ಇನ್‌-ಲೇ ಕಲೆ ಉಳಿವಿಗೆ ವಿದೇಶಿಗರಿಗೆ ತರಬೇತಿ


Team Udayavani, Oct 30, 2018, 12:11 PM IST

m4.jpg

ಮೈಸೂರು: ನೋಡುಗರ ಕಣ್ಮನ ಸೆಳೆಯುವ ಮರದ ಇನ್‌-ಲೇ ಆರ್ಟ್‌ನಲ್ಲಿ ಅರಳುವ ಕಲಾಕೃತಿಗಳ ಆಕರ್ಷಣೆಗೆ ವಿದೇಶಿಗರು ಮಾರು ಹೋಗುತ್ತಿದ್ದಾರೆ. ಹೀಗೆ ನಮ್ಮ ಕಲೆ, ಸಂಸ್ಕೃತಿಗೆ ಮನಸೋಲುವ ವಿದೇಶಿಗರಿಗೆ ಮರದ ಇನ್‌-ಲೇ ಕಲೆಯ ತರಬೇತಿ ನೀಡುವ ಮೂಲಕ ನಶಿಸುತ್ತಿರುವ ಕಲೆಯ ಉಳಿವಿಗೆ ಕುಶಲಕರ್ಮಿಯೊಬ್ಬರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. 

ಕಲೆ, ಸಂಸ್ಕೃತಿಗೆ ಹೆಸರಾಗಿರುವ ಮೈಸೂರು ನಗರ ಹಲವು ದಶಕದಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ನೆಲೆಯಾಗಿದೆ. ಹಲವು ವರ್ಷದಿಂದ ಕುಂದನ ಕಲೆಯನ್ನೇ ವೃತ್ತಿಯಾಗಿಸಿಕೊಂಡಿರುವ ಮೈಸೂರಿನ ಅಶೋಕ್‌ ಕುಮಾರ್‌ ಅವರು ವಿದೇಶಿಗರು, ಆಸಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮರದ ಇನ್‌ ಲೇ ಕಲೆಯ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಆ ಮೂಲಕ ಕುಂದನ ಕಲೆಯನ್ನು ಉಳಿಸಿ, ಬೆಳೆಸುವ ಜತೆಗೆ ತಲೆಮಾರುಗಳಿಂದ ಬಂದಿರುವ ಕಲೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅಶೋಕ್‌ ಅವರ ಮರದ ಇನ್‌ ಲೇ ಕಲೆಯ ವೃತ್ತಿಗೆ ಆಕರ್ಷಿತರಾಗಿರುವ ಹಲವು ದೇಶಗಳ ಸರ್ಕಾರಿ ಅಧಿಕಾರಿಗಳು ನಗರಕ್ಕಾಗಮಿಸಿ ಕಲೆಯ ಬಗ್ಗೆ ಮಾಹಿತಿ ಪಡೆಯುತ್ತಾರೆ. 

ಪ್ರಾಥಮಿಕ ತರಬೇತಿ: ಮೈಸೂರಿನ ಮಂಡಿಮೊಹಲ್ಲಾದಲ್ಲಿ “ಅರುಣ್‌ ಫೈನ್‌ ಆರ್ಟ್ಸ್’ ಹೆಸರಿನಲ್ಲಿ ಮಳಿಗೆಯಲ್ಲಿ ಅಶೋಕ್‌ ಕುಮಾರ್‌ ಮರದ ಇನ್‌-ಲೇ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ, ತಮ್ಮ ವೃತ್ತಿಯ ನಡುವೆ ಮರದ ಇನ್‌-ಲೇ ಕಲೆಯನ್ನು ಎಲ್ಲೆಡೆ ಪಸರಿಸುವ ಚಿಂತನೆ ನಡೆಸಿದ ಅಶೋಕ್‌ ಅವರು ಇದಕ್ಕಾಗಿ ಕಳೆದ ಮೂರು ವರ್ಷದಿಂದ ವಿದೇಶಿ ಪ್ರಜೆಗಳು,

ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಇದಕ್ಕಾಗಿ ತಮ್ಮದೇ ಮಳಿಗೆಯಲ್ಲಿ ಕೊಠಡಿಯನ್ನು ಸಿದ್ಧªಪಡಿಸಿರುವ ಅಶೋಕ್‌ ಅವರು, ಒಂದು ಬಾರಿಗೆ ಎಂಟು ಮಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದು, ಮರದ ಇನ್‌-ಲೇ ಕಲೆಗೆ ಸಂಬಂಧಿಸಿದ ಪ್ರಾಥಮಿಕ ವಿಷಯಗಳ ತರಬೇತಿ ನೀಡಲಿದ್ದಾರೆ. 

