ಯೂರಿಯಾ ಸುರಿದು ವನ್ಯಪ್ರಾಣಿಗಳ ಬೇಟೆ!
Team Udayavani, Feb 8, 2017, 12:23 PM IST
ಮೈಸೂರು: ಕಾಡಿನ ಸಸ್ಯಹಾರಿ ಪ್ರಾಣಿಗಳನ್ನು ತಿಂದು ನಾಲಗೆ ರುಚಿ ಹತ್ತಿಸಿಕೊಂಡಿರುವ ಕಾಡುಪ್ರಾಣಿಗಳ ಹಂತಕರು, ವನ್ಯಜೀವಿ ಕಾನೂನು ಬಿಗಿಯಾದಷ್ಟೂ ಕಳ್ಳಬೇಟೆಗೆ ಹೊಸ ಹೊಸದಾರಿ ಕಂಡುಕೊಳ್ಳುತ್ತಿದ್ದಾರೆ. ಇಂತಹ ಸಾಲಿಗೆ ಹೊಸದೊಂದು ಸೇರ್ಪಡೆ ಉಪ್ಪು (ಯೂರಿಯಾ) ತಿನ್ನಿಸಿ ಬೇಟೆಯಾಡುವುದು.
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ವ್ಯಾಪ್ತಿಯಲ್ಲಿ ಸಾಲು ಸಾಲು ಹುಲಿಗಳು ಸಾವನ್ನಪ್ಪಿದ್ದು, ಅದರಲ್ಲೂ ಒಂದು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ 300ಕ್ಕೂ ಹೆಚ್ಚು ಉರುಳು ಪತ್ತೆ ಹಚ್ಚಿದ್ದರು. ಇದರ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಜೀವಿ ಪ್ರದೇಶದ ಹೂಗ್ಯಂ ವಲಯದಲ್ಲಿ ಉಪ್ಪು (ಯೂರಿಯಾ) ಬಳಸಿ ವನ್ಯಪ್ರಾಣಿಗಳನ್ನು ಬೇಟೆಯಾಡುವ ಹೊಸ ವಿಧಾನ ಪತ್ತೆಯಾಗಿದೆ.
ವನ್ಯಪ್ರಾಣಿಗಳ ಬೇಟೆಗೆ ಬಳಸುವ ಉರುಳು, ಜಾಟ್ರಾಪ್‌ಗ್ಳ ಸಾಲಿಗೆ ಈಗ ಯೂರಿಯಾ ಸೇರ್ಪಡೆಯಾಗಿದೆ. ಸದ್ದಿಲ್ಲದೆ ನೂರಾರು ವನ್ಯಪ್ರಾಣಿಗಳು ಸಾವನ್ನಪ್ಪುತ್ತಿದ್ದು, ಹಂತಕರು ಕಾನೂನಿನ ಕುಣಿಕೆಯಿಂದಲೂ ಜಾರಿಕೊಳ್ಳಲು ಈ ವಿಧಾನ ಸಹಕಾರಿಯಾಗಿರುವುದು ವನ್ಯ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.
ಬೆಳಕಿಗೆ ಬಂದದ್ದು ಹೇಗೆ?: ಹೂಗ್ಯಂ ವನ್ಯಜೀವಿ ವಲಯಕ್ಕೆ ಸೇರಿದ ನಕ್ಕುಂದಿ ಗ್ರಾಮಕ್ಕೆ ನಾಯಿಗಳು ಕಡವೆ ತಲೆಯನ್ನು ಹೊತ್ತು ತಂದಿದ್ದು, ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ. ನಾಯಿಗಳು ಕಡವೆ ತಲೆಯನ್ನು ಹೊತ್ತು ತಂದಿದ್ದಕ್ಕೆ ಕಾರಣ ಹುಡುಕಲು ಹೊರಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಯೂರಿಯಾ ಬಳಸಿ ಕಡವೆ ಕೊಂದಿರುವ ಅಂಶ ಪತ್ತೆಯಾಗಿದೆ.
