ಗ್ರಾಮಗಳಲ್ಲಿ ಅಸ್ಪೃಶ್ಯತಾ ಆಚರಣೆ ನಿಂತಿಲ್ಲ
Team Udayavani, May 24, 2017, 12:45 PM IST
ಕೆ.ಆರ್.ನಗರ: ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತಾ ಆಚರಣೆ ಇನ್ನೂ ನಿಂತಿಲ್ಲ. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಕಾನೂನು ಬಾಹಿರ ನಡುವಳಿಕೆಗಳನ್ನು ತಡೆಯಬೇಕು ಎಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಲೊಕೇಶ್ ಒತ್ತಾಯಿಸಿದರು.
ಪಟ್ಟಣದ ಆರಕ್ಷಕ ಠಾಣೆಯಲ್ಲಿ ನಡೆದ ದಲಿತ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಕೆಲವು ಗ್ರಾಮಗಳಲ್ಲಿ ಹೊಟೇಲ್, ಚೌರದಂಗಡಿ ಮತ್ತು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದ ಸ್ಥಳೀಯ ದಲಿತ ನಾಯಕರನ್ನು ಗುರಿಯಾಗಿಸಿಕೊಂಡ ಸವರ್ಣೀಯರು ಅಂತವರ ವಿರುದ್ಧ ಹಲ್ಲೆ ಮತ್ತು ಪಿತೂರಿ ಮಾಡಿ ದಲಿತರ ಕೂಗನ್ನು ದಮನ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ ದೌರ್ಜನ್ಯಕ್ಕೊಳಗಾಗಿರುವ ದಲಿತ ಕುಟುಂಬಗಳಿಗೆ ಒಂದುವರೆ ವರ್ಷ ಕಳೆದರೂ ಸರ್ಕಾರದಿಂದ ಇನ್ನೂ ಪರಿಹಾರ ಸಿಕ್ಕಿಲ್ಲ. ಪೊಲೀಸ್ ವರದಿಗಳು ವರದಿಗಳಾಗಿಯೇ ಉಳಿದಿವೆ. ಸಂಬಂಧಪಟ್ಟ ಎಸಿ, ಡಿಎಸ್‌ಡಬ್ಲೂ, ಡಿಸಿ ಮತ್ತು ಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಇನ್ನೂ ಪರಿಹಾರ ಸಿಗದೆ ಇರುವುದು ಸರ್ಕಾರ ಮತ್ತು ಕಾನೂನಿನ ಬಗ್ಗೆಯೇ ಸಂಶಯ ಉಂಟಾಗಿದೆ ಎಂದರು.
ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ದಲಿತರ ಸ್ಮಶಾನಗಳು ಒತ್ತುವರಿಯಾಗಿದ್ದು ತುಂಬ ತೊಂದರೆಯಾಗುತ್ತಿದೆ. ಗ್ರಾಪಂ ವ್ಯಾಪ್ತಿಗಳಲ್ಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿಪತ್ರಗಳು ಮತ್ತು ಜಾಗೃತಿ ಮಾಡುವ ಮೂಲಕ ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಎಂಬುದನ್ನು ಮನದಟ್ಟು ಮಾಡಿಸುವಂತಾಗ ಬೇಕು ಎಂದು ಆಗ್ರಹಿಸಿದರು.
ಮುಖಂಡ ಭೇರ್ಯ ಚಂದ್ರಶೇಖರ್ ಮಾತನಾಡಿ, ಸೋಮನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರಿಗೆ ನಿವೇಶನಕ್ಕೆ, ಸ್ಮಶಾನಕ್ಕೆ ಮತ್ತು ಕೆರೆಗೆ ಎಂದು ಸರ್ಕಾರ ಗುರುತಿಸಿ ನಿಗದಿಪಡಿಸಿರುವ ಜಾಗವನ್ನು ಕೆಲವರು ದಬ್ಟಾಳಿಕೆಯಿಂದ ಉಳುಮೆ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ದೌರ್ಜನ್ಯ ಮಾಡುತ್ತಾರೆ ಎಂದು ದೂರಿದರು.
