ಮಾಧ್ಯಮಗಳಿಂದ ವಾಸ್ತವ ವಿಷಯ ತಿರುಚೋ ಯತ್ನ: ಮಾಸ್ಟರ್
Team Udayavani, Sep 18, 2017, 12:58 PM IST
ಮೈಸೂರು: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಬ್ರಾಹ್ಮಣಶಾಹಿ ಹಿಡಿತದಲ್ಲಿದ್ದು, ಇದರಿಂದಾಗಿ ವಾಸ್ತವದ ವಿಷಯಗಳನ್ನು ತಿರುಚುವ ಕೆಲಸ ಮಾಡುತ್ತಿವೆ ಎಂದು ಚಿಂತಕ ಹಾಗೂ ಚಲನಚಿತ್ರ ನಿರ್ದೇಶಕ ಯೋಗೇಶ್ ಮಾಸ್ಟರ್ ವಿಷಾದಿಸಿದರು.
ನವಸಮಾಜ ನಿರ್ಮಾಣ ವೇದಿಕೆ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಾರುಕೋಲು ಪತ್ರಿಕಾ ಬಳಗ, ಯುವ ಪ್ರಗತಿಪರ ಚಿಂತಕರ ಸಂಘ ಮತ್ತು ಸಮೈಕ್ಯ ಪಬ್ಲಿಕೇಷನ್ಸ್ ವತಿಯಿಂದ ಮಾನಸಗಂಗೋತ್ರಿ ರಾಣಿಬಹದ್ದೂರ್ ಸಭಾಂಗಣದಲ್ಲಿ ವೈಚಾರಿಕ ಚಳವಳಿಗಾರ ಪೆರಿಯಾರ್ ಈ.ವೆಂ. ರಾಮಸ್ವಾಮಿ ಅವರ 138ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪೆರಿಯಾರ್ ಸಂಪುಟ ಬಿಡುಗಡೆ, ಪೆರಿಯಾರ್ ಛಾಯಾಚಿತ್ರಗಳ ಪ್ರದರ್ಶನ, ವಿಚಾರ ಸಭೆ ಮತ್ತು ಮೌಡ್ಯ ನಿರ್ಮೂಲನಾ ದಿನಾಚರಣೆ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೌರಿ ಹೆಸರಿನಲ್ಲಿ ಧರ್ಮ, ದೇವರು, ರಾಷ್ಟ್ರೀಯತೆ, ರಾಜಕೀಯ ಪ್ರಭುತ್ವ ಎಂಬ ವಿಷಯಗಳನ್ನು ಎಳೆದು ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಶಾಹಿಗಳಿಂದ ಕನ್ನಡವನ್ನು ಮುಕ್ತಗೊಳಿಸಿ, ಭಾಷೆಯಲ್ಲಿ ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
ಧೃತಿಗೆಡುವ ಅಗತ್ಯವಿಲ್ಲ: ಅನೇಕ ವಿಶ್ವವಿದ್ಯಾಲಯಗಳಲ್ಲಿ ಬ್ಯಾಹ್ಮಣಶಾಹಿ ವಿರುದ್ಧ ಹಲವು ಸಂಶೋಧನೆ, ಅಧ್ಯಯನಗಳು ನಡೆದಿದೆ. ಆದರೆ, ಅದು ಜನರಿಗೆ ತಲುಪುತ್ತಿಲ್ಲ. ತಲುಪಿಸುವ ಪ್ರಯತ್ನಗಳು ನಡೆದಿಲ್ಲ. ಇನ್ನೂ ಇವೆಲ್ಲದರ ಬಗ್ಗೆ ಪ್ರಶ್ನಿಸಬೇಕಾದ ಯುವಜನತೆ ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದಾರೆ.
