿದ್ದಾರೆ. ಕುಂಭಮೇಳದಲ್ಲಿ ಮಹಾತ್ಮರು, ಸಂತರು, ಯೋಗಿಗಳ ಕುಂಭಸ್ನಾನಕ್ಕಾಗಿ ಯಾಗಶಾಲೆಗೆ ಹೊಂದಿಕೊಂಡಂತೆ ಕಾವೇರಿ, ಕಪಿಲ ಸೇರುವಲ್ಲಿ ಸ್ಫಟಿಕ ಸರೋವರವನ್ನು ಗುರುತಿಸಿ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಕುಂಭಮೇಳದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕುಂಭಸ್ನಾನ ಮಾಡುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಪುಣ್ಯಸ್ನಾನಕ್ಕಾಗಿ ಪ್ರತ್ಯೇಕ ಸ್ನಾನಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಅವರಿಗಾಗಿಯೇ 20-40 ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕ ಸ್ನಾನದ ಸ್ಥಳ ನಿಗದಿಪಡಿಸಿದ್ದು, ಸುರಕ್ಷತೆಗಾಗಿ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ಕುಂಬ ಮೇಳಕ್ಕೆ ತಿ.ನರಸೀಪುರ ಝಗಮಗ: 11ನೇ ಕುಂಭಮೇಳಕ್ಕೆ ಸಜ್ಜಾಗಿರುವ ತಿ.ನರಸೀಪುರ ಪಟ್ಟಣದಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳನ್ನು ವಿವಿಧ ಬಗೆಯ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಇಡೀ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಮುಖ ಸರ್ಕಾರಿ ಕಚೇರಿಗಳು, ಕಟ್ಟಡಗಳ ಮೇಲೂ ವಿದ್ಯುತ್‌ ದೀಪಗಳು ಮಿನುಗಲಿವೆ.

ಏಕಮುಖ ಸಂಚಾರ ವ್ಯವಸ್ಥೆ: ಸುಗಮ ಸಂಚಾರಕ್ಕಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ಸ್ವತ್ಛತೆ, ಭದ್ರತೆ ದೃಷ್ಟಿಯಿಂದ ಶನಿವಾರವೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಗಣ್ಯರಿಗೆ ಪ್ರತ್ಯೇಕ ವಾಹನ ನಿಲುಗಡೆ ಸೇರಿದಂತೆ 5 ಕಡೆ ತಾತ್ಕಾಲಿಕ ವಾಹನ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಪುಣ್ಯಸ್ನಾನಕ್ಕೆ ಇಳಿಯುವ ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ 60 ಜನ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಮಂಗಳೂರಿನ ಅಗ್ನಿಶಾಮಕ ದಳದ ಎರಡು ಬೋಟಿಂಗ್‌ ಮತ್ತು ಸೇನೆಯ ಎರಡು ಮೋಟಾರ್‌ ಬೋಟುಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.