“ಮಾತೃಪೂರ್ಣ’ ಯಶಸ್ವಿ ಎಂದ ಸಿಡಿಪಿಒಗೆ ತರಾಟೆ
Team Udayavani, Nov 19, 2017, 12:14 PM IST
ಎಚ್.ಡಿ.ಕೋಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಮಾತೃಪೂರ್ಣ ಯೋಜನೆ ಅಧಿಕಾರಿಗಳ ಪರಿಶ್ರಮದಿಂದಾಗಿ ತಾಲೂಕಿನಲ್ಲಿ ಶೇ.62ರಷ್ಟು ಗುರಿ ಸಾಧಿಸಿದ್ದು ಯೋಜನೆ ತಾಲೂಕಿನಲ್ಲಿ ಯಶಸ್ವಿಯಾಗಿದೆ ಎಂದು ಸಿಡಿಪಿಒ ಶೇಷಾದ್ರಿ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಕೆಲ ತಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಏನ್ರಿ ಸಾಹೇಬರೇ ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಿ. ಯೋಜನೆ ನಮ್ಮೂರಿನಲ್ಲಿ ಶೇ.30 ರಷ್ಟು ಕಾರ್ಯರೂಪಕ್ಕೆ ಬಂದಿಲ್ಲ.
ಇನ್ನೆಂಲ್ಲಿಂದ ಶೇ 62.ರಷ್ಟಾಗಿದೆ ಎಂದು ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಂತರ ಮಾತನಾಡಿದ ಸದಸ್ಯರು, ಸಂಬಂಧಪಟ್ಟ ಮೇಲಧಿಕಾರಿಗಳನ್ನು ಕರೆತಂದು ಆಯಾ ಸ್ಥಳಗಳಲ್ಲಿ ಸಭೆ ಮಾಡಿ. ಯೋಜನೆ ಯಶಸ್ವಿಗೆ ಇನ್ನಾದರೂ ಪ್ರಾಮಾಣಿಕವಾಗಿ ಶ್ರಮಿಸಿ ಎಂದು ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ವೈದ್ಯನ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿಯೊಬ್ಬಳು ಗ್ಯಾಗ್ರಿಂನ್‌ಗೆ ತುತ್ತಾಗಿ ಸಾವನ್ನಪ್ಪಿದ ಹಿನ್ನೆ°ಲೆಯಲ್ಲಿ ಆರೋಗ್ಯ ಇಲಾಖೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಹಂಪಾಪುರ, ಹ್ಯಾಂಡ್‌ಪೋಸ್ಟ್, ಹಾಗೂ ಇನ್ನಿತರ ಕಡೆ ಕಾರ್ಯನಿರ್ವಹಿಸುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ. ಯುವತಿ ಸಾವಿಗೆ ಕಾರಣರಾಗಿರುವ ನಕಲಿ ವೈದ್ಯನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಅಧಿಕಾರಿ ಎಲ್ಲಿ?: ಇನ್ನೂ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ಬಾರದೆ ಕಚೇರಿ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದರು. ಈ ವೇಳೆ, ಕೆಲ ಸದಸ್ಯರು ಸಭೆಗೆ ಬಂದಿದ್ದವರನ್ನು ನಿಮ್ಮ ಅಧಿಕಾರಿ ಎಲ್ಲಿ, ನೀವ್ಯಾಕೆ ಬಂದಿದ್ದೀರಿ. ತಾಲೂಕಿನಲ್ಲಿ ರೇಷ್ಮೆ ಬೆಳೆದ ರೈತ ಕಳೆದ 3ಬೆಳೆಗಳಲ್ಲೂ ಸಂಪೂರ್ಣವಾಗಿ ನಷ್ಟ ಅನುಭವಿಸಿದ್ದಾನೆ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದಾಗ, ಸಭೆಗೆ ಬಂದಿದ್ದವರು ತಬ್ಬಿಬ್ಟಾದರು.
ಜೊತೆಗೆ ಇಲಾಖೆಯಿಂದ ರೈತರಿಗೆ ನೀಡಿರುವ ರೇಷ್ಮೆ ಪರಿಕರ ತುಂಬಾ ಕಳಪೆ ಗುಣಮಟ್ಟದ್ದಾಗಿವೆ. 5 ಸಾವಿರ ರೂ., ಮುಖ ಬೆಲೆ ಮೋಟರ್ ಗೆ 25 ಸಾವಿರ ರೂ. ಬಿಲ್ ಹಾಕಿದ್ದೀರಿ ಹೇಗೆ ಎಂದು ಹಿಗ್ಗಾಮುಗ್ಗಾ ತರಟೆ ತಗೆದುಕೊಂಡರು. ನಂತರ ಸಭೆಗೆ ಬಂದ ಅಧಿಕಾರಿ ಮಾತನಾಡಿ, ರೇಷ್ಮೆ ಬೆಳೆ 3ಬಾರಿಯೂ ಕೈಕೊಡಲು ಜಾಗದ ತೊಂದರೆ ಇರಬಹುದು. ಇನ್ನೂ ರೇಷ್ಮೆ ಚಂದ್ರಿಕೆ ಸೇರಿದಂತೆ ಪರಿಕರ ಕಳಪೆಯಾಗಿರುವುದು ಕಂಡು ಬಂದಿದೆ ಎಂದರು.
ತಾಪಂ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಬೇಗೌಡ, ಸದಸ್ಯರಾದ ಅಂಕನಾಯ್ಕ, ಸುಂದರನಾಯ್ಕ, ಸ್ಟ್ಯಾನಿ ಬಿಟ್ಟೋ, ಬಿ.ಸಿ.ರಾಜು, ಸೇರಿದಂತೆ ಎಲ್ಲಾ ಸದಸ್ಯರಿದ್ದರು. ತಾಲೂಕು ಅಧಿಕಾರಿಗಳಾದ ಕೃಷಿ ಅಧಿಕಾರಿ ಜಯರಾಮಯ್ಯ, ತೋಟಗಾರಿಕೆ ಅಧಿಕಾರಿ ಸಿದ್ದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ, ತಾಪಂ ಇಒ ಶ್ರೀಕಂಠರಾಜೇಅರಸ್, ತಾಲೂಕು ಅರಣ್ಯಾಧಿಕಾರಿ ಗೀತಾಮಣಿ, ಎಇಇ ಸುನೀಲ್, ಪ್ರದೀಪ್, ತಾಪಂ ಸಿಬ್ಬಂದಿ ಮಂಜುನಾಥ್, ಗುರು, ಸಿದ್ದು, ನಂಜುಂಡಸ್ವಾಮಿ ಇದ್ದರು.
ತಾಲೂಕಿನಲ್ಲಿ ಲ್ಯಾಬ್‌ಗಳು ಮತ್ತು ಕ್ಲಿನಿಕ್‌ಗಳು ಸೇರಿ ಒಟ್ಟು 42 ನಕಲಿ ಕ್ಲಿನಿಕ್‌ಗಳು ಇದ್ದು, ಎಲ್ಲಾ ಕಡೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಮುಂದೆ 2 ತಿಂಗಳಿಗೊಮ್ಮೆ ಭೇಟಿ ನೀಡಿ ನಕಲಿ ವೈದ್ಯರು ತಾಲೂಕಿನಲ್ಲಿ ಕಂಡು ಬಾರದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
-ಡಾ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.