ನಗರದ ರಸ್ತೆಗಳ ಸಂಚಾರ ವೇಗ ನಿಗದಿ
Team Udayavani, Mar 17, 2020, 3:00 AM IST
ಮೈಸೂರು: ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಗದ ಮಿತಿಯನ್ನು ನಿಗದಿಪಡಿಸಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅಧಿಸೂಚನೆ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ಹಾಗೂ ನಗರದ ಒಳಗಿನ ರಸ್ತೆಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು,
ಇದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಅಪಘಾತಗಳು ಸಹ ಸಂಭವಿಸಿ ಸಾರ್ವಜನಿಕರ ಸುರಕ್ಷತೆಗೆ ಮತ್ತು ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಆದ್ದರಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳಲ್ಲಿ ಮತ್ತು ನಗರದ ಒಳಗಿರುವ ರಸ್ತೆಗಳಲ್ಲಿನ ವಾಹನ ಸಂಚಾರದ ಸಾಂದ್ರತೆ ಮತ್ತು ರಸ್ತೆಗಳ ಭೌಗೋಳಿಕ ಅಂಶಗಳಿಗೆ ಅನುಗುಣವಾಗಿ ವಾಹನಗಳು ಸಂಚರಿಸುವ ವೇಗಕ್ಕೆ ಮಿತಿ ನಿಗಧಿಪಡಿಸಲಾಗಿದೆ.
ನಗರದ ಹೊರಗೆ- ಒಳಗೆ ವೇಗ ಮಿತಿ
– ಹೊರ ವರ್ತುಲ ರಸ್ತೆಯಿಂದ ಒಳಭಾಗದ ರಸ್ತೆಗಳಲ್ಲಿ ಕಾರು (ಎಲ್‌ಎಂ)40 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ ,ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್- 20 ಕಿ.ಮೀ.
– ಹೊರ ವರ್ತುಲ ರಸ್ತೆಯಲ್ಲಿ ಕಾರು (ಎಲ್‌ಎಂ)60 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 40 ಕಿ.ಮೀ, ಟ್ರ್ಯಾಕ್ಟರ್ 20 ಕಿ.ಮೀ.
– ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು – ಹುಣಸೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಗದ್ದಿಗೆ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ತಿ. ನರಸೀಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಬನ್ನೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಮಹದೇವಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ ಹಾಗೂ ಕೆಆರ್‌ಎಸ್ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ- ಕಾರು (ಎಲ್.ಎಂ.) 40 ಕಿ.ಮೀ, ಬಸ್ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್ 20 ಕಿ.ಮೀ.
– ಮೈಸೂರು ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಗರ ಸರಹದ್ದು ಪ್ರಾರಂಭದಿಂದ ಹೊರ ವರ್ತುಲ ರಸ್ತೆವರೆಗೆ ಕಾರು 60 ಕಿ.ಮೀ, ಬಸ್ ಮತ್ತು ದ್ವಿಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 40 ಕಿ.ಮೀ ಹಾಗೂ ಟ್ರ್ಯಾಕ್ಟರ್ 30 ಕಿ.ಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.