ಕಡತ ವಿಲೇವಾರಿಯಾಗದಿದ್ದರೆ ವರ್ಗಾವಣೆ ಶಿಕ್ಷೆ: ಶಾಸಕ
Team Udayavani, Sep 8, 2017, 11:24 AM IST
ನಂಜನಗೂಡು: ಜನಸೇವಕರಾದ ನೀವು ಸಾರ್ವಜನಿಕರು ನೀಡಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ವರ್ಗಾವಣೆ ಶಿಕ್ಷೆ ನೀಡಲಾಗುವುದು ಎಂದು ಶಾಸಕ ಕಳಲೆ ಕೇಶವಮೂರ್ತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಂಜನಗೂಡು ನಗರಸಭಾ ವ್ಯಾಪ್ತಿಯ ಸ್ವತ್ಛತಾ ನಿರ್ವಹಣೆಗಾಗಿ ಟಿಪ್ಪರ್, ಟ್ರೈಲರ್ ಸೇರಿದಂತೆ 10 ವಾಹನಗಳು ಹಾಗೂ 28 ಕೈಗಾಡಿಗಳನ್ನು ಸಂಸದ ಧ್ರುವನಾರಾಯಣರೊಂದಿಗೆ ಲೋಕಾರ್ಪಣೆ ಮಾಡಿದ ಬಳಿಕ, ಸ್ವತ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ 14 ಜನ ಪೌರ ಕಾರ್ಮಿಕರಿಗೆ ತಲಾ 6 ಲಕ್ಷ ರೂಗಳ ವಸತಿ ಸಹಾಯ ಹಾಗೂ 20 ಲಕ್ಷರೂಗಳ ಆರೋಗ್ಯ ವಿಮಾ ಬಾಂಡ್ ವಿತರಿಸಿದರು. ಕಡತಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡದಿದ್ದರೆ ಅಂತಹವರು ನಮಗೆ ಬೇಕಿಲ್ಲ. ಅವರಿಗೆ ವರ್ಗಾವಣೆ ಶಿಕ್ಷೆ ವಿಧಿಸಿ ಕಳುಹಿಸಲಾಗುವುದು. ಸದ್ಯದಲ್ಲೇ ಖಾತಾ ಅದಾಲತ್ ನಡೆಸಿ ಬಡವರ ಸಮಸ್ಯೆ ನೀಗಿಸಲಾಗುವುದು ಎಂದು ತಿಳಿಸಿದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದಾಗಿ ನಗರಕ್ಕೆ 33 ಕೋಟಿ ರೂ., ಹಣ ಮಂಜೂರಾಗಿದ್ದು ಈ ಹಣವನ್ನು ಸದಸ್ಯರು ತಮ್ಮ ವಾರ್ಡುಗಳಿಗೆ ಹಂಚಿಕೊಳ್ಳದೆ ಅಭಿವೃದ್ಧಿ ಕಾಣದ ಬಡಾವಣೆಗಳ ಅಭಿವೃದ್ಧಿಗೆ ವಿನಿಯೋಗಿಸಿ ಎಂದು ತಿಳಿಸಿದರು. ಪುರಸಭೆಯಿಂದ ಬಡ್ತಿ ಹೊಂದಿ ನೂತನ ನಗರಸಭಾ ಭವನ ನಿರ್ಮಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸಂಸದರನ್ನು ಸ್ವಾಗತಿಸಿದ ನಗರಸಭಾ ಆಯುಕ್ತ ವಿಜಯ್ ಖಾತಾ ಆಂದೋಲನದ ಪ್ರಸ್ತಾವನೆ ಈಗಾಗಲೇ ಜಿಲ್ಲಾಧಿಕಾರಿಗಳ ಮುಂದಿದೆ ಎಂದರು. ನಗರಸಭಾ ಅಧ್ಯಕ್ಷೆ ಪುಷ್ಪ$ಲತಾ, ಉಪಾಧ್ಯಕ್ಷ ಪ್ರದೀಪ, ಸದಸ್ಯರಾದ ದೊಡ್ಡ ಮಾದಯ್ಯ ,ವಿಜಯಾಂಬಿಕಾ, ಮಂಜುನಾಥ ,ಅನಸೂಯ, ಮಹದೇವಸ್ವಾಮಿ, ಚೆಲುವರಾಜು, ಸಿ.ಎಂ.ಶಂಕರ, ಗಿರೀಶ, ಚುಂದರ್‌ರಾಜ್, ಲಿಂಗಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಅಧಿಕಾರಿಗಳಾದ ವೆಂಕಟೇಶ, ಶ್ರೀನಿವಾಸ, ಅರ್ಚನಾ ರೇಖ, ಸುಷ್ಮಾ ಪುಟ್ಟಸ್ವಾಮಿ ಮತ್ತಿತರರಿದ್ದರು.
ಕಸ ವಿಲೇವಾರಿಗೆ ಬೇಕಾಗಬಹುದಾದ ಎಲ್ಲಾ ಸೌಲಭ್ಯಗಳನ್ನು ನಗರಸಭೆ ಕಲ್ಪಿಸಿದೆ. ಹೀಗಾಗಿ ಘನ ತ್ಯಾಜ್ಯ ನಿರ್ವಹಣೆಯನ್ನು ಸುಗಮವಾಗಿ ನಿರ್ವಹಿಸಬೇಕು. ಭಕ್ತರಿಂದ ಕೂಡಿರುವ ನಂಜನಗೂಡು ಸ್ವತ್ಛತೆಯಲ್ಲಿ ಹೆಸರುಗಳಿಸುವಂತಾಗಲಿ. ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದ್ದು ನಾವೆಲ್ಲಾ ಜನ ಸೇವಕರು ಎನ್ನುವುದನ್ನು ಮರೆಯಬಾರದು.
-ಆರ್.ಧ್ರುವನಾರಾಯಣ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.