ಯದ್ವಾತದ್ವ ವಾಹನ ಓಡಿಸಿದರೆ ದಂಡ ಪ್ರಯೋಗ
Team Udayavani, Mar 22, 2021, 1:34 PM IST
ಮೈಸೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು ಮೈಸೂರು ನಗರದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತಪ್ರಕರಣಗಳು ಏರಿಕೆಯಾಗುತ್ತಿದ್ದು, ಇದರಿಂದ ಸಾವು-ನೋವು ಸಹ ಹೆಚ್ಚಾಗಿವೆ. ಜೊತೆಗೆ ಹದಿಹರೆಯದಯುವಕರಿಂದ ಹಿಡಿದು ಮಧ್ಯವಯಸ್ಕರವರೆಗೂ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕಾರ್ಯಾ ಚರಣೆಯನ್ನು ತೀವ್ರಗೊಳಿಸಿ, ನಿಯಮ ಉಲ್ಲಂಘಿಸುವ ವಾಹನ ಸವಾರರು ಮತ್ತು ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಒಂದೇ ದಿನ 45 ಡಿಎಲ್ ಅಮಾನತು: ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆ ಕಾರ್ಯಾಚರಣೆಗಿಳಿದ ಸಂಚಾರ ಪೊಲೀಸರು ಒಂದೇ ದಿನ 45 ಜನ ಡಿಎಲ್ ಅಮಾನತು ಮಾಡಿದ್ದು, ಒಟ್ಟು ಮೂರು ದಿನಗಳ ಅವಧಿಯಲ್ಲಿ 61 ಮಂದಿಯ ಚಾಲನ ಪರವಾನಗಿಯನ್ನು ಅಮಾನತು ಮಾಡಿ, ದಂಡ ವಿಧಿಸಿದ್ದಾರೆ.
ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಿದರೆ ಅಪಘಾತಗಳಾಗುತ್ತವೆ. ಈ ತಪ್ಪುಪುನಾವರ್ತನೆ ಆಗುತ್ತಲೇ ಇದೆ. ಹಾಗಾಗಿ ಡಿಲ್ ಅಮಾನತುಗೊಳಿಸಿ ಆರ್‌ಟಿಒ ಕಚೇರಿಗೆಕಳುಹಿಸಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಮುಖ್ಯ ರಸ್ತೆ, ಜಂಕ್ಷನ್, ಸರ್ಕಲ್‌ಗಳಲ್ಲಿ ಒಬ್ಬ ಎಎಸ್‌ಐ ಹಾಗೂ ಮೂವರು ಸಂಚಾರ ಪೊಲೀಸರು ಯಾರೆಲ್ಲಾ ನಿಯಮ ಉಲ್ಲಂಘನೆ ಮಾಡುತ್ತಾರೆ ಅವರ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಕರಣ ದಾಖಲು ಮಾಡಿಕೊಂಡು ಡಿಎಲ್ ಅಮಾನತು ಮಾಡುತ್ತಿದ್ದಾರೆ ಎಂದು ಸಂಚಾರ ವಿಭಾಗದ ಎಸಿಪಿ ಸಂದೇಶ್ ಕುಮಾರ್ ತಿಳಿಸಿದ್ದಾರೆ.
ಕಳೆದ ಡಿಸೆಂಬರ್‌ನಿಂದ ಫೆಬ್ರವರಿವರೆಗೂ ನಗರದಲ್ಲಿ ಸಾಕಷ್ಟು ಸಂಚಾರ ನಿಯಮ ಉಲ್ಲಂಘನೆಪ್ರಕರಣ ಹೆಚ್ಚಾಗಿದ್ದು, ಅದರಲ್ಲೂ ಓವರ್ ಸ್ಪೀಡ್‌ಒಂದರಲ್ಲೇ 3,429 ಪ್ರಕರಣ ದಾಖಲಾಗಿದೆ. ಇನ್ನುನೋ ಎಂಟ್ರಿಯಲ್ಲಿ ವಾಹನ ಚಲಾಯಿಸಿದ ಪರಿಣಾಮ 1973 ಪ್ರಕರಣ ದಾಖಲಾಗಿದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ದಕ್ಕೆ 425 ಹಾಗೂ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ 395 ಪ್ರಕರಣ ದಾಖಲಾಗಿದೆ. ಇದರಲ್ಲಿ ಜಂಪಿಂಗ್ ಟ್ರಾಫಿಕ್ ಸಿಗ್ನಲ್‌ಹಾಗೂ ಗಾಡಿ ಓಡಿಸುವಾಗ ಮೊಬೈಲ್ ಬಳಕೆಎರಡರಿಂದಲೇ ಒಟ್ಟು 143 ಡಿಎಲ್ ಅಮಾನತು ಮಾಡಲಾಗಿದೆ.
