ಅವೈಜ್ಞಾನಿಕ ರಸ್ತೆ-ಚರಂಡಿ ಕಾಮಗಾರಿ
Team Udayavani, Nov 8, 2017, 12:16 PM IST
ಪಿರಿಯಾಪಟ್ಟಣ: ಕೆಆರ್‌ಡಿಸಿಎಲ್‌ನಿಂದ ನಿರ್ಮಿಸುತ್ತಿರುವ ಪಿರಿಯಾಪಟ್ಟಣ-ಹಾಸನ ರಾಜ್ಯ ರಸ್ತೆ ಮತ್ತು ಚರಂಡಿ ಕಾಮಗಾರಿ ಎಂಜಿನಿಯರ್‌ಗಳ ಬೇಜವಾಬ್ದಾರಿತನದಿಂದ ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ ಎಂದು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸುರಗಳ್ಳಿ ವಿದ್ಯಾಶಂಕರ್ ಆರೋಪಿಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ರಾಜ್ಯ ರಸ್ತೆ ಹಾದು ಹೋಗಿದೆ. ರಾಜ್ಯ ಹೆದ್ದಾರಿಯಲ್ಲಿ ಒಂದು ಸೇತುವೆ ನಿರ್ಮಿಸಿ ಚರಂಡಿ ನಿರ್ಮಿಸದೆ, ಎರಡು ಕಡೆ ನೀರು ಸರಾಗವಾಗಿ ಹರಿಯದೆ ಸಂಗ್ರಹವಾಗುತ್ತಿದೆ. ಹೆಚ್ಚು ನೀರು ವಾಸದ ಮನೆಗಳಿಗೆ ನುಗ್ಗುತ್ತಿದೆ, ಇದರಿಂದ ಸೋಳ್ಳೆಗಳು ಉತ್ಪತ್ತಿಯಾಗುತ್ತಿವೆ ಎಂದು ದೂರಿದ್ದಾರೆ.
ಗ್ರಾಮದೊಳಗೆ ಹಾದು ಹೋಗುವ ರಸ್ತೆಗೆ ಚರಂಡಿ ಮತ್ತು ಕಿರು ಸೇತುವೆ ನಿರ್ಮಿಸದೆ ಹಾಗೆ ಬಿಟ್ಟಿದ್ದು, ನೀರು ಹರಿಯಲು ಜಾಗವಿಲ್ಲದೆ ನಿಂತು ಬಹಳ ತೊಂದರೆಯಾಗಿದೆ. ಕಿರು ಸೇತುವೆ ಮತ್ತು ಚರಂಡಿ ನಿರ್ಮಿಸದಿದ್ದರೆ ಗ್ರಾಮದೊಳಗೆ ಒಂದು ವಾಹನ, ಅಥವಾ ಲಾರಿಗಳು ಹೋಗಲು ಸಾಧ್ಯವಿಲ್ಲ.
ಇಲ್ಲಿ ತಂಬಾಕು ಬೆಳೆಗಾರರು ಹೆಚ್ಚಿರುವುದರಿಂದ ಸೌದೆ ಲಾರಿಗಳು, ರೈತ ಬೆಳೆದ ಜೋಳ ತುಂಬಲು ದಿನಕ್ಕೆ ಹತ್ತಾರು ಲಾರಿಗಳು ಬರುವುದರಿಂದ ಈ ಸೇತುವೆಯನ್ನು ನಿರ್ಮಿಸಲೇಬೇಕು ಎಂದು ಜನಪ್ರತಿನಿಧಿಗಳಿಗೆ ಹಾಗೂ ಕೆಆರ್‌ಡಿಸಿಎಲ್ ಎಂಜಿನಿಯರ್‌ಗಳಿಗೆ ಆಗ್ರಹಿಸಿದ್ದಾರೆ. ಶಿವೇಗೌಡ, ಶಿವನಂಜೇಗೌಡ, ಕುಮಾರ, ಚಂದ್ರೇಗೌಡ, ಲವ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.