ಹಬ್ಬಕ್ಕೆ ನೀರಿಲ್ಲದೆ ಪರಿತಪಿಸಿದ್ದ 16 ಗ್ರಾಮಗಳಿಗೆ ಕಡೆಗೂ ನೀರು ಪೂರೈಕೆ
Team Udayavani, Apr 16, 2021, 4:08 PM IST
ನಂಜನಗೂಡು: ಬೃಹತ್ ಓವರ್ ಹೆಡ್ ಟ್ಯಾಂಕ್‌ಗೆ ನೀರು ಪೂರೈಸುವ ಕೊಳವೆ ಒಡೆದು 16ಗ್ರಾಮಗಳಿಗೆ ಎರಡು ನೀರಿನ ಅಭಾವ ಉಂಟಾಗಿದ್ದರಿಂದ ತ್ವರಿತವಾಗಿ ದುರಸ್ತಿ ಕಾರ್ಯಕೈಗೊಂಡು ಕುಡಿಯುವ ನೀರು ಪೂರೈಸಲಾಗಿದೆ.
ಉದಯವಾಣಿಯಲ್ಲಿ ಏ.12ರಂದು “ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ, ಇಲಾಖೆಗಳನಿರ್ಲಕ್ಷ್ಯ ಧೋರಣೆಯನ್ನು ತಿಳಿಸುವುದರೊಂದಿಗೆ ಜನರು ಹಬ್ಬಕ್ಕೆ ನೀರಿಲ್ಲದಿರುವ ಕುರಿತು ಗಮನ ಸೆಳೆಯಲಾಗಿತ್ತು.
ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ವಿದ್ಯುತ್ ಇಲಾಖೆ ತಾನೇ ಮುಂದೆ ನಿಂತು ಒಡೆದಿದ್ದ ಕೊಳವೆಯನ್ನು ದುರಸ್ತಿಪಡಿಸಿ 16ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ.
ಏನಾಗಿತ್ತು?: ತಾಲೂಕಿನ ಕೌಲಂದೆಹೋಬಳಿಯ ಮಹದೇವನಗರದ ಪರ್ವತಾಂಜನೇಯನ ಗುಡ್ಡದ ಮೇಲೆ ಬೃಹತ್‌ಹೆಡ್ ಒವರ್ ಟ್ಯಾಂಕ್ ನಿರ್ಮಿಸಲಾಗಿದೆ.
5 ಲಕ್ಷಗ್ಯಾಲನ್ ನೀರು ಸಾಮರ್ಥ್ಯದ ಟ್ಯಾಂಕ್‌ಗೆ ಪ್ರತಿದಿನ ಕಬಿನಿ ನದಿ ಮೂಲಕ ನೀರು ತುಂಬಿಸಿ,ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅದೂ ಕೂಡ ದಿನಬಿಟ್ಟು ದಿನನೀರು ಸರಬರಾಜು ಮಾಡಲಾಗುತ್ತಿದೆ.
ಗುಡ್ಡದ ಮೇಲಿರುವ ಹಳೆಯ ವಿದ್ಯುತ್‌ಕಂಬಗಳನ್ನು ಬದಲಾಯಿಸಿ ಹೈಟೆಕ್ ವ್ಯವಸ್ಥೆಮಾಡಲು ಹೊರಟ ವಿದ್ಯುತ್ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿ ಈ ಟ್ಯಾಂಕ್‌ಗೆ ನೀರುಸರಬರಾಜಾಗುವ ಕೊಳವೆ ಒಡೆದುಹೊಗಿತ್ತು. ಹೀಗಾಗಿ ನೀರು ಗುಡ್ಡದಲ್ಲೇ ಸೋರಿಕೆಯಾಗುತ್ತಿರು ವುದರಿಂದ ಗ್ರಾಮಗಳಿಗೆ ನೀರುಪೂರೈಕೆ ಆಗುತ್ತಿಲ್ಲ.
ಕೊಳವೆಗೆ ಹಾನಿಯಾದ ತಕ್ಷಣವೇ ವಿದ್ಯುತ್ ಇಲಾಖೆಯ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಯಾರಿಗೂ ಹೇಳದೆ ಅಲ್ಲಿಂದ ವಾಪಸ್ಸಾಗಿ ಮೌನ ವಹಿಸಿದರು. ಹೀಗಾಗಿಎರಡು ದಿನ ಗ್ರಾಮಸ್ಥರು ನೀರಿಗಾಗಿ ಪರಿತಪಿಸಿದ್ದರು. ಉದಯವಾಣಿಯಲ್ಲಿ ಪ್ರಕಟಗೊಂಡ ಸಮಗ್ರವರದಿಯನ್ನು ನಂಜನಗೂಡು ಗ್ರಾಮೀಣ ನೀರುಸರಬರಾಜು ಅಧಿಕಾರಿ ಚರಿತಾ ಅವರು ಬೆಳಗ್ಗೇಯೇ ವಿದ್ಯುತ್ ಇಲಾಖೆ ಹಾಗೂ ಸೆಸ್ಕ್ಗಗಮನಕ್ಕೆ ತಂದಿದ್ದರು.
ಈ ವರದಿಯನ್ನುಸಂಬಂಧಿಸಿದ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಜೊತೆಗೆ ತ್ವರಿತವಾಗಿಕೊಳವೆಯನ್ನು ದುರಸ್ತಿಪಡಿಸದಿದ್ದರೆ ಇಲಾಖೆ ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಎಚ್ಚೆತ್ತುಕೊಂಡ ವಿದ್ಯುತ್‌ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಂಜೆಯೇ ಕೊಳವೆ ಒಡೆದಿರುವ ಸ್ಥಳಕ್ಕೆಧಾವಿಸಿ, ದುರಸ್ತಿ ಕಾರ್ಯ ಕೈಗೊಂಡು ಬೃಹತ್ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಸಂಪರ್ಕಿಸುವ ವ್ಯವಸ್ಥೆ ಮಾಡಿದರು. ಬಳಿಕ 16 ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿತ್ತು. ಹಬ್ಬದ ದಿನ ನೀರಿಲ್ಲದೆ ಕಂಗಾಲಾಗಿದ್ದ ಜನರು ನೀರು ಬರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.