ಆದಿವಾಸಿ ಹಾಡಿಗೆ ಟಿಆರ್‌ಐ ಮುಖ್ಯಸ್ಥ ಡಾ.ಶ್ರೀನಿವಾಸ್‌ ಭೇಟಿ


Team Udayavani, May 13, 2023, 1:09 PM IST

ಆದಿವಾಸಿ ಹಾಡಿಗೆ ಟಿಆರ್‌ಐ ಮುಖ್ಯಸ್ಥ ಡಾ.ಶ್ರೀನಿವಾಸ್‌ ಭೇಟಿ

ಹುಣಸೂರು: ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಟಿಆರ್‌ಐ) ಮುಖ್ಯಸ್ಥ ಡಾ. ಶ್ರೀನಿವಾಸ್‌ ಶುಕ್ರವಾರ ಮಾಸ್ತಮ್ಮನ ಹಾಡಿ ಹಾಗೂ ಡೀಡ್‌ ಸಂಸ್ಥೆಗೆ ಭೇಟಿ ನೀಡಿ ಮೂಲನಿವಾಸಿ ಬುಡಕಟ್ಟುಗಳ ತಾಯಿ ಭಾಷೆಗಳ ರಕ್ಷಣೆ, ಅವರಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಆಯ್ದ 20 ಜನರ ತಂಡದೊಡನೆ ರಾಷ್ಟ್ರಪತಿಗಳ ಭೇಟಿಗಾಗಿ ನಡೆಸಿರುವ ತಯಾರಿ ಕುರಿತು ಜೊತೆ ಚರ್ಚಿಸಿದರು.

ರಾಜ್ಯದಲ್ಲಿ ಪಿವಿಟಿಜಿ- ಮೂಲನಿವಾಸಿ ಬುಡಕಟ್ಟುಗಳಾದ ಜೇನುಕುರುಬರು ಮತ್ತು ಕೊರಗರ ತಾಯಿ ಭಾಷೆಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಈ ಎರಡು ಬುಡಕಟ್ಟುಗಳ ಭಾಷೆಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಸಂಬಂಧಿಸಿದ ಬುಡಕಟ್ಟು ಮುಂದಾಳುಗಳೊಡನೆ ಚರ್ಚಿಸಿ ಪುಸ್ತಕಗಳನ್ನು ಪ್ರಕಟಿಸಿ, ಆದಿವಾಸಿ ಹಾಡಿಗಳ ಶಾಲೆ ಗಳಲ್ಲಿ ಬಳಸುವ ಯೋಜನೆಗಳನ್ನು ವಿವರಿಸಿದರು. ಜೇನುಕುರುಬ ಸಮುದಾಯದ ಕೆಲವು ಮುಂದಾಳುಗಳು ನಮಗೆ ಕನ್ನಡ, ಇಂಗ್ಲಿಷ್‌ ಚೆನ್ನಾಗಿ ಕಲಿಸಿದರೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆದಿವಾಸಿ ತಾಯಿ ಭಾಷೆಗಳ ಪ್ರಾಮುಖ್ಯತೆ, ಅವರ ಅಸ್ಮಿತೆಯ ಗುಣಲಕ್ಷಣಗಳನ್ನು ರಕ್ಷಿಸಿಕೊಳ್ಳವ ಹೊಣೆಗಾರಿಕೆ, ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳು ಖುಷಿಯಿಂದ ಕಲಿಯಲು ಪಾರಂಪರಿಕ ಜ್ಞಾನ ಮತ್ತು ಬುದ್ದಿವಂತಿಕೆಯನ್ನು ಅನುಭವದ ಹಿನ್ನೆಲೆಯಲ್ಲಿ ಸುಲಭವಾಗಿ ಗ್ರಹಿಸಲು ತಾಯಿ ಭಾಷೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಿರಿಯ ಪ್ರಾರ್ಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆ ಆದಿವಾಸಿ ತಾಯಿ ಭಾಷೆಗಳನ್ನು ಜೊತೆಯಾಗಿ ಕಲಿಸಿ ನಂತರ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಿಗೆ ಸುಲಭವಾಗಿ ತೆರಳಲು ಅವಕಾಶ ಸೃಷ್ಟಿಸಲಾಗುವುದು. ತಾಯಿ ಭಾಷೆಗೆ ಗಮನಹರಿಸುವುದು ಬೇಡ ಎಂಬುದು ಸರಿಯಾದ ನಿರ್ಧಾರವಲ್ಲ. ಇದನ್ನು ವಿಸ್ತೃತವಾಗಿ ಚರ್ಚಿಸಲು ಆಯ್ದ 10 ಜೇನುಕುರುಬರ ಹಿರಿ ಯರು, ಮಹಿಳೆಯರು ಮತ್ತು ಯುವ ಜನರನ್ನು ಕರೆದು ಚರ್ಚಿಸಲು ತೀರ್ಮಾನಿಸಲಾಯಿತು. ಅಂತೆಯೇ ಜೇನುಕುರುಬರ ಕ್ಷೇಮಾಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಸಮಗ್ರ ಚರ್ಚೆಗೆ ಹಾಗೂ ಆದಿವಾಸಿ ಪ್ರದೇಶಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಲು ಸೂಕ್ತ ಶಿಫಾರಸ್ಸು ನೀಡಲು ಒಂದು ಕಾರ್ಯಗಾರವನ್ನು ಟಿಆರ್‌ಐ ಮತ್ತು ಡೀಡ್‌ ಸಂಸ್ಥೆಗಳು ಜಂಟಿಆದಿವಾಸಿ ಹಾಡಿಯಾಗಿ ನಡೆಸಲು ನಿರ್ಧರಿಸಿ ದಿನಾಂಕವನ್ನು ಸದ್ಯದಲ್ಲೆ ಪ್ರಕಟಿಸಲಾಗುವುದು ಎಂದರು.

