ಸರ್ಕಾರಿ ಸೇವೆಯನ್ನು ಜನಸೇವೆಗೆ ಬಳಸಿ
Team Udayavani, Dec 1, 2017, 2:34 PM IST
ಮೈಸೂರು: ಸಾಮಾನ್ಯಜಾnನ, ಹೃದಯವಂತಿಕೆ ಜತೆಗೆ ಸಮಾಜವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ)ಯಲ್ಲಿ ಗುರುವಾರ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿಯಲ್ಲಿರುವ 194 ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳು ಹಾಗೂ ಕೆಪಿಎನಲ್ಲಿ ತರಬೇತಿಯಲ್ಲಿರುವ 36 ಪೊ›ಬೇಷನರಿ ಡಿವೈಎಸ್ಪಿ$ಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ನೆನಪಿನ ಶಕ್ತಿ ಇದ್ದವರು ಮಾತ್ರ ಹೆಚ್ಚು ಅಂಕಗಳಿಸುತ್ತಾರೆ. ಆದರೆ, ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಎಂಬುದು ಇರಲಿದ್ದು, ಅವಕಾಶ ಸಿಕ್ಕವರಿಗೆ ಪ್ರತಿಭೆ ಹೆಚ್ಚಾಗಲಿದೆ. ಹೀಗಾಗಿ ಪ್ರತಿಭೆ ಹೆಚ್ಚಾಗುವಂತಹ ವಾತಾವರಣ ನಿರ್ಮಾಣ ಮಾಡುವುದು ಮುಖ್ಯ ಎಂದರು.
ಕಂದಕ ನಿರ್ಮಾಣವಾಗಿದೆ: ಸಮಾಜದಲ್ಲಿನ ಜಾತಿವ್ಯವಸ್ಥೆಯಿಂದಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಹೀಗಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಸಾಮಾನ್ಯ ಮನುಷ್ಯರು ಕಾಣುತ್ತಿರಬೇಕು, ಇದರಿಂದ ಅವರ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗಲಿದೆ.
ಆದ್ದರಿಂದ ಅಧಿಕಾರಿಗಳು ಜನಸೇವೆ ಮಾಡಲು ಲಭಿಸಿರುವ ದೀರ್ಘಕಾಲದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಅಲ್ಲದೆ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ಜತೆಗೆ ಮಾನವೀಯ ನೆಲೆಗಟ್ಟಿನಲ್ಲಿ ಜನರಿಗೆ ಯಾವ ರೀತಿಯಲ್ಲಿ ನೆರವಾಗಬೇಕು ಎಂಬುದನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.
ಆತ್ಮಸ್ಥೈರ್ಯ ಹೆಚ್ಚಲಿದೆ: ಮೊದಲ ಬಾರಿಗೆ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳೊಂದಿಗೆ ಇಂತಹ ಸಂವಾದ ನಡೆದಿದ್ದು, ಈ ರೀತಿ ಸಂವಾದದಿಂದ ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಲೋಕಸೇವಾ ಆಯೋಗದ ಮೇಲೆ ಬಹಳ ಟೀಕೆ ಬರುತ್ತಿದ್ದು, ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಮೇಲೆ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕೆಲವು ಬಾರಿ ಹಣ ಹಾಗೂ ಶಿಫಾರಸಿನಿಂದ ಅರ್ಹರಿಗೆ ಹುದ್ದೆಗಳು ಸಿಗದಂತಾಗಲಿದ್ದು, ಹೀಗಾಗಿ ನಮ್ಮ ಸರ್ಕಾರ ಸುಧಾರಣೆ ತಂದು ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಆಯೋಗದ ಶಿಫಾರಸು ನೀಡಿದ ನಂತರ ನಿಮಗೆ ಹುದ್ದೆ ಸಿಕ್ಕಿದೆ. ಈ ಹಿಂದೆ ಲಿಖೀತ ಪರೀಕ್ಷೆಯ ಅಂಕಗಳು ಪರೀûಾರ್ಥಿಗಳಿಗೆ ತಿಳಿಯುತ್ತಿತ್ತು.
ಆದರೆ, ಈ ಬಾರಿ ಸಂದರ್ಶನಕ್ಕೆ ಹೋಗುವವರೆಗೂ ಅಂಕಗಳು ತಿಳಿಯುವುದಿಲ್ಲ. ಹೀಗಾಗಿ ಈ ಬಾರಿ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕ ಡಾ.ಸಂದೀಪ್ ದವೆ, ಐಜಿಪಿ ವಿಪುಲ್ ಕುಮಾರ್ ಇನ್ನಿತರರು ಹಾಜರಿದ್ದರು.
ಜಸ್ಟ್ ಪಾಸ್ ಆದರೂ ಯಶಸ್ವಿಯಾದೆ: ಸಿಎಂ
ವಕೀಲರಿಗೆ ಅಂಕಕ್ಕಿಂತ ಸಾಮಾನ್ಯಜ್ಞಾನ ಮುಖ್ಯ. ನಾನು ಸೀರಿಯಸ್ ಆಗಿ ಲಾ ಪ್ರಾಕ್ಟೀಸ್ ಮಾಡದಿದ್ದರೂ ಯಶಸ್ವಿ ಲಾಯರ್ ಆದೆ. ಪರೀಕ್ಷೆಯಲ್ಲಿ ತಾನು ಜಸ್ಟ್‌ಪಾಸ್ ಆಗಿದ್ದೆ, ತನ್ನೊಂದಿಗೆ ರ್‍ಯಾಂಕ್ ಪಡೆದವನು ಕೆಲಸ ಬಿಟ್ಟು ಬೇರೆಡೆ ಹೋದ. ಹೀಗಾಗಿ ಸಾಮಾನ್ಯಜಾnನ, ಹೃದಯವಂತಿಕೆ ಹಾಗೂ ಸಮಾಜವನ್ನು ಅರ್ಥಮಾಡಿಕೊಂಡಿದ್ದೇ ಆದಲ್ಲಿ ಯಾವುದೇ ವೃತ್ತಿ ಹಾಗೂ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಆದ್ದರಿಂದ ನೀವೂ ಇದನ್ನೇ ಒಂದು ಉದಾಹರಣೆಯಾಗಿ ತೆಗದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಹೊಟ್ಟೆ ಪಾಡಲ್ಲ, ಜನಸೇವೆ
ಸರ್ಕಾರಿ ಸೇವೆ ಎಂಬುದು ಹೊಟ್ಟೆಪಾಡಿಗಾಗಿ ಅಲ್ಲ, ಜನಸೇವೆಗೆ. ಹೀಗಾಗಿ ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಕೆಲಸ ಮಾಡಿ. ನೀವು ಒಮ್ಮೆ ಈ ಕೆಲಸಕ್ಕೆ ಸೇರಿದರೆ 30 ವರ್ಷ ಜನಸೇವೆ ಮಾಡಲು ಅವಕಾಶವಿರುತ್ತದೆ. ಆದರೆ, ರಾಜಕಾರಣಿಗಳು ಪ್ರತಿ 5 ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ, ತಮ್ಮ ಅಧಿಕಾರವನ್ನು ರಿನಿವಲ್ ಮಾಡಿಸಿಕೊಳ್ಳಬೇಕು. ಅವರು ಒಪ್ಪಿದರೆ ಮುಂದೆ ಬರುತ್ತೇವೆ, ಇಲ್ಲವಾದರೆ ಮನೆಗೆ ಹೋಗುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.