ಈ ನಿಯಮ ಉಲ್ಲಂಸಿದರೆ ಡಿಎಲ್ ಅಮಾನತು: ಕಳೆದ ಎರಡು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಅಪಘಾತ ಪ್ರಮಾಣ ಗಮನಿಸಿ ಕೆಲವೊಂದು ಸಂಚಾರನಿಯಮ ಉಲ್ಲಂಘನೆಯಾದರೆ ಡಿಎಲ್ ಅಮಾನತು ಮಾಡುವಂತೆ ಸೂಚಿಸಿದೆ. ಅದರಂತೆ ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಂಪು ಬಣ್ಣವಿದ್ದರೂ ವಾಹನ ಚಾಲನೆ ಮಾಡಿದರೆ ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ. ಹಾಗೆಯೇ ಕುಡಿದು ವಾಹನ ಚಲಾಯಿಸಿದರೆ, ಅತಿ ವೇಗವಾಗಿ ವಾಹನ ಓಡಿಸಿದರೆ, ಗೂಡ್ಸ್ ಗಾಡಿಯಲ್ಲಿ ಜನರನ್ನು ತುಂಬಿಕೊಂಡರೆ ಡಿಎಲ್ ಅಮಾನತುಗೊಳಿಸಲಾಗುತ್ತದೆ.
ಬುದ್ಧಿ ಮಾತಿಗೂ ಬಗ್ಗದ ಜನ: ಸಂಚಾರ ನಿಯಮ ಉಲ್ಲಂಘನೆ ಆಗದಂತೆ ಟ್ರಾಫಿಕ್ ಪೊಲೀಸರು ನಗರದಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಾಗೂ ತಿಳಿವಳಿಕೆ ಮೂಡಿಸುತ್ತಿದ್ದರೂ ಜನ ಬಗ್ಗುತ್ತಿಲ್ಲ.ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳು ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ಕರಪತ್ರ, ಜಾಗೃತಿಕಾರ್ಯಕ್ರಮ, ಜಾಗೃತಿ ಜಾಥಾ, ಮೈಕ್ ಮೂಲಕ ಮಾಹಿತಿ, ಭಿತ್ತಿಪತ್ರ ಅಂಟಿಸುತ್ತಿದ್ದರೂ ಜನ ಮಾತ್ರ ಹೆಚ್ಚು ತಲೆಕಡಿಸಿಕೊಳ್ಳುತ್ತಿಲ್ಲ
ಡಿಎಲ್, ವಿಮೆ ಮಾಡಿಸಿ ಮನೆ-ಮಠ ಉಳಿಸಿಕೊಳ್ಳಿ : ಸಾಕಷ್ಟು ಜನ ಡಿಎಲ್ ಇಲ್ಲದೆ, ವಾಹನಗಳಿಗೆಇನ್ಶೂರೆನ್ಸ್ ಮಾಡಿಸಿಕೊಳ್ಳದೆ ವಾಹನ ಚಲಾಯಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಒಂದು ವೇಳೆ ಇಂತಹವರಿಂದ ಅಪಘಾತವಾಗಿ ಸಾವು ನೋವು ಸಂಭವಿಸಿದರೆ ವಾಹನ ಚಾಲಕರುಅಥವಾ ಮಾಲೀಕರು ತಮ್ಮ ಲಕ್ಷಾಂತ ರೂ. ದಂಡ ಪಾವತಿಸುವುದಲ್ಲದೇ ಜೈಲು ಪಾಲಾಗಬೇಕಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಡಿಎಲ್,ಇನ್ಶೂರೆನ್ಸ್ ಮಾಡಿಸಿಕೊಳ್ಳಿ ಎಂದು ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ ರ್r ಮುನಿಯಪ್ಪ ಮನವಿ ಮಾಡಿದ್ದಾರೆ.
ಒಂದೊಂದು ಜೀವವೂ ಅಮೂಲ್ಯ. ಒಂದು ಸಣ್ಣ ನಿರ್ಲಕ್ಷ್ಯ, ಅತಿ ವೇಗದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ.ಇದಕ್ಕೆ ಸಾರ್ವಜನಿಕರು ಅವಕಾಶ ಕೊಡ ಬಾರದು. ಅಪಘಾತ ತಗ್ಗಿಸಲು ಇಲಾಖೆ ವತಿಯಿಂದ ಏನೆಲ್ಲಾ ಕ್ರಮ ಕೈಗೊಂಡರೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯ. –ಸಂದೇಶ್ ಕುಮಾರ್, ಎಸಿಪಿ, ಸಂಚಾರ ವಿಭಾಗ
ಕೋವಿಡ್ ಸಂದರ್ಭ ಸಂಚಾರ ಉಲ್ಲಂಘನೆಗೆ ದಂಡ ಹಾಕುವ ಪ್ರಕ್ರಿಯೆಗೆ ಕೈಹಾಕಿರಲಿಲ್ಲ. ಕಳೆದೊಂದು ತಿಂಗಳಿಂದ ಸಂಚಾರ ನಿಯಮ ಸಂಬಂಧಅರಿವು ಕಾರ್ಯಕ್ರಮ ಮೂಡಿಸಿ, ಮತ್ತೆಕಾರ್ಯಾಚರಣೆ ನಡೆಸಲಾಗುತ್ತಿದೆ.ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನನೀಡದೆ, ಸಂಚಾರ ನಿಯಮಗಳ ಕುರಿತು ತಿಳಿ ಹೇಳಬೇಕು. –ಮುನಿಯಪ್ಪ, ಇನ್ಸ್‌ಪೆಕ್ಟರ್ ದೇವರಾಜ ಸಂಚಾರ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.