ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ
1ನೇ ತ್ತೈಮಾಸಿಕ ನಿರ್ವಹಣಾ ಕಾಮಗಾರಿಯಿಂದ ನಿಲುಗಡೆ
Team Udayavani, Jun 6, 2019, 3:53 PM IST
ಮೈಸೂರು: ವಿ.ವಿ.ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ. ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದ ವತಿಯಿಂದ ಜೂನ್ 7 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ 66/11 ಕೆ.ವಿ. ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ 66/11 ಕೆ.ವಿ ವಿಜಯ ನಗರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಪ್ರದೇಶಗಳಾದ ಗೋಕುಲಂ 1ಮತ್ತು 2ನೇ ಹಂತ, ಮಹದೇಶ್ವರ ಬಡಾವಣೆ, ವಿಜಯನಗರ 1ನೇ ಮತ್ತು 2ನೇ ಹಂತ, ಹಿನಕಲ್, ಯಾದವಗಿರಿ, ಮಂಜುನಾಥಪುರ, ಮಹಾಜನ ಲೇ ಔಟ್, ಒಂಟಿಕೊಪ್ಪಲ್, ಗೋಕುಲಂ 3ನೇ ಹಂತ, ಜಯಲಕ್ಷ್ಮೀಪುರಂ, ಪಡುವಾರ ಹಳ್ಳಿ, ಸಿಎಫ್ಟಿಆರ್‌ಐ, ಡೀಸಿ ಹೌಸ್, ನರ್ಸ್ ಕ್ವಾಟ್ರರ್ಸ್, ಆಕಾಶವಾಣಿ, ಇಎಸ್‌ಐ ಆಸ್ಪತ್ರೆ, ಹಸು ಕರು ಪಾರ್ಕ್, ಗೋಕುಲಂ ಪಾರ್ಕ್, ವಿನಾಯಕ ನಗರ, ಕಾಳಿದಾಸ ರಸ್ತೆ, ಯಾದವಗಿರಿ ಕೈಗಾರಿಕಾ ಪ್ರದೇಶ, ವಿಜಯನಗರ ವಾಟರ್ ಸಪ್ಲೈ, ಹುಣಸೂರು ಮುಖ್ಯ ರಸ್ತೆ, ಆದಿ ಪಂಪ ರಸ್ತೆ, ವಾಲ್ಮೀಕಿ ರಸ್ತೆ, ಎಂಎಂಸಿ ಲೇಡಿಸ್ ಹಾಸ್ಟೆಲ್, ಕಲಾಮಂದಿರ ಅಪಾರ್ಟ್‌ಮೆಂಟ್, ಜನರಲ್ ತಿಮ್ಮಯ್ಯ ರಸ್ತೆ, ಬೃಂದಾವನ, ಯೋಗಾ ನರಸಿಂಹಸ್ವಾಮಿ ದೇವಸ್ಥಾನ, ಆಯಿಸ್ಟಾರ್ ಬೇ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ 66/11 ಕೆ.ವಿ ಮೈಸೂರು ಸೌತ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಪ್ರದೇಶಗಳಾದ ಶ್ರೀರಾಂಪುರ 2ನೇ ಹಂತ, ರಮಾಬಾಯಿ ನಗರ, ಮಹದೇವಪುರ, ಜಯನಗರ, ಪರಸಯ್ಯನಹುಂಡಿ, ಶಿವಪುರ, ಕುವೆಂಪುನಗರ ಕೆ. ಬ್ಲಾಕ್, ಅಪೋಲೊ ಆಸ್ಪತ್ರೆಯ ಸುತ್ತ ಮುತ್ತಲಿನ ಪ್ರದೇಶಗಳು ಹಾಗೂ ಗೊರೂರು ಗ್ರಾಮ, ಕಳಲವಾಡಿ, ಕೋಟೆ ಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯರಸ್ತೆ ಯಿಂದ 6ನೇ ಮುಖ್ಯರಸ್ತೆ, ಭಾಗಶಃ ಕೆ.ಜಿ.ಕೊಪ್ಪಲು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎನ್.ಆರ್.ಮೊಹಲ್ಲಾ ವಿಭಾಗದ ವತಿಯಿಂದ ಬೆಳಗ್ಗೆ 10 ರಿಂದ ಸಂಜೆ 6ಗಂಟೆಯವರೆಗೆ 66/11ಕೆ.ವಿ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ವಿದ್ಯಾವಿಕಾಸ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ವಾಜಮಂಗಲ, ವರುಣಾ, ಮೋಸಂಬಾಯನಹಳ್ಳಿ, ದಂಡಿಕೆರೆ, ಜಂತಗಳ್ಳಿ, ಸಜ್ಜೆಹುಂಡಿ, ಮೆಲ್ಲಹಳ್ಳಿ, ಶಿವಪುರ, ಲಕ್ಷ್ಮೀಪುರ, ಹಲಗಯ್ಯನ ಹುಂಡಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್. ಮೊಹಲ್ಲಾ ಹಾಗೂ ವಿ.ವಿ ಮೊಹಲ್ಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.