ನಕ್ಕುಂದಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಅರಣ್ಯದಂಚಿನ ನೀರಿನ ಸಣ್ಣಹಳ್ಳವೊಂದು ಬರ ಪರಿಸ್ಥಿತಿಯಿಂದ ಒಣಗಿನಿಂತಿದ್ದು, ಅಳಿದುಳಿದ ನೀರಿಗೆ ಉಪ್ಪು (ಯೂರಿಯಾ) ಸುರಿದು ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಹೊತ್ತೂಯ್ಯಲಾಗಿದೆ. ಕಳ್ಳ ಬೇಟೆಗಾರರು ಕಡವೆಯ ತಲೆಯನ್ನು ಅಲ್ಲೇ ಎಸೆದು ಹೋಗಿದ್ದರಿಂದ ನಾಯಿಗಳು ಗ್ರಾಮಕ್ಕೆ ಕಡವೆ ತಲೆ ಹೊತ್ತು ತಂದಿವೆ. ಜತೆಗೆ ಇದೇ ಹಳ್ಳದ ನೀರು ಕುಡಿದ ಗ್ರಾಮದ ಕೆಲ ಮೇಕೆಗಳು ಕೂಡ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರನ್ನು ಅರಸಿ ಕಾಡಂಚಿನ ಹೊಂಡಗಳು ಅಥವಾ ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗುವ ವನ್ಯಪ್ರಾಣಿಗಳನ್ನು ಗುರಿಯಾಗಿಸಿಕೊಂಡು ಈ ವಿಧಾನ ಅನುಸರಿಸಲಾಗುತ್ತಿದೆ. ಜತೆಗೆ ವನ್ಯಪ್ರಾಣಿಗಳ ಬೇಟೆಗಾಗಿಯೇ ಅರಣ್ಯದಂಚಿನ ಗ್ರಾಮಗಳಲ್ಲಿ ಪಾಲಿಥೀನ್ ಹಾಳೆಗಳಲ್ಲಿ ತೊಟ್ಟಿ ಮಾಡಿ ನೀರು ತುಂಬಿಸಿ ಉಪ್ಪು ಸುರಿದು ಪ್ರಾಣಿಗಳನ್ನು ಆಕರ್ಷಿಸಿ, ಬೇಟೆ ಆಡಲಾಗುತ್ತಿದೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯೂರಿಯಾ ಮಿಶ್ರಿತ ನೀರು ಕುಡಿದ ವನ್ಯಪ್ರಾಣಿಗಳು 50 ಅಡಿ ದೂರ ಕೂಡ ಹೋಗಲಾರದೆ ಕುಸಿದು ಬೀಳುತ್ತದ್ದಂತೆ ಹೊತ್ತಯ್ಯಲಾಗುತ್ತಿದೆ. ಉಳಿದೆಲ್ಲ ಬೇಟೆ ವಿಧಾನಗಳಂತೆ ಹೆಚ್ಚು ಸುದ್ದಿಯಾಗದ ಈ ವಿಧಾನದ ಬೇಟೆ ಮಲೆ ಮಹದೇಶ್ವರ ವನ್ಯಜೀವಿ ಪ್ರದೇಶ ಹಾಗೂ ಕಾವೇರಿ ವನ್ಯಜೀವಿ ವಲಯಗಳಲ್ಲಿ ವ್ಯಾಪಕವಾಗಿದೆ. ಕೃಷಿಯಲ್ಲಿ ಇಳುವರಿ ಹೆಚ್ಚಳಕ್ಕೆ ಸರ್ಕಾರ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಯೂರಿಯಾ ಈ ರೀತಿ ವನ್ಯಜೀವಿಗಳ ಪಾಲಿಗೆ ಕುತ್ತು ತರುತ್ತಿದ್ದು, ಈ ವಿಧಾನದ ಬೇಟೆ ತಡೆಗೆ ಅರಣ್ಯ ಇಲಾಖೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಲಿ ಎಂದು ವನ್ಯಜೀವಿ ಪ್ರಿಯರು ಆಗ್ರಹಿಸುತ್ತಾರೆ.
ಅಪಾರ ಪ್ರಮಾಣದಲ್ಲಿ ಯೂರಿಯಾ ಪ್ರಾಣಿಗಳ ದೇಹ ಸೇರಿದರೆ ಪ್ರಾಣಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಆದರೆ ಯೂರಿಯಾ, ಅಮೋನಿಯಂನಿಂದ ಪ್ರೊಟೀನ್ ಆಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಹಸುಗಳಿಗೆ 0.2ನಿಂದ 0.5ವರೆಗೆ ಒಣಹುಲ್ಲಿಗೆ ಸಿಂಪಡಣೆ ಮಾಡಿಕೊಡಲಾಗುತ್ತದೆ. ಇದರಿಂದ ಹೆಚ್ಚು ಹಾಲು ಉತ್ಪತ್ತಿಯಾಗಲಿದೆ.
-ಡಾ.ಪ್ರಸಾದ್ ಮೂರ್ತಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.