20 ಮಂದಿಗೆ ತರಬೇತಿ: ಆರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಸ್ಕಿಲ್‌ ಟೂರಿಸಂ ಸಂಸ್ಥೆಯೊಂದಿಗೆ ವಿದೇಶಿ ಪ್ರಜೆಗಳಿಗೆ ಮರದ ಇನ್‌-ಲೇ ಕಲೆಯ ತರಬೇತಿ ನೀಡಲು ಆರಂಭಿಸಿದ್ದರು. ಇದುವರೆಗೂ ಐರ್ಲೆಂಡ್‌, ಅಮೆರಿಕ, ಬ್ರಿಟನ್‌ ಮತ್ತಿತರ ರಾಷ್ಟ್ರಗಳ 20ಕ್ಕೂ ಹೆಚ್ಚು ವಿದೇಶಿಗರಿಗೆ ತರಬೇತಿ ನೀಡಿದ್ದಾರೆ.

ಅದರಲ್ಲೂ ಅಮೆರಿಕ ಮೂಲದ ಪ್ರಜೆಗಳಿಗೆ ಹೆಚ್ಚಾಗಿ ತರಬೇತಿಯನ್ನು ನೀಡಿದ್ದು, ಇದರೊಂದಿಗೆ ಸ್ಥಳೀಯ ಆಸಕ್ತ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡುತ್ತಿದ್ದಾರೆ. ಅಶೋಕ್‌ ಅವರ ಈ ಕೆಲಸಕ್ಕೆ ಪತ್ನಿ ಹಾಗೂ ತಂದೆ ಶ್ರೀಕಾಂತ್‌ ಕೂಡ ಕೈಜೋಡಿಸಿದ್ದಾರೆ. 

ಪ್ರೋತ್ಸಾಹ ಸಿಗುತ್ತಿಲ್ಲ: ಮರದ ಇನ್‌-ಲೇ ಕಲೆಯ ಪ್ರೋತ್ಸಾಹ ಮತ್ತು ಬೆಳವಣಿಗೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಂಬಂಧಪಟ್ಟವರಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ ಪ್ರತಿ ವರ್ಷ ಮರದ ಇನ್‌-ಲೇ ಕಲೆಯಲ್ಲಿ ತೊಡಗಿದ್ದ ಕಲಾವಿದರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಇದರಿಂದ ಒಂದು ಕಾಲದಲ್ಲಿ 17 ಸಾವಿರ ಮಂದಿ ಇದ್ದ ಮರದ ಇನ್‌-ಲೇ ಕಲಾವಿದರ ಸಂಖ್ಯೆ ಇಂದು 3 ಸಾವಿರ ಮಂದಿಯಷ್ಟೇ ಇದ್ದಾರೆ. ಹಿಂದೆ ಈ ಕಲೆಯಲ್ಲಿ ತೊಡಗಿದ್ದ ಹಲವರು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು, ಮರದ ಇನ್‌-ಲೇ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದ ಕಾರ್ಖಾನೆಗಳು ಸಹ ಬಂದ್‌ ಆಗಿವೆ ಎಂದು ಅಶೋಕ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

* ಸಿ. ದಿನೇಶ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru-Elephant

Mysuru Dasara: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವ 5.2 ಟನ್‌

3-hunsur

Hunsur: ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಇನ್ಸ್ಪೆಕ್ಟರ್ ಮುನಿಯಪ್ಪ

CM-Siddu

Report on Corruption: ಕೋವಿಡ್‌ ಅಕ್ರಮ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ: ಸಿಎಂ

Yadhuveer

Mysuru: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಅಕ್ರಮ: ಸಂಸದ ಯದುವೀರ್‌

Chamundi-Sabhe

Mysore: ಚಾಮುಂಡೇಶ್ವರಿ ದೇಗುಲ ಸಂಪ್ರದಾಯ, ಘನತೆ ಕಾಪಾಡಿ ಉನ್ನತೀಕರಿಸಿ: ಸಿದ್ದರಾಮಯ್ಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.