“ಅಕ್ರಮ ಮರಳುಗಾರಿಕೆ, ಚೀಟಿ, ಬಡ್ಡಿದಂಧೆ ವಿರುದ್ಧ ಕಠಿಣ ಕ್ರಮ’
Team Udayavani, Jun 26, 2017, 12:20 PM IST
ಪಿರಿಯಾಪಟ್ಟಣ: ಅಕ್ರಮ ಮರಳುಗಾರಿಕೆ, ಚೀಟಿ, ಬಡ್ಡಿದಂಧೆಕೋರರ ಮೇಲೆ ಮುಲಾಜಿಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸೂಚಿಸಿದ್ದಾರೆ. ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿದರು. ಟಿಬೇಟ್ ಲಾಮಾಕ್ಯಾಂಪ್‌ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಇದೆ.
ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಪೊಲೀಸ್ ಸಿಬ್ಬಂದಿ ಬೈಲಕುಪ್ಪೆ ವ್ಯಾಪ್ತಿಯಲ್ಲಿನ ಒಂದೊಂದು ಹಳ್ಳಿಯನ್ನು ಒಬ್ಬರು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿಯ ಜನರ ವಿಶ್ವಾಸ ಪಡೆದುಕೊಂಡು ಆ ಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಪರಿಶೀಲನೆ: ಠಾಣೆ ಆವರಣದಲ್ಲಿ ನೆಟ್ಟಿರುವ ಮರಗಿಡಗಳನ್ನು ವೀಕ್ಷಿಸಿದರು. ಪ್ರಕರಣ ದಾಖಲಾಗಿರುವ ವಾಹನಗಳನ್ನು ಪರಿಶೀಲಿಸಿ, ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು. ಸಾರ್ವಜನಿಕರ ರಸ್ತೆಯಲ್ಲಿ ದನಕರುಗಳನ್ನು ಬಿಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನೊಂದು ಠಾಣೆಗೆ ಬಂದ ಜನರನ್ನು ಅಲೆದಾಡಿಸದೆ ಕೂಡಲೇ ಸ್ಥಳಕ್ಕೆ ಧಾವಿಸಬೇಕು. ಪರಿಶೀಲಿಸಿ ಕ್ರಮ ತೆಗೆದುಕೊಂಡು ಬಡವರಿಗೆ ನ್ಯಾಯ ದೊರಕಿಸಬೇಕೆಂದು ತಿಳಿಸಿದರು. ಪೊಲೀಸ್ ಠಾಣೆ ಸುತ್ತಮುತ್ತ ಸ್ವತ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು. ಉಪನಿರೀಕ್ಷಕ ರಾಮಚಂದ್ರ ನಾಯಕ, ಸಿಬ್ಬಂದಿಯವರಾದ ನಂದೀಶ, ಎ.ಕೆ.ದೊರೆೆಸ್ವಾಮಿ, ಅಶೋಕ, ಮಹದೇವ, ಇರ್ಫಾನ್, ರವಿ, ಮಹಿಳಾ ಪೊಲೀಸ್ ಸಿಬ್ಬಂದಿ ವನಿಕಾ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.