ಇನ್ನೂ ಬೌದ್ಧಿಕ ಮಾತ್ರವಲ್ಲದೆ, ವೈಚಾರಿಕ, ಭಾವನಾತ್ಮಕ ಹತ್ಯೆಗಳು ನಡೆಯುತ್ತಿದ್ದು ಇವುಗಳನ್ನು ಎದುರಿಸುವುದು ಹೇಗೆ ಎಂಬುದೇ ತಿಳಿಯದಂತಾಗಿದೆ. ಹೀಗಾಗಿ ಸಮಾಜದಲ್ಲಿನ ಬ್ರಾಹ್ಮಣ ಶಾಹಿಯ ವ್ಯವಸ್ಥಿತ ಹುನ್ನಾರಗಳ ವಿರುದ್ಧದ ಹೋರಾಟಕ್ಕೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಪೆರಿಯಾರ್ ಸಂಪುಟ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ವೈಜಾnನಿಕ ಮನೋವೃತ್ತಿ ಆಂದೋಲನದ ಕಾರ್ಯದರ್ಶಿ ಎಂ.ಅಬ್ದುಲ್ ರೆಹಮಾನ್ ಪಾಷಾ, ಪೆರಿಯಾರ್‌ರಿಗೆ ಯಾವ ಮೌಡ್ಯವನ್ನು ವಿರೋಧಿಸಬೇಕು ಎಂಬ ಸ್ಪಷ್ಪ ಅರಿವಿತ್ತು. ಆದರೆ, ಅವರ ಮಾರ್ಗವನ್ನು ಅನುಸರಿಸುವುದು ಸಾಧ್ಯವಿಲ್ಲದಿದ್ದರೂ, ಸ್ವಲ್ಪಮಟ್ಟಿಗೆ ಅವರ ತತ್ವ, ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಇತ್ತೀಚಿನ ದಿನಗಳಲ್ಲಿ ಹಳೆಯ ಮೌಡ್ಯಗಳ ಜತೆಗೆ 21ನೇ ಶತಮಾನದಲ್ಲಿ ಹೊಸ ಮೌಡ್ಯಗಳ ಆಚರಣೆ ವಿಜೃಂಭಿಸುತ್ತಿದ್ದು, ಶಿಕ್ಷಕರು, ಎಂಜಿನಿಯರ್‌ಗಳು, ವೈದ್ಯರಲ್ಲೂ ಮೌಢಾಚರಣೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಸಭಾಂಗಣದ ಹೊರ ಭಾಗದಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ, ಬಾರುಕೋಲು ಪತ್ರಿಕೆ ಸಂಪಾದಕ ರಂಗಸ್ವಾಮಿ, ಅನುವಾದಕ ನಾ.ದಿವಾಕರ, ಮೈಸೂರು ವಿಶ್ವವಿದ್ಯಾಲಯ ಯುವ ಪ್ರಗತಿಪರ ಚಿಂತಕರ ಸಂಘ, ಸಂಶೋಧಕರ ಸಂಘದ ಅಧ್ಯಕ್ಷ ಬಿ.ಮೂರ್ತಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಜಯ್‌ರಾಜ್, ಜೀರಹಳ್ಳಿ ರಮೇಶ್‌ಗೌಡ ಇದ್ದರು.
ಮಾಧ್ಯಮಗಳ ಮೇಲೆ ಬ್ರಾಹ್ಮಣ್ಯರ ಪ್ರಭಾವ
ಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮಗಳು ಬ್ರಾಹ್ಮಣ ಶಾಹಿ ಹಿಡಿತದಲ್ಲಿದ್ದು, ವಾಸ್ತವ ವಿಷಯಗಳನ್ನು ತಿರುಚುವ ಕೆಲಸ ಮಾಡುತ್ತಿವೆ. ಹೀಗಾಗಿ ಇತ್ತೀಚಿಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಾವಿಗೆ ಕೋಮುವಾದಿಗಳು ಕಾರಣವೆನ್ನುವ ಅನುಮಾನ ಕಾಡುತ್ತಿದ್ದ ವೇಳೆ ಘಟನೆಯನ್ನು ನಕ್ಸಲರತ್ತ ತಿರುಗಿಸುವ ಪ್ರಯತ್ನ ಮಾಡಲಾಯಿತು. ಬ್ರಾಹ್ಮಣ್ಯರ ಪ್ರಭಾವ ಮಾಧ್ಯಮಗಳ ಮೇಲೆ ಮಾತ್ರವಲ್ಲದೆ ಕಲೆ, ಸಾಂಸ್ಕೃತಿಕತೆ, ರಾಜಕೀಯ ಕ್ಷೇತ್ರದಲ್ಲೂ ನಿಯಂತ್ರಣ ಹೊಂದಿದೆ ಎಂದು ಚಿಂತಕ ಯೋಗೇಶ್ ಮಾಸ್ಟರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.