20 ಹೆದ್ದಾರಿ ಮದ್ಯದಂಗಡಿಗಳು ಎತ್ತಂಗಡಿ
Team Udayavani, Jun 11, 2017, 12:46 PM IST
ಎಚ್ ಡಿ ಕೋಟೆ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದ ಮದ್ಯದಂಗಡಿಗಳನ್ನು ಸುಪ್ರೀಂಕೋರ್ಟ್ ಆದೇಶದನ್ವಯ ಮುಂಬರುವ ಜೂನ್ 30 ಕಡೆಯ ದಿನವಾಗಿದ್ದು, ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೊರಟಿರುವ ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಸದ್ದಿಲ್ಲದೆ ತಾಲೂಕಿನಲ್ಲಿ ಸಿದ್ಧತೆ ಮಾಡಿದ್ದು, ಈಗಾಗಲೇ ಅಂತಹ 20ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ತಾಲೂಕು ಅತಿ ಹೆಚ್ಚು ಕುಡುಕರ ಸಂಖ್ಯೆ ಹೊಂದಿದ್ದು, ಮದ್ಯ ಮಾರಾಟದಲ್ಲಿ ಮೊದಲನೇ ಸ್ಥಾನದಲ್ಲಿದೆ. ಪಟ್ಟಣದಲ್ಲಿ ಸರ್ವೋತ್ಛ ನ್ಯಾಯಾಲಯದ ಆದೇಶದಂತೆ ಎಚ್‌ಡಿ ಕೋಟೆ, ಹ್ಯಾಂಡ್‌ಪೋಸ್ಟ್, ಸರಗೂರು, ಅಂತರಸಂತೆ, ಹೊಮ್ಮರಗಳ್ಳಿ ಸೇರಿದಂತೆ ಮತ್ತಿತರ ಕಡೆ ಇರುವ 20 ಮದ್ಯದ ಅಂಗಡಿಗಳು ಮುಂದಿನ ತಿಂಗಳಿನಿಂದ ತೆರವುಗಳ್ಳುವುದು ನಿಶ್ಚಿತವಾಗಿದೆ.
ಉಳಿದಂತೆ ಸರಗೂರಿನ ನಾಗರಾಜು ಹಾಗೂ ಎಸ್.ಎನ್.ನಾಗರಾಜು, ಬಿದರಹಳ್ಳಿಯ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಕಾರಾಪುರ ಮತ್ತು ಡಿ.ಬಿ ಕುಪ್ಪೆ, ಮಚ್ಚಾರು, ಗ್ರಾಮದಲ್ಲಿರುವ ಬಾರ್‌ಗಳು ಹಾಗೂ ಕಬಿನಿ ಇನ್ನಿರಿನ ರೆಸಾಟ್ ಗಳಿರುವ ಐಶರಾಮಿ ಸರ್ಕಾರಿ ಮತ್ತು ಖಾಸಗಿ ಬಾರ್ ರೆಸ್ಟೋರೆಂಟ್‌ಗಳು ಉಳಿದುಕೊಳ್ಳಲಿವೆ.
ರಾಜ್ಯ ಸರ್ಕಾರವು ತಾಲೂಕು ಸೇರಿದಂತೆ ರಾಜ್ಯದ ಅನೇಕ ಬಾರ್‌ಗಳು ತೆರವುಗೊಳಿಸಬೇಕಾಗಿರುವುದರಿಂದ ಹಾಗೂ ಮದ್ಯದಂಗಡಿಯನ್ನೇ ಅವಲಂಬಿಸಿದ ಸಾವಿರಾರು ಮಂದಿ ಬೀದಿ ಪಾಲಾಗುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳನ್ನು ಜಿಲ್ಲಾ ಹೆದ್ದಾರಿಯನ್ನಾಗಿ ಕೆಲ ರಸ್ತೆಗಳನ್ನು ಡಿ.ನೋಟಿಫಿಕೇಷನ್ ಮಾಡಲು ಮುಂದಾಗುತ್ತಿದೆ.