ಡೀಡ್‌ ಸಂಸ್ಥೆಯ ಮುಖ್ಯಸ್ಥ ಡಾ.ಎಸ್‌.ಶ್ರೀಕಾಂತ್‌ ಪ್ರಕಟಿಸಿರುವ ಜೇನು ನುಡಿ ಕಲಿಯಾಕು ಪುಸ್ತಕವನ್ನು ಟಿಆರ್‌ಐ ನಿರ್ದೇಶಕರಾದ ಡಾ.ಶ್ರೀನಿವಾಸ್‌ ರಿಗೆ ಪರಿಚಯಿಸಿದರು.

ಡೀಡ್‌ ಸಂಸ್ಥೆಯ ನಿರ್ದೇಶಕ ಡಾ.ಎಸ್‌.ಶ್ರೀಕಾಂತ್‌ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹೈಕೋರ್ಟ್‌ ಆದೇಶ ಪಾಲಿಸುವ ಕುರಿತು ಬರೆದ ಪತ್ರದ ಅನುಸರಣೆಕುರಿತು ಚರ್ಚಿಸಲಾಯಿತು. ಜಿಲ್ಲಾ ಮಟ್ಟದಲ್ಲಿರುವ ಜೇನುಕುರುಬ ಅಭಿವೃದ್ಧಿ ಸಮಿತಿಯ ಸಭೆಯನ್ನು ಜಿಲ್ಲಾಧಿಕಾರಿಗಳು ಕೂಡಲೆ ಕರೆದು ಸರ್ಕಾರ ಮಟ್ಟದಲ್ಲಿ ಆಗಬೇಕಾಗಿರುವ ತೀರ್ಮಾನವನ್ನು ಕೂಡಲೆ ಕೈಗೊಂಡು ಜಿಲ್ಲಾ ಪುರ್ನವಸತಿ ಸಮಿತಿಗೆ ಮಾರ್ಗದರ್ಶನ ಮಾಡಲು ಮನವಿ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಡುಕುರುಬ ಎಂಬ ಪದವನ್ನು ಎಸ್‌ಟಿ ಪಟ್ಟಿಯಿಂದ ಕೈಬಿಡದಿರುವುದು ಹಿಂಬಾಗಿಲಿ ನಿಂದ ಹಿಂದುಳಿದ ವರ್ಗದ ಜನರು ಎಸ್‌ಟಿ ಸೌಕರ್ಯ ಪಡೆಯುವ ಹುನ್ನಾರಕ್ಕೆ ಅವಕಾಶ ಮಾಡಿ ಕೊಟಂತಾಗಿದೆ. ಕಾಡುಕುರುಬ ಎಂಬ ಬುಡ ಕಟ್ಟಾಗಲಿ, ಜಾತಿಯಾಗಲಿ ಇಲ್ಲದಿರುವುದರಿಂದ ಈ ಪದವನ್ನು ಎಸ್‌ಟಿ ಪಟ್ಟಿಯಿಂದ ಕೈಬಿಡುವುದು ಸೂಕ್ತ ಎಂದು ಚರ್ಚಿಸಲಾಯಿತು.

ಟಾಪ್ ನ್ಯೂಸ್

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

Loka-SP-Udesh–CM

MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್‌

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.