ಸಾಲಿ ಗ್ರಾಮದ ಕಂಠಿಕುಮಾರ್ ಮಾತನಾಡಿ, ಹರದನಹಳ್ಳಿ ಸಮೀಪದ ಬಕ್ರೆಹಳ್ಳದಲ್ಲಿ ಹಾರಂಗಿ ನೀರನ್ನು ಮಾದಾಪುರ ಗ್ರಾಮದವರು ತಡೆದು ನಮ್ಮ ದಲಿತರ ಜಮೀನಿಗೆ ನೀರು ಕೊಡದೆ ತೊಂದರೆ ನೀಡುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮವಹಿಸಿ ಅಲ್ಲದೇ ತಾಲೂಕಿನ ಎಲ್ಲಾ ಭಾಗದಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಮದ್ಯದಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಘರ್ಷಣೆಗಳು ನಡೆಯುತ್ತಿವೆ. ಅಲ್ಲದೇ ಬಾರ್‌ಗಳಲ್ಲಿ ದರಪಟ್ಟಿ ಪಲಕ ಹಾಕುವಂತೆ ಕ್ರಮವಹಿಸಿ ಎಂದು ಒತ್ತಾಯಿಸಿದರು.
15 ವರ್ಷದಿಂದ ಸಾಲಿಗ್ರಾಮ ಗ್ರಾಪಂನಲ್ಲಿ ಎಲಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ರಾಜಕೀಯ ದುರುದ್ದೇಶದಿಂದ ಪಿಡಿಒ ಏಕಾಏಕಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸಂಬಂಧಪಟ್ಟಂತೆ ಎಲ್ಲಾ ಉನ್ನತ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ ನನಗೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿ ಎಂದು ಪ್ರಕಾಶ್ ಎಂಬುವರು ಅವಲತ್ತುಕೊಂಡರು.
ಎಲ್ಲವನ್ನೂ ಆಲಿಸಿದ ತಹಶೀಲ್ದಾರ್ ಜಿ.ಹೆಚ್.ನಾಗರಾಜು ಮಾತನಾಡಿ, ತೊಂದರೆಗೊಳಗಾದವರು ಮತ್ತು ಕೆಲಸವಾಗ ಬೇಕಾದವರು ಸಭೆಗಳನ್ನೇ ಕಾಯದೇ ನೇರವಾಗಿ ಕಚೇರಿಗೆ ಬಂದು ನಮ್ಮ ಗಮನಕ್ಕೆ ತಂದರೆ ತಕ್ಷಣ ಸ್ಪಂದಿಸುತ್ತೇವೆ. ಇಂದು ನಿಮ್ಮಿಂದ ಪ್ರಸ್ಥಾಪವಾಗಿರುವ ದೂರುಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಿಪಿಐ ಬಸವರಾಜು ಮಾತನಾಡಿ, ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಅನುಮಾನ ಪಡದೆ ದೌರ್ಜನ್ಯಕ್ಕೊಳಗಾದವರು ದೂರು ನೀಡಿದರೆ, ಅಂತವರಿಗೆ ಸೂಕ್ತ ರಕ್ಷಣೆ ಮತ್ತು ಕಾನೂನಿನ ನೆರವು ಒದಗಿಸಲಾಗುವುದು. ಅಲ್ಲದೇ ಇಂದು ತಿಳಿದು ಬಂದಿರುವ ದೂರುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ತಾಪಂ ಸದಸ್ಯ ಶ್ರೀನಿವಾಸ್, ಉದಯ ಕರ್ನಾಟಕ ಸಂಘದ ಅಧ್ಯಕ್ಷ ಕೃಷ್ಣನಾಯಕ, ಮುಖಂಡ ಕುಚೇಲ, ಪಿಎಸ್‌ಐಗಳಾದ ಲೋಕೇಶ್, ಮಹೇಶ್, ಬೋರಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.