ಒಂದು ವೇಳೆ ನ್ಯಾಯಾಲಯವು ಸರ್ಕಾರದ ಡಿನೋಟಿಫಿಕೇಷನ್ ಸ್ವೀಕರಿಸಿದರೆ, ಎಚ್.ಡಿ ಕೋಟೆ ಪಟ್ಟಣ ಮತ್ತು ಹ್ಯಾಂಡ್‌ಪೋಸ್ಟ್‌ನಲ್ಲಿರುವ ಮದ್ಯ ದಂಗಡಿಗಳು ಹಾಗೂ ಸರಗೂರಿನ ವ್ಯಾಪ್ತಿಯ 3 ಮದ್ಯದಂಗಡಿಗಳು ಸೇರಿ 11 ಉಳಿದುಕೊಳ್ಳವ ಸಾಧ್ಯತೆಯಿದೆ. ಆದರೆ ನ್ಯಾಯಾಲಯವು ಸರ್ಕಾರ ಮುಂದಾಗಿರುವ ರಸ್ತೆಯ ಡಿ.ನೋಟಿಫಿಕೇಷನ್ನು ಸ್ವೀಕರಿಸುತ್ತದೆಯಾ ಎಂಬುದನ್ನು ಕಾದುನೋಡಬೇಕಾಗಿದೆ.
ಒಟ್ಟಾರೆ ಸುಪ್ರೀಂಕೋರ್ಟ್ ಮಹತ್ವದ ಆದೇಶದಿಂದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಮದ್ಯದ ದೊರೆಗಳು ಎನಿಸಿಕೊಂಡಿದ್ದ ಹಲವು ಪ್ರಭಾವಿ ವ್ಯಕ್ತಿಗಳಿಗೆ ಹಣಕಾಸಿನ ವ್ಯವಹಾರದಲ್ಲಿ ಭಾರೀ ಹಿನ್ನೆಡೆ ಆಗಲಿದೆ.
ನಿಯಮ ಮೀರಿದರೆ ಜೈಲು ಖಚಿತ: ಸುಪ್ರೀಂಕೋರ್ಟ್ ಆದೇಶದನ್ವಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿಗಳು ತಲೆ ಎತ್ತುವಂತಿಲ್ಲ, ಮುಂದೆ ಕಂಡು ಬಂದಲ್ಲಿ ನಿಯಮ ಬಾಹಿರ ಮೊಕದ್ದಮೆ ದಾಖಲಿಸುವುದರ ಜೊತೆಗೆ ಜೈಲು ಶಿಕ್ಷೆ ಖಚಿತ ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
30 ಕಡೆ ದಿನವಾಗಿದ್ದು ಸುಪ್ರೀಂ ಕೋರ್ಟ್ ಅದೇಶ ಪಾಲನೆಗೆ ನಾವೆಲ್ಲಾ ಸಿದ್ಧರಾಗಿದ್ದೇವೆ. ಸರ್ಕಾರ ಡಿ.ನೋಟಿಫಿಕೇಷನ್ ಬಗ್ಗೆ ಹೇಳಿದ್ದು, ಅದು ಆರ್ಡರ್ ಆಗಿ ಬರಬೇಕಲ್ಲಾ, ಬಂದರೆ 20 ಸಾವಿರ ಜನ ಸಂಖ್ಯೆಯುಳ್ಳ ಟೌನ್ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳು ಹಾಗೂ ಸರಗೂರಿನಲ್ಲಿ ಮೂರು ಶಾಪ್‌ಗ್ಳು ಸೇರಿ 20 ಶಾಪ್‌ಗ್ಳು ಉಳಿಯಲಿವೆ. ಒಂದು ವೇಳೆ ಸರ್ಕಾರದ ಡಿ.ನೋಟಿಫಿಕೇಷನ್ ನ್ಯಾಯಾಲಯ ಒಪ್ಪದಿದ್ದರೆ ತಾಲೂಕಿನಲ್ಲಿ 10 ಮದ್ಯದಂಗಡಿಗಳು ಮಾತ್ರ ಉಳಿಯಲಿವೆ.
-ಎಚ್.ಕೆ.ರಮೇಶ್, ಅಬಕಾರಿ ನಿರೀಕ್ಷಕರು, ಎಚ್.ಡಿ.ಕೋಟೆ ತಾಲೂಕು
* ಬಿ.ನಿಂಗಣ್ಣಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.